ಮಸೀದಿಯಲ್ಲಿ ಇಮಾಮರಾಗಿದ್ದ ಮೌಲ್ವಿ ಇದೀಗ ನಿಶಾ ಫಾತಿಮಾ..!ದೇವರ ನಾಡಲ್ಲಿ ಇದೆಂತಹ ವಿಚಿತ್ರ.!

ರಾಷ್ಟ್ರೀಯ

ಬೆಚ್ಚಿಬೀಳಿಸುವ ಸುದ್ದಿಯೊಂದು ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ವರದಿಯಾಗಿದೆ. 6-7 ವರ್ಷಗಳ ಕಾಲ ದರ್ಸ್ ನಲ್ಲಿ ಮುತಅಲ್ಲಿಂ ಕಲಿತು ಮಸೀದಿಯೊಂದರಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸರ್ಜರಿ ನಡೆಸಿ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ.

ನಾವು ಈವರೆಗೂ ಸಿನಿಮಾ ನಟರು, ಕೆಲ ಯುವಕರು ಲಿಂಗ ಬದಲಾಯಿಸಿ ಹೆಣ್ಣಾಗಿ ಪರಿವರ್ತನೆಯಾದ ಕಹಾನಿಗಳನ್ನೆಲ್ಲಾ ಕೇಳಿದ್ದೇವೆ. ಇತ್ತೀಚೆಗೆ ಮಂಗಳೂರಿನ ಆಸುಪಾಸಿನ ಯುವಕನೊಬ್ಬ ಹೆಣ್ಣಾಗಿ ಬದಲಾದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಮುತಅಲ್ಲಿಂ ಆಗಿ, ಧಾರ್ಮಿಕ ವಿದ್ಯಾಭ್ಯಾಸ ಕಲಿತು ಸರ್ವಶಕ್ತನ ದೀನೀ ಬೋಧನೆ ಮಾಡಿದ ಮೌಲ್ವಿಯೊಬ್ಬರು ಹೆಣ್ಣಾಗಿ ಪರಿವರ್ತನೆ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಗಂಡು ಹೆಣ್ಣಾಗಿ ಬದಲಾವಣೆ ಆಗಲು ಕಾರಣದ ಬಗ್ಗೆ ವಿಜ್ಞಾನಿಗಳು ಬೆರಳು ತೋರಿಸುವುದು ಕ್ರೋಮೋಸೋಮ್ ಬಗ್ಗೆ, ಹಾರ್ಮೋನ್ ಮತ್ತು ಜೀನ್ ಗಳತ್ತ. ಮಗು ಜನಿಸುವ ಮುಂಚೆ ತಾಯಿಯ ಗರ್ಭದಲ್ಲಿ ನಡೆಯುವ ಕುತೂಹಲಕಾರಿ ಘಟನೆ ಇದು. ಸಾಮಾನ್ಯವಾಗಿ 4 ರಿಂದ 5 ನೇ ತಿಂಗಳಲ್ಲಿ ನಡೆಯುವ ಘಟನೆ. ಅದೇ Androgen receptor ಬೆಳವಣಿಗೆ. ಇದೆ ಹಾರ್ಮೋನ್ ಮಗುವು ಹೆಣ್ಣೋ ಗಂಡೋ ಎಂದು ನಿರ್ಧರಿಸುವುದು. ಇಲ್ಲಿ ನಡೆಯುವ ಚಿಕ್ಕ ಅನಾಹುತ ಏನೆಂದರೆ, ಈ ಹಾರ್ಮೋನ್ ಹೆಣ್ಣಿನ ನಡವಳಿಕೆ ಹತ್ತಿರ ಬಾಗುತ್ತದೆ.ಅಂದರೆ ದೇಹವನ್ನು ಗಂಡಾಗಿ ಪರಿವರ್ತಿಸುತ್ತದೆ. ಇಲ್ಲಿಂದ ಶುರು ಆ ಮಗುವಿನಲ್ಲಿ ಬದಲಾವಣೆಗಳು ಶುರುವಾಗುತ್ತದೆ. CYP17 ಇದೇ ಆ ಜೀನ್ ನ ಹೆಸರು ಅಥವಾ ಕೋಡ್. ಆದರೆ ಮಗು ಬೆಳೆದು ಹತ್ತು ವರ್ಷಗಳಾಗುವವರೆಗೂ ಅದರ ಮೆದುಳು ತದ್ವಿರುದ್ಧ ವರ್ತನೆಗೆ ಅವಕಾಶ ನೀಡುವುದಿಲ್ಲ. ಹತ್ತು ವರ್ಷದ ಬಳಿಕ ಮೆಲ್ಲನೆ ಹೆಣ್ಣಿನ ನಡವಳಿಕೆಗಳು ಶುರುವಾಗುತ್ತದೆ.

ಕೇರಳದ ಕೊಲ್ಲಂ ನ ಮುಸ್ಲಿಂ ಮೌಲ್ವಿ ಇದೀಗ ನಿಶಾ ಫಾತಿಮಾ ಆಗಿ ಬದಲಾಗಿದ್ದಾರೆ. ಏಳು ವರ್ಷ ಖತೀಬರಾಗಿ ಸೇವೆ ಸಲ್ಲಿಸಿದ ಈ ವ್ಯಕ್ತಿ ಇದೀಗ ತನ್ನ ಲಿಂಗ ಬದಲಾಯಿಸಿ ಜಮಾಅತ್ ಹಾಗೂ ಕುಟುಂಬದಿಂದ ದೂರವಾಗಿದ್ದಾರೆ. ಈಕೆಯ ವಿಡಿಯೋ ಇದೀಗ ಕೇರಳದಲ್ಲಿ ಭಾರೀ ಸೆನ್ಸೇಷನಲ್ ಹುಟ್ಟಿಸಿದೆ.

ಕುರಾನ್ ಅನ್ನು ಅತ್ಯಂತ ಸುಶ್ರಾವ್ಯವಾಗಿ ಪಠಿಸುವ, ಮುತಅಲ್ಲಿಮನಾಗಿ, ಮುದರ್ರಿಸ್ ಆಗಿ, ಒಂದು ಜಮಾಅತಿನ ಮಸೀದಿಯಲ್ಲಿ ಖತೀಬರಾಗಿ ಧಾರ್ಮಿಕ ಜ್ಞಾನವನ್ನು ಧಾರೆಯೆರೆದು, ಶುಕ್ರವಾರದ ಜುಮಾ ಖುತ್ಬಾ ನಿರ್ವಹಿಸುತ್ತಿದ್ದ ಶ್ವೇತ ವಸ್ತ್ರಧಾರಿ ಇದೀಗ ಸ್ತ್ರೀ ವೇಷ ತೊಟ್ಟು ಸುದ್ಧಿಯಾಗಿದ್ದಾಳೆ.

ಹೆಣ್ಣಾಗಿ ಪರಿವರ್ತನೆಯಾದ ನಿಶಾ ಫಾತಿಮಾ ಕೊಳತ್ತುಪುರ ಮಸೀದಿಯಲ್ಲಿ ಇಮಾಮ್ ಆಗಿ, ಅರಿನ್ನಾಡ್ ಮಸೀದಿಯಲ್ಲಿ ಸಹಾಯಕ ಇಮಾಮ್ ಆಗಿ ಪವಿತ್ರ ಜುಮ್ಮಾ ಖುತ್ಬಾಕ್ಕೆ ನೇತೃತ್ವ ನೀಡುತ್ತಾ ಜಮಾಅತಿಗರಿಗೆ ಧಾರ್ಮಿಕ ಜ್ಞಾನವನ್ನು ಧಾರೆಯೆರೆದು ನೀಡುತ್ತಿದ್ದವರು. ಇದೀಗ ಸ್ತ್ರೀ ವೇಷ ಧರಿಸಿ ಕೋಟುಂಕುಲಂಗರ ಕ್ಷೇತ್ರದಲ್ಲಿ ದೀಪ ಹಚ್ಚಲು ಹೋಗುತ್ತಿದ್ದಾಳೆ. ಇದೀಗ ತನ್ನ ದೇಹಕ್ಕೆ ಟ್ಯಾಟೂ ಹಾಕಿ ಜೀವನೋಪಾಯಕ್ಕಾಗಿ ಸಿನೆಮಾ, ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ.

ಕೊಲ್ಲಂ ನಿವಾಸಿಯಾಗಿರುವ ಮೌಲ್ವಿ ಯಾನೆ ನಿಶಾ ಫಾತಿಮಾ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಕೇರಳ, ಕೊಲ್ಲಂ ನಲ್ಲಿ ಧಾರ್ಮಿಕ ಪಂಡಿತರ ಸಂಖ್ಯೆ ಹೆಚ್ಚು. ಆ ನಾಡಿನಲ್ಲಿಯೇ ಇಂತಹ ವಿಚಿತ್ರ ನಡೆಯುತ್ತಿರುವಾಗ ಕರ್ನಾಟಕಕ್ಕೆ ಬಂದು ಲಕ್ಷಗಟ್ಟಲೆ ಖರ್ಚು ಮಾಡಿ ಪ್ರಭಾಷಣ ನಡೆಸುತ್ತಾರೆ. ಇದೆಲ್ಲ ಅವಶ್ಯವಿದೆಯಾ ಅನ್ನುವ ಮಾತುಗಳು ಇದೀಗ ಬಹುತೇಕರು ಕೇಳುತ್ತಿದ್ದಾರೆ.

ಮೌಲ್ವಿಯಾಗಿದ್ದ ನಿಶಾ ಫಾತಿಮಾ ಹೆಣ್ಣಾಗಿ ಪರಿವರ್ತನೆ ಆದದ್ದೇ ರೋಚಕ ಕಹಾನಿ. ಮಸೀದಿಯಲ್ಲಿ ಇಮಾಮರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸ್ತ್ರೀ ವೇಷ ತೊಟ್ಟು ಪೋಟೋ ವೊಂದು ವೈರಲ್ ಆಗಿತ್ತು. ಖತೀಬರೊಬ್ಬರು ಹೇಳುವುದೊಂದು, ಮಾಡುವುದೊಂದು ಜಮಾಅತಿನಲ್ಲಿ ದೊಡ್ಡ ಪ್ರಶ್ನೆಯಾಗಿತ್ತು. ಒಳ್ಳೆಯ ಗೌರವ ನೀಡುತ್ತಿದ್ದ ಕುಟುಂಬ ಇಂತಹ ವರ್ತನೆ ಕಂಡು ಮನೆಯಿಂದಲೇ ದೂರ ಮಾಡಿದರು. ಇಮಾಮರಾಗಿ ಸೇವೆ ಸಲ್ಲಿಸಿದ ಸಂದರ್ಭ ದುಡಿದ ಹಣದಲ್ಲಿ ಕಾರು ಖರೀದಿಸಿದ್ದರು. ಲಿಂಗ ಬದಲಾವಣೆಗೆ ಹಣದ ಅಡಚಣೆ ಬಂದಾಗ ತನ್ನಲ್ಲಿದ್ದ ಕಾರು ಮಾರಿ ಬಂದ ಹಣದಲ್ಲಿ ಲಿಂಗ ಸರ್ಜರಿ ಮಾಡಿಸಿಕೊಂಡರು. ಸುಮಾರು 5 ಲಕ್ಷ ಖರ್ಚು ಮಾಡಿ ಮುಖದ ಸೌಂದರ್ಯವನ್ನು ಬದಲಾಯಿಸಿಕೊಂಡಿದ್ದರು. ಮತಪ್ರವಚನ, ಧಾರ್ಮಿಕ ಜ್ಞಾನ ಧಾರೆಯೆರೆಯುತ್ತಿದ್ದ ಮೌಲ್ವಿ ಇದೀಗ ಮಾಡೆಲಿಂಗ್, ಸೀರಿಯಲ್, ಸಿನೆಮಾಗಳಲ್ಲಿ ನಟಿಸುವುದನ್ನು ಕಾಯಕ ಮಾಡಿಕೊಂಡಿದ್ದಾಳೆ ನಿಶಾ ಫಾತಿಮಾ. ಅಮೃತ ಎಂಬ ಚಾನೆಲ್ಲಿನಲ್ಲಿ ‘ಆನ್ ಪಿರನ್ನವಲ್’ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದಾಳೆ.