ಮತ್ತೊಬ್ಬ ಸ್ವಯಂ ಘೋಷಿತ ದೇವಮಾನವ ಅಂದರ್.! ಸಮಸ್ಯೆ ಹೇಳಿಕೊಂಡು ಬಂದವರನ್ನು ಬೆತ್ತಲೆಗೊಳಿಸುತ್ತಿದ್ದ ಅಸಾಮಿ.!

ರಾಷ್ಟ್ರೀಯ

ಇದು ಫೇಕ್ ದುನಿಯಾ.. ಅಂತಾರಲ್ಲ.. ಅದು ನಿಜ ಅಂತ ತೋರುತ್ತದೆ. ಕೆಲವರ ವೀಕ್ ನೆಸ್ ಯೂಸ್ ಮಾಡಿಕೊಂಡು ತಮ್ಮ ಹೊಟ್ಟೆ ತುಂಬಿಸುವ ಜೊತೆಗೆ ದೇವರು, ಧರ್ಮದ ಹೆಸರಿನಲ್ಲಿ ತಮ್ಮ ಕಳ್ಳಾಟ ನಡೆಸುತ್ತಿರುವ ಅನೇಕ ಸ್ವಯಂ ಘೋಷಿತ ದೇವಮಾನವರು ಕಂಬಿ ಹಿಂದೆ ಮುದ್ಧೆ ಮುರಿಯುತ್ತಿದ್ದಾರೆ. ಇಷ್ಟಾದರೂ ಜನರಿಗೆ ಬುದ್ಧಿ ಬಂದಿದೆಯಾ? ಇಲ್ಲ..ಫೇಕ್ ಸ್ವಯಂ ಘೋಷಿತ ದೇವಮಾನವರು ಹುಟ್ಟಿ ಕೊಳ್ಳುತ್ತಲೇ ಇದ್ದಾರೆ. ಜನ ಮೋಸ ಹೋಗುತ್ತಲೇ ಇದ್ದಾರೆ.

ಇದೀಗ ದೆಹಲಿಯ ಸ್ವಯಂ ಘೋಷಿತ ದೇವಮಾನವ ಕಂ ಯೂಟ್ಯೂಬರ್ ವಿನೋದ್ ಕಶ್ಯಪ್ ಪೊಲೀಸರ ವಶವಾಗಿದ್ದಾನೆ. ಇಲ್ಲಿನ ಕಾಕ್ರೋಲಾ ಪ್ರದೇಶದಲ್ಲಿ ವಿನೋದ್ ಕಶ್ಯಪ್ ‘ಮಾತಾ ಮನಾನಿ ಚೌಕಿ ದರ್ಬಾರ್’ ಎಂಬ ಕಾರ್ಯಕ್ರಮ ನಡೆಸುತ್ತಿದ್ದ. ಇದು ಬಹಳ ಫೇಮಸ್ ಆಗಿತ್ತು. ನೂರಾರು ಜನರು ತಮ್ಮ ವೈಯಕ್ತಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ಬರುತ್ತಿದ್ದರು. ಇದನ್ನೇ ಎನ್ ಕ್ಯಾಶ್ ಮಾಡಿಕೊಂಡ ಈ ಆಸಾಮಿ ಗುಪ್ತ ರೂಮೊಂದನ್ನು ನಿರ್ಮಿಸಿ ತನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಪೀಡಿಸುತ್ತಿದ್ದ. ಗುರುಸೇವೆ ಮಾಡಬೇಕೆಂದು ಒತ್ತಾಯಿಸುತ್ತಿದ್ದ. ಗುರುಸೇವೆ ಹೆಸರಿನಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಕೊನೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಅನ್ನುವ ಆರೋಪ ಕಶ್ಯಪ್ ಮೇಲಿದೆ.

33 ವರ್ಷ ಪ್ರಾಯದ ವಿನೋದ್ ಕಶ್ಯಪ್ ಜನಪ್ರಿಯ ಯೂಟ್ಯೂಬರ್ ಕೂಡ ಆಗಿದ್ದ. ಈತನ ಕಿರುಕುಳಕ್ಕೆ ಬೇಸತ್ತ ಇಬ್ಬರು ಸಂತ್ರಸ್ತೆ ಮಹಿಳೆಯರು ದೂರು ನೀಡಿದ್ದು, ದೂರು ದಾಖಲಿಸಿಕೊಂಡ ದೆಹಲಿ ಪೊಲೀಸರು ಆರೋಪಿ ಸ್ವಯಂ ಘೋಷಿತ ದೇವಮಾನವನನ್ನು ವಶಕ್ಕೆ ಪಡೆದಿದ್ದಾರೆ. ಐಪಿಸಿ ಸೆಕ್ಷನ್ 376 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.