ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು – ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪ್ರತಿಭಟನಾ ಧರಣಿ

ಕರಾವಳಿ

ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿಗಳ ಸಹಿತ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ಧರಣಿಯನ್ನು ಇಂದು ವಾಮಂಜೂರು ಜಂಕ್ಷನ್ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಈ ಧರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ದಕ ಜಿಲ್ಲೆ ಮುಂದುವರೆದ ಜಿಲ್ಲೆಯಾಗಿದ್ದು ಈ ಜಿಲ್ಲೆಯ ಧಣಿಕರ ಜೇಬು ತುಂಬಿಸುವ ಒಟ್ಟು 6 ಖಾಸಗೀ ಮೆಡಿಕಲ್ ಕಾಲೇಜುಗಳು ಈ ಜಿಲ್ಲೆಗೆ ಬಂದರೂ ಕೂಡ ಬೇಡ ಮಧ್ಯಮ ವರ್ಗದ ಜನತೆಗೆ ಸಹಕಾರಿಯಾಗುವಂತೆ ಒಂದು ಮೆಡಿಕಲ್ ಕಾಲೇಜನ್ನು ಸ್ಥಾಪಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಸಾಧ್ಯವಾಗಲಿಲ್ಲ ಇದು ನಮ್ಮ ಜನ ಪ್ರತಿನಿದಿಗಳಿಗಿರುವ ಜನಪರ ಕಾಳಜಿಯನ್ನು ಸೂಚಿಸುತ್ತದೆ. ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವು ಶಾಸಕ ಭರತ್ ಶೆಟ್ಟರ ಕ್ಷೇತ್ರವಾಗಿದ್ದು ತಮ್ಮ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿದ ಗುರುಪುರ ಹೋಬಳಿಯನ್ನು ಶಾಸಕರು ಮರೆಯಬಾರದು ಈ ಹೋಬಳಿಗೊಂದು 40 ಬೆಡ್ ಗಳ ಸಮುದಾಯ ಆಸ್ಪತ್ರೆಯನ್ನು ಮತ್ತು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಶಾಸಕ ಭರತ್ ವಿಧಾನ ಸೌಧದಲ್ಲಿ ಧ್ವನಿಯೆತ್ತಬೇಕು ಇನ್ನಾದರೂ ಜನಪರ ರಾಜಕಾರಣದತ್ತ ಗಮನಹರಿಸಬೇಕು ಎಂದರು.

ಕಾಂಗ್ರೇಸ್ ನ ವಾಮಂಜೂರು ವಲಯ ಅಧ್ಯಕ್ಷರಾದ ರಾಜ್ ಕುಮಾರ್ ಶೆಟ್ಟಿ ತಿರುವೈಲು ಗುತ್ತು ಇವರು ಮಾತನಾಡುತ್ತಾ ಈ ಜನತೆಯ ಆರೋಗ್ಯದ ಹಕ್ಕನ್ನು ಉಳಿಸಿಕೊಳ್ಳಲು ಒಂದು ಸಂಘಟಿತ ಹೋರಾಟದ ಅವಶ್ಯಕತೆ ಇದ್ದು ಈ ಉದ್ದೇಶಕ್ಕಾಗಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಹೋರಾಟಕ್ಕೆ ಮುಂದಾಗಿದ್ದು ಇಂತಹ ಹೋರಾಟಗಳು ಯಶಸ್ಸು ಸಿಗುವವರೆಗೂ ಮುಂದುವರೆಯಬೇಕಿದೆ ಎಂದರು.ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು ಇದರ ಸಂಚಾಲಕರಾದ ಅಶೋಕ್ ಬಂಗೇರ ಸಿಲ್ವರ್ ಕೋಡಿ ಇವರು ಮಾತನಾಡುತ್ತಾ ಜಿಲ್ಲೆಯ ಬಡ ಮದ್ಯಮ ವರ್ಗದ ಏಕೈಕ ಆಶಾಕಿರಣ ವೆನ್ಲಾಕ್ ಆಸ್ಪತ್ರೆಯು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬದಲಾಗಬೇಕಿತ್ತು ಅದು ಬದಲಾಗದೇ ಇರುವುದಕ್ಕೆ ದಕ್ಷಿಣ ಕನ್ನಡದ ಮೆಡಿಕಲ್ ಮಾಫಿಯಾಗಳೇ ಕಾರಣ ಎಂದರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಆಫ್ ಇಂಡಿಯ ಇದರ ದಕ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಮಾತನಾಡುತ್ತಾ ತಿರುವೈಲು ಗ್ರಾಮದಲ್ಲಿ ಕುಡುಪು ಹೆಸರಿನ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಈ ಆರೋಗ್ಯ ಕೇಂದ್ರವು ಕುಡುಪು ಗ್ರಾಮದ ವ್ಯಾಪ್ತಿಗೆ ಆಗಲಿ ಅಥವಾ ತಿರುವೈಲು ಗ್ರಾಮದ ವ್ಯಾಪ್ತಿಗೆ ಆಗಲಿ ಬರುವುದಿಲ್ಲ ಮತ್ತು ಇದರಿಂದಾಗಿ ಈ ಪ್ರದೇಶದ ಜನತೆ ದೂರದ ಶಕ್ತಿನಗರದ ಆರೋಗ್ಯ ಕೇಂದ್ರವನ್ನು ಅವಲಂಬಿಸುವಂತಾಗಿದೆ ಎಂದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳಜ್ಯೋತಿ ಘಟಕದ ಅಧ್ಯಕ್ಷರಾದ ಕರಿಯ ಕೆ, ಕಾರ್ಮಿಕ ಮುಖಂಡರಾದ ಕೆ ಗಂಗಯ್ಯ ಅಮೀನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಯೂಸುಫ್ ಉಳೈಬೆಟ್ಟು, ರೈತ ಮುಖಂಡರಾದ ನೋಣಯ್ಯ ಗೌಡ ಮೊದಲಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಬಾವಾ ಪದರಂಗಿ, ಅಬ್ದುಲ್ ಖಾದರ್ ಇಡ್ಮ, ಜೈ ಶಂಕರ್ ಮಿತ್ರ ಮಂಡಳಿಯ ಅಧ್ಯಕ್ಷರಾದ ದಿವಾಕರ್ ಆಚಾರ್ಯ, ಮುಖಂಡರಾದ ವಸಂತ ಆಚಾರ್ಯ,ರಾಜೀವ್ ಸಾಲ್ಯಾನ್,ಹೊನ್ನಯ ಅಂಚನ್, ವಾಮಂಜೂರು ಪ್ರಾದೇಶ ಸಮಾನ ಮನಸ್ಕರಾದ ಅಶೋಕ್ ರೈ, ಸದಾನಂದ ಭಾಗವತರು,ವಿಠಲ ಪತ್ರಕೋಡಿ, ಹರಿಪ್ರಸಾದ್ ಆಳ್ವ ಓಂಕಾರ ನಗರ‌ , ಶರೀಪ್ ಉಳಾಯಿಬೆಟ್ಟು,ಇಸಾಕ್ ಉಳೈಬೆಟ್ಟು.ಬಿಲ್ಲವ ಮುಖಂಡರಾದ ಮಾರಪ್ಪ ಪೂಜಾರಿ, ಸದಾನಂದ ಪೂಜಾರಿ, ಕಾಂತಪ್ಪ ಪೂಜಾರಿ ರೈತ ಮುಖಂಡರಾದ ಬಾಬು ಸಾಲ್ಯಾನ್, ಬೋಜ ಪೂಜಾರಿ ದೇವಸ, ಲಿಂಗಪ್ಪ ಸಾಲ್ಯಾನ್, ವೆಂಕಪ್ಪ ಪೂಜಾರಿ. ಕಾರ್ಮಿಕ ಮುಖಂಡರಾದ ಹೊನ್ನಯ ಅಂಚನ್, ಹೊನ್ನಯ ಅಮೀನ್, ಜಯಶೀಲ ಕರ್ಕೇರಾ,ಭವಾನಿ ಗಂಗಯ ಅಮೀನ್, ಯುವಜನ ಮುಖಂಡರಾದ ಮಹೇಶ್, ದಿನೇಶ್ ಬೊಂಡಂತಿಲ, ಪ್ರವೀಣ್ ಕುಮಾರ್ ಮಜಲು, ಚಂದ್ರಹಾಸ್ ಕಲ್ಲುಡೇಲು. ನೆತಾಜಿ ರಿಕ್ಷಾ ಪಾರ್ಕ್ ನ ಶೇಖರ ಕೆತ್ತಿಕಲ್ಲು ಮಹಿಳಾ ಕಾಂಗ್ರೆಸ್ ನ ಜಯಂತಿ ಜೈ ಶಂಕರ್ ಮಾತ್ರ್ ಮಂಡಳಿಯ ಅಧ್ಯಕ್ಷರಾದn ಪುಷ್ಪ ಮುಖಂಡರಾದ ಸಂಧ್ಯಾ,ಶೈಲಜಾ ಮತ್ತು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಧಾಕೃಷ್ಣ ಕಟಿಂಜ ಮೊದಲಾದವರು ಉಪಸ್ಥಿತರಿದ್ದರು.