ಶಾಲೆಗಳು 9 ಮತ್ತು 10 ನೇ ತರಗತಿ ಆರಂಭಿಸಲು ಪ್ರತಿ ವಿದ್ಯಾರ್ಥಿಗೆ ಒಂದು ಚ.ಮೀ ಸ್ಥಳಾವಕಾಶ ಹೊಂದಿದ್ದರೆ ಮಾತ್ರ ಅನುಮತಿ

ರಾಜ್ಯ

ರಾಜ್ಯದಲ್ಲಿ ಹಳೇ ಶಾಲೆಗಳು 9 ಮತ್ತು 10 ನೇ ತರಗತಿ ಆರಂಭಿಸಬೇಕಾದಲ್ಲಿ ಪ್ರತಿ ವಿದ್ಯಾರ್ಥಿಗೆ ಒಂದು ಚದರ ಮೀಟರ್ ಸ್ಥಳಾವಕಾಶ ಹೊಂದಿರಲೇಬೇಕು. ಇಲ್ಲವಾದರೆ, ಅನುಮತಿ ಸಿಗೋದಿಲ್ಲ!

ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ 9 ಮತ್ತು 10 ನೇ ತರಗತಿ ಪ್ರಾರಂಭಕ್ಕೆ ಮಾನ್ಯತೆ ಪಡೆಯುವುದು ಖಾಸಗಿ ಶಾಲೆಗಳಿಗೆ ಕಷ್ಟವಾಗಲಿದೆ. ಒಂದು ಚದರ ಮೀಟರ್ ಅಂದರೆ, ಇದು ಅಂದಾಜು 10 ಅಡಿಗಳಷ್ಟು ಆಗಲಿದೆ. ಖಾಸಗಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಇಷ್ಟು ಪ್ರಮಾಣದ ಸ್ಥಳವನ್ನು ಮೀಸಲಿಡುವುದಿಲ್ಲ.

ಶಾಲಾ ಶಿಕ್ಷಣ ಇಲಾಖೆಯು ಹಾಲಿ 1 ರಿಂದ 8 ನೇ ತರಗತಿ ನಡೆಸುತ್ತಿರುವ ಶಾಲೆಗಳಿಂದ 9 ಮತ್ತು 10 ನೇ ತರಗತಿಗಳನ್ನು ಆರಂಭಿಸಲು ಅರ್ಜಿ ಆಹ್ವಾನಿಸಿದೆ. ಜತೆಗೆ ಮಾನ್ಯತೆಗೆ ಅಗತ್ಯವಿರುವ ಮಾನದಂಡಗಳನ್ನು ರೂಪಿಸಿದೆ. ಆ ಪ್ರಕಾರವಾಗಿ ಶಾಲೆಯು ಪ್ರಮುಖವಾಗಿ ಶಿಕ್ಷಣ ಹಕ್ಕು‌ ಕಾಯಿದೆ-2009 ರ ಪ್ರಕಾರ ತರಗತಿ ಕೊಠಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಒಂದು ಚದರ ಮೀಟರ್ ಸ್ಥಳಾವಕಾಶ ಇರಬೇಕು. ಪ್ರತಿ ಶಾಲಾ ಕಟ್ಟಡವು ಅಗತ್ಯ ಸ್ಥಳಾವಕಾಶ, ಭದ್ರತೆ ಮತ್ತು ಉತ್ತಮ ಗಾಳಿ ಬೆಳಕು ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೌಚಗೃಹ ಇರಬೇಕು ಎಂದು ಸೂಚಿಸಿದೆ.