ಮಂಗಳೂರು: ನಗರದಲ್ಲಿ ರೆವೆನ್ಯೂ ಡಾಕ್ಯುಮೆಂಟ್ಸ್ ಪ್ಯಾಬ್ರಿಕೇಟಿಂಗ್ ಧಂದೆ, ನಕಲಿ ವೃತ್ತಿದಾರರಿಂದ ಕೃತ್ಯಗಳು.

ಕರಾವಳಿ

ಇರುಳಿನಲ್ಲಿ ನಡೆಯುವ ಅವ್ಯವಹಾರ ಡೀಲ್..ಡೀಲ್.!

ಮಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ಅಕ್ರಮ ಸ್ವಾಧೀನ, ಪಾಳು ಭೂಮಿ, ಖಾಸಗಿ ಜಮೀನುವಿನೊಂದಿಗೆ ಒತ್ತುವರಿ, ಅಸಮರ್ಪಕ ಕಂದಾಯ ದಾಖಲೆ, ವಾರೀಸು ರಹಿತ ಭೂಮಿ, ಮರಣ ಸಮರ್ಥನ ಪತ್ರದ ಅಲಭ್ಯತೆ, ಒಡೆತನದಾರರ ವಲಸೆ, ಭೂ ಸುಧಾರಣೆ ಆದೇಶ ರಹಿತತೆ, ವಲಯ ನಿರ್ಭಂದಿತ, ಭೂ ಪರಿವರ್ತನೆ ಕಟ್ ಆಫ್ ಡೇಟ್ ಸಮಸ್ಯೆ, ಅಧಿಕ ವಿಸ್ತೀರ್ಣ ಭೂ ಪರಿವರ್ತನೆ, ದಂಡ ಪಾವತಿ ಸಮಸ್ಯೆ, ಇತ್ಯಾದಿ ಸಂಬಂಧಿತ ಜಮೀನುಗಳು ದ.ಕ.ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ಇರುವುದರಿಂದ, ಇಂತಹ ಭೂಮಿಗಳ ಭೂ ವ್ಯವಹಾರವು ಅದರ ಅಕ್ರಮ ಹಿತಾಸಕ್ತಿದಾರರಿಗೆ ಸಮಸ್ಯೆ ಸೃಷ್ಟಿಯಾದ ಕಾರಣದಿಂದ ನಗರದ ಕೆಲವು ನಕಲಿ ವೃತ್ತಿದಾರರು ‘ ಎಸೋಸಿಯೆಟ್ ‘ ಹೆಸರಿನಲ್ಲಿ ಕಚೇರಿ ತೆರೆದು, ಕಳೆದ ಕೆಲವು ವರ್ಷದಿಂದ ಮೇಲೆ ಸಂಭಂಧಿಸಿದ ಭೂಮಿಯ ನಕಲಿ ಕೈ ಬರಹ ಪಹಣಿ, ಫಾರ್ಮ್ 7 ಫಾರ್ಮ್ 10, ಭೂ ನ್ಯಾಯ ಮಂಡಳಿಯ ಆದೇಶ, ಸರಹದ್ದು ಗಡಿ ಗುರುತು, ಎಫ್.ಎಂ.ಬಿ ಪಹಣಿ ಖಾತೆಯ ಬಲವಂತ ಒಟ್ಟು ಗೂಡಿಸುವಿಕೆ, ಗ್ರಾಮ ಲೆಕ್ಕಾಧಿಕಾರಿ ವರದಿ, ನಕಾಶೆ, ವಿಶೇಷ ಜಿಲ್ಲಾಧಿಕಾರಿ ಕಚೇರಿ ಭೂ ಪರಿವರ್ತನೆ, ನಕಲಿ ಮುನ್ಸಿಪಲ್ ಖಾತಾ ಇತ್ಯಾದಿ ದಾಖಲೆಗಳನ್ನು , ದೃಢೀಕೃತ ಪ್ರತಿಗಳ ಅಕ್ರಮ ಸೀಲ್ ಬಳಸಿ ನಕಲಿ ಪ್ರತಿಯನ್ನು ಸೃಷ್ಟಿಸಿ ಅಧಿಕಾರಿ ಗಳೊಂದಿಗೆ ಶಾಮೀಲುಗೊಂಡು, ಪ್ರಕರಣದ ಕಡತದಲ್ಲಿ ತುರುಕಿಸಿ ಭೂ ದಾಖಲೆಗಳನ್ನು ರೆವೆನ್ಯೂ, ಡಿ. ಡಿ.ಎಲ್.ಆರ್, ಇಲಾಖೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಜಮೀನಿನ ದಾಖಲೆಗಳ ಅಪ್ಡೇಟ್ ಗೊಳಿಸುವಿಕೆ ನಡೆಯುತ್ತಿದೆ.

ಈ ಕೃತ್ಯಕ್ಕೆ ನಗರದಲ್ಲಿ ಕಚೇರಿ ಹೊಂದಿರುವ ಕೆಲವು ನಕಲಿ ವೃತ್ತಿ (ವಕೀಲರ ಹೆಸರಲ್ಲಿ) ನಡೆಸುತ್ತಿರುವ ವೃತ್ತಿದಾರರು, ಗ್ರಾಹಕರಿಂದ ಸೆಂಟ್ಸ್ ಗೆ ಇಷ್ಟೆಂದು ದರ ನಿಗದಿಪಡಿಸಿ ಅಧಿಕಾರಿಗಳಿಗೆ ಪೂರ್ವ ಮಾಹಿತಿ ನೀಡಿಯೇ ನಿಗದಿತ ಸಮಯದೊಳಗಾಗಿ ನಿಯತ್ತಿನಿಂದಲೆ ಕಾರ್ಯ ಪೂರ್ತೀಕರಿಸಿ ಕೊಡುತ್ತಿರುವುದು ವಾಡಿಕೆ ಆಗಿದೆ. ಇತ್ತೀಚೆಗೆ ಇಂತಹುದೇ ಘನಾಂದರಿ ಕಾರ್ಯದಲ್ಲಿ ಎಫ್.ಎಂ.ಬಿ ನಕಾಶೆ ಗಡಿ ಗುರುತು ತಿದ್ದುಪಡಿ ಮಾಡಿ ಉಳ್ಳಾಲ ತಾಲೂಕು ಕುಖ್ಯಾತ ಭೂ ಮಾಪನದಾರನೊಬ್ಬ ವೃತ್ತಿಯಿಂದ ವಜಾಗೊಂಡಿರುತ್ತಾನೆ.

ಅಧಿಕಾರಿಗಳಲ್ಲಿ ಇರುಳಿನಲ್ಲಿ ವ್ಯವಹರಿಸುವ ಇಂತಹ ನಕಲಿ ವೃತ್ತಿದಾರರು ಸಂಬಂಧಿತ ಜಮೀನಿನ ಮಾರ್ಕೇಟ್ ಮೌಲ್ಯದ ಆರ್ಧದಷ್ಟು ಹಣವನ್ನು ಅದರ ಅಕ್ರಮ ಸ್ವಾಧೀನ ದಾರರಿಂದ ಪೀಕಿಸಿ ತಾವು ಮತ್ತು ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತಾರೆ.ಸಹಾಯಕ ಆಯುಕ್ತರ ಕಚೇರಿ, ತಹಶೀಲುದಾರರ ಕಚೇರಿ, ತಾಲೂಕು ಭೂಮಾಪನ ಇಲಾಖೆ, ಭೂದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳ ತಾಂತ್ರಿಕ ಸಲಹೆಗಾರರ ಕಚೇರಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಗಳಲ್ಲಿನ ಅದೆಷ್ಟೋ ಕಡತಗಳಲ್ಲಿ ಇಂತಹ ನಕಲಿ ದಾಖಲೆಗಳು ತುಂಬಿಹೋಗಿದೆ. ಸಂಜೆ ಸಮಯದಲ್ಲಿ ನಕಲಿ ವೃತ್ತಿದಾರರ ಕಚೇರಿಗೆ ಬಂದು ಮೊತ್ತ ಸಂಗ್ರಹ ಮಾಡಿಹೋಗುವ ಅಧಿಕಾರಿಗಳ ಆಪ್ತರು, ಇಂತಹ ನಕಲಿ ವೃತ್ತಿದಾರರ ಕುಟುಂಬ ಸಂಬಂಧಿಗಳಂತೆ ವರ್ತಿಸುತ್ತಾರೆ.ಇಂತಹ ಅಸೋಸಿಯೇಟ್ ಗಳ ಕುಟುಂಬದ ಶುಭ ಕಾರ್ಯಗಳಲ್ಲಿ ಇಂತಹ ಘನ ಮಾನ್ಯಂಧಾರಿ ಅಧಿಕಾರಿ,ಸಿಬ್ಬಂದಿ ಗಳಿಗೆ ದಿನ ವಿಶೇಷ ಪಾರ್ಟಿ ಆಯೋಜನೆ, ರಜಾ ದಿನಗಳಲ್ಲಿ ತಮ್ಮ ಬಿಟ್ಟೀ ಕಾರು ಎಸ್ ಯು ವಿ ಗಳಲಿ ಪಿಕ್ ನಿಕ್ ಕೊಡುಗೆ ನಿರಂತರ ನಡೆಯುತ್ತಿದೆ.

ಕಳೆದ ಕೆಲವು ವರ್ಷಗಳ ಹಿಂದೆ ನಗರದ ಹೊರ ವಲಯದ ದೇರಳಕಟ್ಟೆಯ ಪ್ರತಿಷ್ಠಿತ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮಾಲಕರು, ತಮ್ಮ ಅಧೀನದ ಉದ್ದೇಶಿತ ಆಯುರ್ವೇದ ಶಿಕ್ಷಣ ಸಂಸ್ಥೆಗೆ ಮೀಸಲಿರಿಸಿದ ಕೊಣಾಜೆ ಗ್ರಾಮದಲ್ಲಿನ ಬಹು ವಿಸ್ತೀರ್ಣದ ಖಾಲಿ ಜಮೀನಿನ ಭೂ ದಾಖಲೆಗಳನ್ನು ಸಮರ್ಪಕ ಗೂಳಿಸಲು,ಯಾ ಬಲವಂತ ಒಟ್ಟು ಗೋಡಿಸುವಿಕೆ ಸಮಸ್ಯೆ ಇತ್ಯರ್ಥ ಪಡಿಸಲು ಇಂತಹ ನಕಲಿ ವೃತ್ತಿದಾರರಿರುವ ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ಬಹು ಮಹಡಿ ಕಟ್ಟಡದ ಇಂತಹ ಅಸೋಸಿಯೇಟ್ ಗಳನ್ನು ಸಂಪರ್ಕಿಸಿ ಬಹು ಲಕ್ಷೀಯ ಕೋಟಿ ಹತ್ತಿರದ ಮೊತ್ತದ ವ್ಯವಹಾರ ಕುದುರಿಸಿ ಪೂರಕ ನಕಲಿ ದಸ್ತಾವೇಜುಗಳ ಬೆಳವಣಿಗೆ ಆಗಿರುತ್ತದೆ.

ನಗರದ ಕೆಲವು ಬಹು ಮಹಡಿ ಕಟ್ಟಡ ನಿರ್ಮಾಪಕರು ಕೂಡಾ ಇಂತಹ ನಕಲಿ ವೃತ್ತಿದಾರ ಅಸೋಸಿಯೇಟ್ ಗಳನ್ನು ಸಂಪರ್ಕಿಸಿ ತಮ್ಮ ಕಾರ್ಯ ಸಾಧಿಸಿ ಕೊಂಡಿರುತ್ತಾರೆ. ನಗರದಲ್ಲಿ ಕೆಲವೊಮ್ಮೆ ಮಾನ್ಯತೆ ಹೊಂದಿದ ಕಾನೂನು ವೃತ್ತಿದಾರರೂ ಕೂಡಾ ಕೆಲವೊಮ್ಮೆ ಅಸಾಮಾನ್ಯ ಆದಾಯದ ಆಶೆಯಿಂದ ಇಂತಹ ಅಸೋಸಿಯೇಟ್ ಗಳನ್ನು ಅವಲಂಬಿಸಿ ಪ್ರಯೋಜನ ಪಡೆಯುವುದು,ಯಾ ಕಮಿಷನ್ ಪಡೆದು ಕೊಳ್ಳುವುದು ಇದೆ.ಇಂತಹ ನಕಲಿ ಅಸೋಸಿಯೇಟ್ ವ್ಯಕ್ತಿಗಳು ಆರಂಭದಲ್ಲಿ ಕೆಲವು ವೃತ್ತಿ ನಿರತ ಕಾನೂನು ವ್ಯಕ್ತಿಗಳೊಂದಿಗೆ ಕೆಲಸ ನಿರ್ವಹಿಸಿ ನಂತರ ತಾವೇ ಲೀಗಲ್ ಒಪೀನಿಯನ್ ನೀಡುವ ಮಟ್ಟಕ್ಕೆ ಹಿರಿತನದ ಪದೋನ್ನತಿ ಹೊಂದುವುದು ಸರ್ವೇ ಸಾಮಾನ್ಯ.!ಪ್ರದರ್ಶನಕ್ಕೆ ತಮ್ಮ ಸುಸಜ್ಜಿತ ಕಚೇರಿಯನ್ನು ದಸ್ತಾವೇಜೀಕರಣದ ಕಚೇರಿಯಂತೆ ನಿರ್ಮಿಸಿ, ಪೀಠೋಪಕರಣ, ಪಿಸಿ ಸಿಸ್ಟಮ್, ಲ್ಯಾಪ್ ಟಾಪ್, ನೆಟ್ ಸಂಪರ್ಕ, ಸಿಬ್ಬಂದಿಗಳು, ಸ್ಟೆನೋ ಸಿಬ್ಬಂದಿ ಗಳನ್ನು ಕೂರಿಸಿ ಹಗಲು ವೇಳೆಯಲ್ಲಿ ಸುಭಗರಂತೆ ಪೋಸು ನೀಡುವ ಇಂತಹ ಅಸೋಸಿಯೇಟ್ ಗಳು ತಮ್ಮ ಫಾಬ್ರಿಮೇಟಿಂಗ್ ಚಟುವಟಿಕೆಗಳನ್ನು ರಾತ್ರಿ ಪಾಳಿಯಲ್ಲಿ ಸೃಷ್ಟಿಸುವುದೆ ಅಧಿಕ, ನಕಲಿ ದಸ್ತಾವೇಜುಗಳಿಗೆ ಅಗತ್ಯವಿರುವ ತಾಂತ್ರಿಕ ವ್ಯವಸ್ಥೆಯ ಸುಸಜ್ಜಿತ ಲ್ಯಾಬ್ ಗಳೆ ಇವರ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ.

ಅಂತಹುದರಲ್ಲಿ ನಗರದ ಕೆಲವು ಅಸೋಸಿಯೇಟ್ ಗಳಂತೆಯೆ, ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯಿರುವ ಬಹು ಮಹಡಿ ಕಟ್ಟದಲ್ಲಿನ ಅಸೋಸಿಯೇಟ್ ಕೂಡಾ ಸೇರಿದೆ. ಕಂದಾಯ ಅಧಿಕಾರಿಗಳಿಗೆ ಮತ್ತು ಭೂಮಾಪನ ಸಿಬ್ಬಂದಿಗಳಿಗೆ ಇಂತಹ ಅಸೋಸಿಯೇಟ್ ಗಳ ಮದ್ಯೆ ಬೀಗರ ನೆಂಟಸ್ತಿಕೆ. ಕೊಡು ಕೊಳ್ಳುವಿಕೆಯ ಮಹಾ ಪರಂಪರೆ. ನಗರದ ಮತ್ತು ತಾಲೂಕುಗಳಲ್ಲಿನ ಜನ ಸಾಮಾನ್ಯರ ಅರ್ಜಿಗಳು ಈ ಬ್ರಹ್ಮಾಂಡ ಅಕ್ರಮ ರೆವೆನ್ಯೂ ಡಾಕ್ಯುಮೆಂಟೇಶನ್ ಮದ್ಯೆ ಕೊಚ್ಚಿ ಹೋಗಿ ಎಲ್ಲೂ ಬಿದ್ದು, ಆ ನಂತರ ತಮ್ಮ ಬಡ ಅರ್ಜಿಯ ವಿಲೇವಾರಿಗೆ ಕಚೇರಿಗಳನ್ನು ಸುತ್ತುವುದರ ಬಗ್ಗೆ ಈ ಹಿಂದಿನ ಸುದ್ದಿಯಲ್ಲಿ ವಿವರಿಸಿದ್ದೇವೆ.

ಕಂದಾಯ ಅಧಿಕಾರಿಗಳ ಉನ್ನತ ಅಧಿಕಾರಿಯಾವರಾದ ಮಾನ್ಯ ಜಿಲ್ಲಾಧಿಕಾರಿಯವರು ಇಂತಹ ಅಕ್ರಮ ವೃತ್ತಿದಾರ ಅಸೋಸಿಯೇಟ್, ಏಜೆನ್ಸಿ, ಪೋಡಿ ಒಟ್ಟು ಗೂಡಿಸುವಿಕೆ, ನಕಲಿ ಸೀಲ್ ವ್ಯವಸ್ಥೆ ಗಳನ್ನು ತಹ ಬದಿಗೆ ತರುವ ವ್ಯವಸ್ಥೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.