ಆರ್ ಟಿ ಐ ಕಾರ್ಯಕರ್ತರಿಗೆ ಶರಣು.!

ರಾಜ್ಯ

ಆರ್ ಟಿ ಐ ಕಾರ್ಯಕರ್ತರ ಮಾಹಿತಿ ಪಡೆಯುವ ಕ್ರಮದಿಂದ ಸರಕಾರ ಹಿಂದೆ ಸರಿದಿದೆ. 3 ತಿಂಗಳ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ ಟಿ ಐ ಅಡಿ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತವಾಗತೊಡಗಿತ್ತು. ಇದರ ಬೆನ್ನಲ್ಲೇ ಸರಕಾರದಿಂದ ಯಾವುದೇ ಅನುಮತಿ ಪಡೆಯದೆ ಅಥವಾ ಗಮನಕ್ಕೆ ತರದೇ ಜಾರಿಗೊಳಿಸಿದ ಕಾರಣಕ್ಕೆ ಹಿಂಪಡೆದಿರುವುದಾಗಿ ಸಮಜಾಯಿಷಿ ನೀಡಿದೆ. ಮಾಹಿತಿ ಆಯೋಗ ಕಲಬುರಗಿ ಪೀಠದ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಆಡಳಿತ ಸುಧಾರಣೆ, ತರಬೇತಿ ಮತ್ತು ಮಾಹಿತಿ ಹಕ್ಕು ಶಾಖೆ) ಅಧೀನ ಕಾರ್ಯದರ್ಶಿಗಳು ತ್ರೈಮಾಸಿಕ‌ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ ಟಿ ಐನಡಿ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿ ಒದಗಿಸುವಂತೆ ಇಲಾಖೆಗಳಿಗೂ ಸೂಚಿಸಿ ಸೆಪ್ಟೆಂಬರ್ 6 ರಂದು ಪತ್ರ ಬರೆದಿದ್ದರು.