ಸಿನಿಮಾದಲ್ಲಿ ಹೆಣ್ಣಿನ ಪಾತ್ರ; ನಿಜ ಜೀವನದಲ್ಲೂ ಹೆಣ್ಣಾಗಿ ಬದಲಾದ ಯುವಕ.!

ರಾಷ್ಟ್ರೀಯ

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಲಿಂಗ ಬದಲಾವಣೆ; ಕೆಲವು ಯುವಕರ ಬದುಕನ್ನು ಮೂರಾಬಟ್ಟೆಯಾಗಿಸಿದರೆ, ಇನ್ನು ಕೆಲವು ಕುಟುಂಬಗಳನ್ನು ಕಣ್ಣೀರ ಕೋಡಿಯಲ್ಲಿ ಮುಳುಗಿಸಿದೆ.

ಇಲ್ಲೊಬ್ಬ ಯುವಕ ಸಿನಿಮಾ,ಸೀರಿಯಲ್ ಗಳಲ್ಲಿ ಹೆಣ್ಣಿನ ಪಾತ್ರ ಮಾಡುತ್ತಾ ಹಲವು ಯುವಕರ ನಿದ್ದೆಗೆಡಿಸಿದ ಪಿಂಕಿ ಆಲಿಯಾಸ್ ಸಾಯಿತೇಜ್, ಪ್ರಿಯಾಂಸಾ ಸಿಂಗ್ ಆಗಿ ಬದಲಾಗಿದ್ದಾನೆ.

ಸಾಯಿ ತೇಜ್ ಹುಟ್ಟಿದ್ದು, ಬೆಳೆದಿದ್ದು ಗಂಡಾಗಿ. 2013 ರಲ್ಲಿ ತೆಲುಗಿನ ಖ್ಯಾತ ಕಿರುತೆರೆ ಶೋ ಜಬರ್ದಸ್ತ್ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು. ಆದರೆ ಇಲ್ಲಿ ಸಾಯಿತೇಜ್ ಗೆ ತನ್ನ ಪ್ರತಿಭೆ ತೋರಿಸಲು ಸಿಕ್ಕ ಅವಕಾಶ ಹೆಣ್ಣಿನ ರೋಲ್. ಇದು ಸಾಯಿತೇಜ್ ಬದುಕಿನ ತಿರುವನ್ನೇ ಬದಲಾಯಿಸಿತು.

ಸಾಯಿ ತಮ್ಮ ಶೋ ಗಾಗಿ ಮಾಡಿದ ಲೇಡಿ ಗೆಟಪ್ ನಲ್ಲಿಯೇ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದರು. ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿತ್ತು. 2015 ರಲ್ಲಿ 20 ವರ್ಷ ಪ್ರಾಯದ ಸಾಯಿ ತೇಜ್ ಕೊನೆಗೂ ಲಿಂಗ ಪರಿವರ್ತನೆ ಮಾಡಿ ಹೆಣ್ಣಾಗಿ ಬದಲಾದ. ಸಾಯಿ ತೇಜ್ ಆಲಿಯಾಸ್ ಪ್ರಿಯಾಂಕಾ ಸಿಂಗ್ ಇದೀಗ ನಟಿಯಾಗಿ ಹಲವು ಸಿನಿಮಾ, ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.