ಅಬ್ಬಬ್ಬಾ.. ತಲೆ ಎತ್ತಿದೆ ಕೆಲವು ಅಕ್ರಮ ಮಸಾಜ್ ಸೆಂಟರ್’ಗಳು.! ಸಲೂನ್, ಸ್ಪಾ ಹೆಸರಲ್ಲಿ ಚರ್ಮದಂಧೆ.!

ಕರಾವಳಿ

ಬುದ್ದಿವಂತರ ಜಿಲ್ಲೆಗೊಂದು ಕಪ್ಪು ಚುಕ್ಕೆ.!

ನಗರದ ಕೆಲವು ಕಡೆಗಳಲ್ಲಿ ನಾಯಿಕೊಡೆಗಳಂತೆ, ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ಹಲವು ಮಸಾಜ್ ಸೆಂಟರ್ ಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬಾಗಿಲು ತೆಗೆದಿರುವ ಮಸಾಜ್ ಸೆಂಟರ್ ಗಳ ಕಥೆ ಬರೆಯುವುದಾದರೆ ಅದೊಂದು ಕಾದಂಬರಿಯಾದೀತು. ಕಟ್ಟಡದೊಳಗೆ ನಡೆಯುತ್ತಿರುವುದು ಅಪ್ಪಟ ಸೆಕ್ಸ್ ದಂಧೆ. ಒಂದೊಂದು ಮಸಾಜ್ ಸೆಂಟರ್ ನೊಳಗಡೆ ಏಳೆಂಟು ರೂಮುಗಳಿದ್ದು, ಐದಾರು ಚೆಂದುಳ್ಳಿ ಚೆಲುವೆಯರನ್ನಿಟ್ಟು ದಂಧೆ ನಡೆಸಲಾಗುತ್ತಿದೆ. ಮಸಾಜ್ ‌ಹೆಸರಿನಲ್ಲಿ ಅಲ್ಲಿ ನಡೆಯುತ್ತಿರುವುದು ಅಪ್ಪಟ ಸೆಕ್ಸ್. ಹುಡುಗನೊಬ್ಬ ಬಟ್ಟೆ ಬಿಚ್ಚಿ ಬೆತ್ತಲಾಗಿ ಮಲಗಿರುತ್ತಾನೆ. ಹುಡುಗಿಯೊಬ್ಬಳು ಉಬ್ಬು ತಗ್ಗುಗಳನ್ನು ಕಾಣುವಂತೆ ಅರ್ಧಂಬರ್ಧ ಡ್ರೆಸ್ ಹಾಕಿಕೊಂಡು ಹುಡುಗನ ಬಾಡಿಯ ಮೇಲೆ ಕೈಯಾಡಿಸುತ್ತಾರೆ. ಹುಡುಗ ಮಾತ್ರ ನಿಟ್ಟುಸಿರು ಬಿಡುತ್ತಾ ಸುಖ ಪಡೆಯುತ್ತಾನೆ. ಹುಡುಗಿಯ ಕೈ ಹುಡುಗನ ತಾಗಬಾರದ ಜಾಗಕ್ಕೆ ತಾಗಿದರಂತೂ ಅಲ್ಲೊಂದು ಜಂಗಿ ಕುಸ್ತಿ ನಡೆಯುತ್ತದೆ. ಅಪ್ಪಟ ಕಾಮಕೇಳಿಯಾಟದ ದೃಶ್ಯಗಳು ನಡೆಯುತ್ತದೆ.

ಇದು ನಗರದ ಕೆಲವು ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ನೇಮ್ ಬೋರ್ಡ್ ಹಾಕಿಕೊಂಡು ನಡೆಸುವ ಅಕ್ರಮ ಚರ್ಮದಂಧೆ. ಅದರಲ್ಲಿ ಕೆಲವು ಪ್ರಭಾವೀಗಳ ಮಸಾಜ್ ಸೆಂಟರ್ ಗಳು ಇವೆ. ಇವರ್ಯಾರು ಇಲಾಖೆಗೆ ಕ್ಯಾರೇ ಎನ್ನದೇ ಮಸಾಜ್ ದಂಧೆ ನಡೆಸುತ್ತಾರೆ.ಯಾವುದೇ ಪರವಾನಿಗೆ, ಸಂಬಂಧ ಪಟ್ಟ ಇಲಾಖೆಯ ಅನುಮತಿ ಪಡೆಯದೆ ಸ್ಪಾ, ಸೆಲೂನ್ ಹೆಸರಲ್ಲಿ ಅಕ್ರಮ ಚಟುವಟಿಕೆ, ಸಂಬಂದ ಪಟ್ಟವರಿಗೆ ತಿಂಗಳ ಮಾಮೂಲು ಸಂದಾಯ.

ನಾವಿಲ್ಲಿ ಕೆಲವೊಂದು ಮಸಾಜ್ ಸೆಂಟರ್ ಗಳ ಪುರಾಣಗಳನ್ನು ಬಯಲಿಗೆಳೆಯುತ್ತಿದ್ದೇವೆ.ಇಲ್ಲಿ ನಡೆಯುತ್ತಿರುವುದು ಅಪ್ಪಟ ಸೆಕ್ಸ್ ಕರಾಳ ದಂಧೆ. ತೆರೆಮರೆಯಲ್ಲಿ ಬ್ಯೂಟಿ ಪಾರ್ಲರ್, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಮಸಾಜ್ ಪಾರ್ಲರ್ ಗಳು ಗುಪ್ತವಾಗಿ ನಡೆಯುತ್ತಿದೆ. ಮಸಾಜ್ ಪಾರ್ಲರ್ ಗಳೆಂದರೆ ಕೇವಲ ಅದು ಮಸಾಜ್ ಗೆ ಸೀಮಿತವಾಗಿಲ್ಲ. ಇದರ ಸುತ್ತ ದೊಡ್ಡ ಮಾಫಿಯಾ ದಂಡೆ ಇದೆ. ಸುಮಾರು 2000 ದಿಂದ 5000 ತೆತ್ತು ಮಸಾಜ್ ಪಾರ್ಲರ್ ಒಳಗೆ ನುಗ್ಗಿದ್ದರೆ ಎಲ್ಲಾ ರೀತಿಯ ಸುಖ ಅನುಭವಿಸಿ ಹೊರ ಬರಬಹುದಾಗಿದೆ.

ನಗರದ ಕೆಲವು ಗಲ್ಲಿಗಳಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ದಂಧೆಗಳು ಸೇಫಾಗಿ ನಡೆಯುತ್ತದೆ. ಮುಖ್ಯವಾಗಿ ಬಿಜೈ ಕಾಪಿಕ್ಕಾಡ್ ಪ್ಲಾಮಾ ಬಳಿಯಿರುವ ವಿ’ಎಕ್ಸ್ ಕ್ಲುಸಿವ್ ಪ್ರೊಪೆಷನಲ್ ಯುನಿಸೆಕ್ಸ್, ಪಂಪ್ ವೆಲ್ ಬಳಿಯಿರುವ ಎಂಟು ರೂಮ್ ಗಳ ಐಶಾರಾಮಿ ಓಲಿವ್ ಯುನಿಸೆಕ್ಸ್ ಸಲೋನ್ & ಸ್ಪಾ, ಕಲೂನ್ ‘ದ’ ಪ್ರೊಪೆಷನಲ್ ಸಲೂನ್ ಇಬ್ರೊಸ್ ಕಾಂಪ್ಲೆಕ್ಸ್ ಬಳಿ, ವೆಲೆನ್ಸಿಯಾ ಬಳಿಯಿರುವ ಯುನಿಸೆಕ್ಸ್ ಸಲೂನ್ , ಸ್ಟೊಡಿಯೋ ॥ ಸಲೂನ್ & ಸ್ಪಾ, ಕಂಕನಾಡಿಯ ಶಾಲಿಮಾರ್ ಕಟ್ಟಡದಲ್ಲಿರುವ ನ್ಯಾಚುರಲ್, ಬಲ್ಮಠದ ಪೆಟ್ರೋಲ್ ಪಂಪ್ ಬಳಿಯಿರುವ ಯುನಿಸೆಕ್ಸ್, ಕಾರ್ ಸ್ಟ್ರೀಟ್ ಬಳಿಯಿರುವ ಹೈಟೆಕ್ ಯುನಿಸೆಕ್ಸ್ ಇವೆಲ್ಲವೂ ಅಕ್ರಮ ಚಟುವಟಿಕೆಯ ತಾಣವಾಗಿದೆ.
ಯಾವುದೇ ರೀತಿಯ ಅನುಮತಿ ಇಲ್ಲದೆ ಇಂತಹ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಯಾವುದೇ ಕಾನೂನು ಕ್ರಮ ಜರಗುತ್ತಿಲ್ಲ.!? ಇಂತಹ ಅಕ್ರಮ ಮಸಾಜ್ ಸೆಂಟರ್ ಗಳು ನಗರದ ಕೆಲವು ಕಡೆ ತಲೆಯೆತ್ತಿರುವುದು ಕಪ್ಪು ಚುಕ್ಕೆಯಾಗಿದೆ.

ಈ ಎಲ್ಲ ಸ್ಪಾ ಗಳಲ್ಲಿ ಅಪ್ಪಟ ಸೆಕ್ಸ್ ಬ್ರೂಥಲ್ ದಂಧೆ. ಇವಿಷ್ಟೇ ಅಲ್ಲ ನಗರದಲ್ಲಿ ಹಲವು ಮಸಾಜ್ ಸೆಂಟರ್ ಗಳು ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಇವೆಲ್ಲದರ ಪಿನ್ ಟು ಪಿನ್ ಡೀಟೈಲ್ಸ್ ನಿಮ್ಮ ಮುಂದೆ ತರಲಿದ್ದೇವೆ.

ರಾಜಾರೋಷವಾಗಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಮಸಾಜ್ ಸೆಂಟರ್ ಹೆಸರಿನ ಸೆಕ್ಸ್ ದಂಧೆಯನ್ನು ಮಟ್ಟ ಹಾಕಲು ಮಂಗಳೂರು ಹೊಸ ಕಮೀಷನರ್ ಸಾಹೇಬ್ರು,ದಿಟ್ಟತನ ತೋರಿ ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಾಗಿದೆ.