ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ರಿಂದ ಭ್ರಷ್ಟಾಚಾರ

ಕರಾವಳಿ

ಇದೊಂದು ಧಾರ್ಮಿಕ ಹಾಗೂ ಆರ್ಥಿಕ ಭ್ರಷ್ಟಾಚಾರ; ನ್ಯಾಯವಾದಿ ದಿನೇಶ್ ಹೆಗಡೆ ಉಳೆಪಾಡಿ ಆರೋಪ

ಕಾರ್ಕಳ: ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಕಾರ್ಕಕಳದ ಪರಶುರಾಮ ಮೂರ್ತಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮೂರ್ತಿ ಸ್ಥಾಪನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾಗಿರುವ ದಿನೇಶ್‌ ಹೆಗಡೆ ಉಳೆಪಾಡಿ ಆರೋಪಿಸಿದ್ದಾರೆ.

ಈ ಕುರಿತು ಬರೆದಿರುವ ಅವರು, ಮಾಜಿ ಸಚಿವ ಹಾಗೂ ಹಾಲಿ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಅವರು ಜನರ ಜೀವವನ್ನು ಒತ್ತೆಯಿಟ್ಟು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಪೂರೈಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೊಂದು ಧಾರ್ಮಿಕ ಹಾಗೂ ಆರ್ಥಿಕ ಭ್ರಷ್ಟಾಚಾರವೆಂದು ಅವರು ಕರೆದಿದ್ದಾರೆ.

ಈ ಯೋಜನೆ ಪೂರ್ಣಗೊಳ್ಳುವ ಮೊದಲೇ ಉದ್ಘಾಟಿಸುವ ಮೂಲಕ ಸುನೀಲ್‌ ಕುಮಾರ್‌ ಯೋಜನೆಯ ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ ಅಂದಿನ ಜಿಲ್ಲಾಧಿಕಾರಿಯನ್ನೂ ಹೆದರಿಸಿ ತಮ್ಮ ಕಾರ್ಯವನ್ನು ಸಾಧಿಸಿದ್ದಾರೆಂದು ತಮ್ಮ ಪೋಸ್ಟಿನಲ್ಲಿ ಅವರು ಆರೋಪಿಸಿದ್ದಾರೆ.

ಅವರು ತಮ್ಮ ಪೋಸ್ಟಿನಲ್ಲಿ “ಒಪ್ಪಂದದ ಪ್ರಕಾರ ಗುತ್ತಿಗೆ ದಾರರು ಸಂಪೂರ್ಣ ಗೊಳಿಸಲು ಇನ್ನೂ ಎರಡು ವರ್ಷ ಬಾಕಿ ಇದೆ.(ಈ ದಿನದಿಂದ ). ಸರಕಾರ 14 ಕೋಟಿಯಲ್ಲಿ 3 ಕೋಟಿಯಷ್ಟೇ ಪಾವತಿ ಮಾಡಿತ್ತು.(ಉದ್ಘಾಟನಾ ಸಮಯದ ವರೆಗೆ )” ಎಂದು ಬರೆದುಕೊಂಡಿದ್ದಾರೆ.

ಆರಂಭಿಕ ಹಂತದ ಕೆಲಸ ನಡೆಯುತ್ತಿರುವ ಥೀಮ್ ಪಾರ್ಕ್ ಅನ್ನು ಉದ್ಘಾಟನೆಗೆ ಸಿದ್ದ ಗೊಳಿಸುವಂತೆ ಸುನಿಲ್ ಕುಮಾರ್ ಅವರು ಉಡುಪಿಯ ಡಿಸಿ ಯವರಿಗೆ ಆದೇಶ ನೀಡುತ್ತಾರೆ. ಅಪೂರ್ಣವಾದ ಕಾಮಗಾರಿಯನ್ನು ಉದ್ಘಾಟನೆಗೆ ಸಜ್ಜುಗೊಳಿಸಲು ಆಗುವುದಿಲ್ಲ ಮತ್ತು ಅದು ಅಪರಾಧ ಕೂಡಾ ಮತ್ತು ಒಂದು ವೇಳೆ ಈ ಹಂತದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಪ್ರವೇಶ ಅವಕಾಶ ನೀಡಿದರೆ ಜೀವ ಹಾನಿ ಆಗುವ ಸಂಭವ ಇದೆ ಎಂದು ಡಿಸಿ ಸಲಹೆ ನೀಡುತ್ತಾರೆ. ನನಗೆ ಚುನಾವಣೆ ಗೆಲ್ಲುವುದು ಮುಖ್ಯ. ಯಾರ ಜೀವ ಹೋಗುತ್ತದೆ ಹೋಗುವುದಿಲ್ಲ ಎಂದು ನನಗೆ ಲೆಕ್ಕಾ ಚಾರ ಹಾಕಿ ಕುಳಿತುಕೊಳ್ಳಲು ಸಮಯ ಇಲ್ಲ. ನೀವು ಉದ್ಘಾಟನೆಗೆ ತಯಾರು ಗೊಳಿಸದೇ ಇದ್ದರೆ ನಿಮ್ಮನ್ನು ಲಾಭ ಇಲ್ಲದ ಇಲಾಖೆಗೆ transfer ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ.

ಯೋಜಿತ ಪರಶುರಾಮನ ಮೂರ್ತಿಯಲ್ಲಿ ಕೊಡಲಿ ಬಹು ಮುಖ್ಯವಾದ ಮತ್ತು ಆಕರ್ಷಣೀಯ ಅಂಗ. ಮೂರ್ತಿಯ ಎತ್ತರಕ್ಕೆ ಅನುಗುಣವಾಗಿ ಅದರ ಕೈ ಮತ್ತು ಕೊಡಲಿಯ ಬಾರ 1.5 ಟನ್ ತೂಕ.ಇಷ್ಟು ತೂಕದ ಭಾರವನ್ನು ಹೊರಲು ಮೂರ್ತಿಗೆ ಭೂಮಿಯ ಅಡಿ ಭಾಗದಿಂದ ಆಧಾರ ಸ್ತ0ಬ ವನ್ನು ನಿರ್ಮಿಸಬೇಕು.

ಇದು ಬಹು ನಾಜೂಕಾದ ಮತ್ತು ವೈಜ್ಞಾನಿಕ ಲೆಕ್ಕಾಚಾರದಲ್ಲಿ ನಿರ್ಮಾಣಮಾಡಬೇಕಾದ ಕೆಲಸ. ಇದನ್ನು ಮಾಡಲು ನೆಲದಿಂದ ಕಾಲಿನ ಒಳಭಾಗದಿಂದ ಕಂಬವನ್ನು ನಿರ್ಮಿಸಿ (piller ) ಕೈ ಮತ್ತು ಕೊಡಲಿಗೆ ಆಧಾರವನ್ನು ನೀಡಬೇಕು. ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಗಾಳಿ ಮಳೆಗೆ ಆಯ ತಪ್ಪಿ ಕೆಳಗೆ ಉರುಳುವ ಸಾಧ್ಯತೆಯೇ ಜಾಸ್ತಿ. ಇದರಿಂದ ಆಸುಪಾಸಿನ ಜನರ ಆಸ್ತಿಗೆ ಮತ್ತು ಪ್ರವಾಸಿ ಜನರ ಜೀವ ಹಾನಿ ಉಂಟಾಗುವ ಸಾಧ್ಯತೆ ಇದೆ.
ಸುನಿಲ್ ಕುಮಾರ್ ರವರ ಮಾತಿಗೆ ಗುಟ್ರಿಗೆದಾರರು ವಿರೋಧ ವ್ಯಕ್ತ ಪಡಿಸುತ್ತಾರೆ. ತನ್ನ ಮಾತನ್ನು ಕೇಳದ ಗುತ್ತಿಗೆದಾರರನ್ನು ಪಕ್ಕಕ್ಕೆ ಸರಿಸಿ ಸುನಿಲ್ ಕುಮಾರ್ ಇಡೀ ಥೀಮ್ ಪಾರ್ಕ್ ನ ಕೆಲಸವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಾರೆ. ನಿರ್ಮಾಣ ಹಂತದಲ್ಲಿ ಇದ್ದ ಕೆಲಸವನ್ನು ತನ್ನ ಆಪ್ತರ ಸುಪರ್ದಿಗೆ ನೀಡುತ್ತಾರೆ.

ಪರಶುರಾಮ ಮೂರ್ತಿಗೆ ಲೋಹದ ಬದಲು ಫೈಬರ್ ವಸ್ತುವನ್ನು ಬಳಸುತ್ತಾರೆ. ಮೂರ್ತಿಯ ಬಹು ಮುಖ್ಯವಾದ ಮತ್ತು ಧಾರ್ಮಿಕ ನಂಬಿಕೆಯ ಭಾಗವಾದ ಕೈ ಮತ್ತು ಕೊಡಲಿಯನ್ನು ಫೈಬರ್ ನಿಂದ ನಿರ್ಮಿಸಿ ತನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಣದಿಂದ ಉದ್ಘಾಟನೆ ಗೊಳಿಸುತ್ತಾರೆ.
ಉದ್ಘಾಟನೆ ಮಾಡುವಾಗ ಇದನ್ನು 14 ಕೋಟಿಯಲ್ಲಿ ನಿರ್ಮಿಸಲಾಗಿದೆಯೆಂದೂ, ಹಿಂದೂ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಲೋಹದಿಂದ ನಿರ್ಮಿಸಲಾಗಿದೆಯೆಂದೂ ನಮ್ಮ ಸುನಿಲ್ ಕುಮಾರ್ ರವರು ಘೋಷಿಸುತ್ತಾರೆ.

ಇದೀಗ ಈ ಥೀಮ್‌ ಪಾರ್ಕ್‌ ಸುತ್ತ ಅನುಮಾನದ ಹುತ್ತಗಳೇ ಮೂಡಿದ್ದು, ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಕುರಿತು ತನಿಖೆ ನಡೆಯಬೇಕೆಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಸರ್ಕಾರ ಯಾವುದೇ ತನಿಖೆಗೆ ಮುಂದಾಗಿಲ್ಲ. ಹಾಗೂ ಈ ಕುರಿತು ಇದುವರೆಗೆ ಯಾವುದೇ ದೂರು ಕೂಡಾ ದಾಖಲಾಗಿಲ್ಲ