ಬಜಪೆ: ಬಜಪೆ ಪೊಲೀಸ್ ಠಾಣೆಯ ಉಪ-ನಿರೀಕ್ಷಕ ಗುರಪ್ಪ ಕಾಂತಿ ರವರ ನೇತ್ರತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಪಣಂಬೂರಿನ ಕುದುರೆಮುಖ ಜಂಕ್ಷನ್ KIOCL ಬಸ್ಸು ನಿಲ್ದಾಣದ ಬಳಿ ಸುರತ್ಕಲ್ ಬೊಕ್ಕಬೆಟ್ಟು ನಿವಾಸಿ ಅಬ್ಬಾಸ್ ಎಂಬವ ಮಗ ತೌಸೀಫ್ ಅಹಮ್ಮದ್ ಮತ್ತು ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಅಯ್ಯೂಬ್ ಎಂಬವರ ಮಗ ಮೊಹಮ್ಮದ್ ಫರಾಜ್ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಮನೆ ಕಳವು ಪ್ರಕರಣಗಳಾದ ಮಂಗಳೂರು ತಾಲೂಕಿನ ಅಡ್ಡೂರು ಪುಣಿಕೋಡಿಯ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಕಳ್ಳತನ ಹಾಗೂ ಮಂಗಳೂರು ತಾಲೂಕಿನ ಬಡಗುಳಿಪಾಡಿಯ ಮನಲಪದವು ಸದಾಶಿವ ಸಾವಂತ ಎಂಬವರ ಮನೆಯ ಬೀಗವನ್ನು ಮುರಿದು ಮನೆಗಳಿಂದ ಕಳವು ಮಾಡಿರುವ ಒಟ್ಟು 4.5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣ ಮತ್ತು ಕಳವು ಮಾಡಲು ಉಪಯೋಗಿಸಿದ ಬೈಕನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳ ವಿರುದ್ದ ಮಂಗಳೂರು ನಗರ ಪಣಂಬೂರು ಪೊಲೀಸ್ ಠಾಣೆ, ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಬಂಟ್ವಾಳ ನಗರ ಪೊಲೀಸ್ ಠಾಣೆ, ಮತ್ತು ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್ ಇವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ಗುರುರಾಜ್ (ಪ್ರಭಾರ) ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ PSI ಗುರಪ್ಪ ಕಾಂತಿ, PSI ರೇವಣ ಸಿದ್ದಪ್ಪ, PSI ಕುಮಾರೇಶನ್, PSI ಶ್ರೀಮತಿ ಲತಾ, ASI ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ದುರ್ಗಾ ಪ್ರಸಾದ ಶೆಟ್ಟಿ, ಮಂಜುನಾಥ, ಬಸವರಾಜ್ ಪಾಟೀಲ್, ಜಗದೀಶ್, ದಯಾನಂದ, ಶರಣಪ್ಪ, ಮದು, ಅನಿಲ್, ಕೆಂಚಪ್ಪ ಮತ್ತು ನಗರ ಬೆರಳು ಮುದ್ರೆ ಘಟಕದ PSI M.C ಬಡೀಗೆರ ಹಾಗು ಸಿಬ್ಬಂದಿ V.P ಮಣ್ಣಿಕೇರಿ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು..