ಡಿವೈಎಫ್ಐ 14 ನೇ ದ.ಕ ಜಿಲ್ಲಾ ಸಮ್ಮೇಳನದ ಲೋಗೋ ಅನಾವರಣ.

ಕರಾವಳಿ

“ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ” ಎಂಬ ಘೋಷಣೆಯಡಿ ಡಿವೈಎಫ್ಐ ಯುವಜನ ಸಂಘಟನೆಯ 14ನೇ ದ.ಕ ಜಿಲ್ಲಾ ಸಮ್ಮೇಳನವು ಅಕ್ಟೋಬರ್ 15 ರಂದು ಮಂಗಳೂರಿನಲ್ಲಿ ನಡೆಯಲಿರುವುದು. ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ ಯುವ ಪ್ರತಿನಿಧಿಗಳು ಭಾಗವಹಿಸಿ ನಾಡಿನ ಜನಸಾಮಾನ್ಯರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಹೋರಾಡುವ, ಶಿಕ್ಷಣದಿಂದ ವಂಚಿತ ಹಾಗೂ ನಿರುದ್ಯೋಗದಿಂದ ಬಳಲುತ್ತಿರುವ ಯುವಜನರ ಸಮಸ್ಯೆಗಳಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವ ಮತ್ತವುಗಳ ವಿರುದ್ಧ ರಾಜಿರಹಿತ ಹೋರಾಟಗಳನ್ನು ಸಂಘಟಿಸುವ ಕುರಿತು ಚರ್ಚಿಸಲು ಡಿವೈಎಫ್ಐ ದ.ಕ ಜಿಲ್ಲಾ ಸಮ್ಮೇಳನವು ನಡೆಯಲಿರುವುದು.

ಇಂದು (21-9-2023) ಡಿವೈಎಫ್ಐ ಕಚೇರಿಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ 14 ನೇ ದ.ಕ ಜಿಲ್ಲಾ ಸಮ್ಮೇಳನದ ಲೋಗೋವನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ವಾಂಮಜೂರು, ಪದಾಧಿಕಾರಿಗಳಾದ ರಫೀಕ್ ಹರೇಕಳ, ನವೀನ್ ಕೊಂಚಾಡಿ, ನಿತಿನ್ ಕುತ್ತಾರ್ , ಆಶಾ ಬೋಳೂರು, ಸುನಿಲ್ ತೇವುಲ, ತಯ್ಯೂಬ್ ಬೆಂಗರೆ, ಶ್ರೀನಾಥ್ ಕಾಟಿಪಳ್ಳ, ಚರಣ್ ಶೆಟ್ಟಿ,‌ ರಿಯಾಝ್ ಮೂಡಬಿದ್ರೆ, ರಿಜ್ವಾನ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು.