ಮತ್ತೆ ಸಾಮೂಹಿಕ ಲಸಿಕೀಕರಣಕ್ಕೆ ಜಗತ್ತು ಚಿಂತನೆ.. ಕೊರೊನಾಗಿಂತ ಮಾರಕ ಡಿಸೀಸ್ ‘ಎಕ್ಸ್’

ಅಂತಾರಾಷ್ಟ್ರೀಯ

ಕೋವಿಡ್-19 ಸಾಂಕ್ರಾಮಿಕವು ನಿಧಾನವಾಗಿ ಜನಜೀವನದ ನಡುವೆ ಹಾಸುಹೊಕ್ಕಾಗುತ್ತಿರುವ ನಡುವೆಯೇ ಅದಕ್ಕಿಂತಲೂ ಮಾರಕವಾದ ‘ಡಿಸಿಸ್ ಎಕ್ಸ್’ ಹಬ್ಬುವ ಆತಂಕವನ್ನು ಅಂತಾರಾಷ್ಟ್ರೀಯ ತಜ್ಞ ವೈದ್ಯರು ವ್ಯಕ್ತಪಡಿಸಿದ್ದಾರೆ. ‘ಕೋವಿಡ್ ಗಿಂತಲೂ ವಿನಾಶಕಾರಿಯಾದ ಸಾಂಕ್ರಾಮಿಕ ಎದುರಿಸಲು ವಿಶ್ವ ಸಜ್ಜಾಗುವ ಸ್ಥಿತಿ ನಿರ್ಮಾಣವಾಗಲಿದೆ.’ ಎಂದು ಬ್ರಿಟನ್ ಆರೋಗ್ಯ ತಜ್ಞೆ ಕೇಟ್ ಬಿಂಗಮ್ ಅವರು ಡೈಲಿಮೇಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

“1919-20 ರ ಕಾಲದ ವಿನಾಶಕಾರಿ ಸ್ಪ್ಯಾನಿಶ್ ಪ್ಲೂ ಗೆ ಸಮಾನವಾದ ಪರಿಣಾಮವನ್ನು ಎಕ್ಸ್ ಎಂಬ ಹೊಸ ವೈರಾಣು ಜಗತ್ತಿನ ಮೇಲೆ ಬೀರಬಹುದು. ಸ್ಪ್ಯಾನಿಶ್ ಪ್ಲೂ ಗೆ ಜಗತ್ತಿನಾದ್ಯಂತ 5 ಕೋಟಿ ಮಂದಿ ಬಲಿಯಾಗಿದ್ದರು. ಇದು ಮೊದಲ ಮಹಾಯುದ್ಧದಲ್ಲಿ ಮೃತರಾದವರ ಸಂಖ್ಯೆಯ ಎರಡು ಪಟ್ಟು ಅಧಿಕ. ‘ಎಕ್ಸ್’ ಎನ್ನುವುದು ವೈರಸ್ ಅಥವಾ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರ ಮಿಶ್ರಣ ಕೂಡ ಆಗಿರಬಹುದು. ಡಿಸೀಸ್ ‘ಎಕ್ಸ್’ ಅನ್ನು ನಿಯಂತ್ರಿಸಲು ಜಗತ್ತು ಸಾಮೂಹಿಕ ಲಸಿಕೀಕರಣಕ್ಕೆ ಸಿದ್ಧವಾಗಬೇಕು” ಎಂದು ಅವರು ಸಲಹೆ ನೀಡಿದ್ದಾರೆ.