ಕಾಟಿಪಳ್ಳ: ಜಿ.ಹುಸೇನ್ ಬಾವ (ರೆಡಕ್ ಬಾವಾ) ವಿಧಿವಶ

ಕರಾವಳಿ

ಕಾಟಿಪಳ್ಳ 2 ನೇ ಬ್ಲಾಕ್ ನಿವಾಸಿಯಾಗಿರುವ ಜಿ. ಹುಸೇನ್ ಬಾವಾ ಇಂದು ಸಂಜೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ಥಳೀಯವಾಗಿ ರೆಡಕ್ ಬಾವಾ ಎಂದೇ ಪರಿಚಿತರಾಗಿದ್ದರು.

ಪಣಂಬೂರು ಮುಸ್ಲಿಂ ಜಮಾಹತ್ ಕಮಿಟಿ ಸದಸ್ಯರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಸ್ಥಳೀಯವಾಗಿ ಸಮಾಜ ಸೇವೆಯ ಮೂಲಕ ಖ್ಯಾತಿಗೊಳಗಾಗಿದ್ದರು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗಮನಾರ್ಹವಾದ ಮತಗಳನ್ನು ಪಡೆದಿದ್ದರು.