ಗಂಡ ಮತ್ತು ಹೆಂಡತಿಯ ನಡುವೆ ನಡೆಯುವ ಯಾವುದೇ ಕೆಲಸವನ್ನು ‘ಅಸ್ವಾಭಾವಿಕ’ ಲೈಂಗಿಕ ಸಂಭೋಗ ಎಂದು ಲೇಬಲ್ ಮಾಡಲಾಗುವುದಿಲ್ಲ: ಮದ್ಯಪ್ರದೇಶ ಹೈಕೋರ್ಟ್

ರಾಷ್ಟ್ರೀಯ

ಮದ್ಯಪ್ರದೇಶ: ವೈವಾಹಿಕ ಅತ್ಯಾಚಾರವನ್ನು ಭಾರತೀಯ ಕಾನೂನು ಪ್ರಸ್ತುತ ಮಾನ್ಯ ಮಾಡದ ಕಾರಣ, ಪತ್ನಿಯೊಂದಿಗೆ ಸಹಮತವಿಲ್ಲದ ‘ಅಸ್ವಾಭಾವಿಕ’ ಲೈಂಗಿಕತೆಗಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಅಡಿಯಲ್ಲಿ ಪತಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.

ಸಾಮಾನ್ಯ ಲೈಂಗಿಕ ಸಂಭೋಗವೆಂದು ಪರಿಗಣಿಸುವುದಕ್ಕಿಂತ ಹೆಚ್ಚಿನದನ್ನು ಗಂಡ ಮತ್ತು ಹೆಂಡತಿಯ ನಡುವೆ ಮಾಡುವ ಯಾವುದೇ ಕೆಲಸವನ್ನು ‘ಅಸ್ವಾಭಾವಿಕ’ ಲೈಂಗಿಕ ಸಂಭೋಗ ಎಂದು ಸ್ಪಷ್ಟವಾಗಿ ಲೇಬಲ್ ಮಾಡಲಾಗುವುದಿಲ್ಲ. ಯಾಕೆಂದರೆ, ವೈವಾಹಿಕ ಸಂಬಂಧವು ಕೇವಲ ಸಂತಾನೋತ್ಪತ್ತಿಗಿಂತ ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದರ ಪರಿಣಾಮವಾಗಿ, ಮಧ್ಯಪ್ರದೇಶ ವಿಧಾನಸಭೆಯ ಹಾಲಿ ಸದಸ್ಯ ಉಮಂಗ್ ಸಿಂಘ್ ರವರ ಪತ್ನಿ ಐಪಿಸಿಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಅಡಿಯಲ್ಲಿ ಅತ್ಯಾಚಾರ ಮತ್ತು ಅಪರಾಧ ಎಂದು ಆರೋಪಿಸಿ ಸಲ್ಲಿಸಿದ್ದ ಪ್ರಥಮ ವರ್ತಮಾನ ವರದಿಯನ್ನು ನ್ಯಾಯಮೂರ್ತಿ ಸಂಜಯ್ ದ್ವಿವೇದಿ ವಜಾಗೊಳಿಸಿದರು.