ಕೇರಳದ ಕ್ಯಾಲಿಕಟ್ ಜಿಲ್ಲೆಯಲ್ಲಿ ನಿಫಾ ವೈರಸ್ ಅಬ್ಬರ ಹೆಚ್ಚಾಗಿರುವುದರಿಂದ 7 ರಿಂದ 8 ಪ್ರಕರಣಗಳು ಅಧಿಕೃತವಾಗಿ ದಾಖಲಾಗಿರುವುದರಿಂದ ಕ್ಯಾಲಿಕಟ್ ನಲ್ಲಿ ಶಿಕ್ಷಣ ಸಂಸ್ಥೆಗಳು, ಪ್ರಾರ್ಥನಾಲಯಗಳು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ನಿಫಾ ವೈರಸ್ ಇದೀಗ ವಿದೇಶಕ್ಕೆ ತೆರಳುವ ಕೇರಳಿಯನ್ನರಿಗೆ ಶಾಕ್ ನೀಡಿದ್ದು, ಕ್ವಾರಂಟೈನ್ ಜಾರಿಗೊಳಿಸಿದೆ ಎಂಬ ಸುದ್ದಿ ಹೊರಬಿದ್ದಿದೆ.
ನರ್ಸಿಂಗ್ ಕೆಲಸಕ್ಕೆ ತೆರಳಿದ್ದ ಎಂಟು ಮಂದಿ ಕೇರಳಿಯನ್ನರಿಗೆ ಜರ್ಮನಿಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಜರ್ಮನಿಯಲ್ಲಿ ಕೇರಳದಿಂದ ಬರುವ ಪ್ರಯಾಣಿಕರಿಗೆ ಹಾಗೂ ಕೆಲಸಕ್ಕೆ ಬರುವವರಿಗೆ ಕ್ವಾರಂಟೈನ್ ನಲ್ಲಿ ಇರಿಸಿಯೇ ಆನಂತರದ ಪ್ರಕ್ರಿಯೆಗೆ ಚಾಲನೆ ನೀಡುವುದು ಎಂಬ ಸಂಗತಿ ಹೊರಬಿದ್ದಿದೆ. ಜರ್ಮನಿಯ ಈ ನಿರ್ಧಾರ ಕೇರಳಿಯನ್ನರಿಗೆ ಶಾಕ್ ನೀಡಿದ್ದು, ಬೇರೆ ರಾಷ್ಟ್ರಗಳು ಜರ್ಮನಿಯ ನಿರ್ಧಾರದಂತೆ ಮಾಡುತ್ತದೋ ಅನ್ನುವ ಆತಂಕ ಎದುರಾಗಿದೆ.
ಇದೀಗ ಎರಡು ಮೂರು ದಿನಗಳಿಂದ ಕ್ಯಾಲಿಕಟ್ ನಲ್ಲಿ ಯಾವುದೇ ಹೊಸ ನಿಫಾ ವೈರಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ಆತಂಕದಿಂದ ದೂರವಾಗಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಕ್ಯಾಲಿಕಟ್ ನಲ್ಲಿ ನಿಫಾ ಹತೋಟಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.