ರಾಷ್ಟ್ರೀಯ ಹೆದ್ದಾರಿ 169(13) ಸಾಣೂರು ಜಂಕ್ಷನ್ ಬಿಕರ್ನಕಟ್ಟೆ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಮತ್ತು ಪುತ್ತಿಲ ಗ್ರಾಮಗಳಿಗೆ ಭೂ ಸ್ವಾಧೀನಗೊಂಡ ಜಮೀನನ್ನು ಭೂ ಮಾಲೀಕರಿಗೆ ಹೈಕೋರ್ಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ಪಡೆದುಕೊಳ್ಳಲು ದಾಖಲೆಗಳೊಂದಿಗೆ ಕೋರಿಕೆ ಪತ್ರ ಸಲ್ಲಿಸುವಂತೆ ಸೂಚನಾ ಪತ್ರವನ್ನು ಕಚೇರಿಯಿಂದ ಜಾರಿ ಮಾಡಲಾಗಿದೆ.
ಈ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಈವರೆಗೆ ಕ್ಲೇಮ್ ಅರ್ಜಿ ಸಲ್ಲಿಸದಿರುವ ಭೂ ಮಾಲೀಕರು ವಾರದೊಳಗೆ ಕ್ಲೇಮ್ ಅರ್ಜಿಯನ್ನು ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ 169(13) ಮಂಗಳೂರು ಕಚೇರಿಗೆ ಸಲ್ಲಿಸಬಹುದು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.