ಶಿವಕುಮಾರ್ ಪೂಜಾರಿ ಸಾವಿಗೆ ಕೇಂದ್ರ ಸರ್ಕಾರ ಹೊಣೆಯೇ ಹೊರತು ಸಚಿವ ಶರಣಪ್ರಕಾಶ ಪಾಟೀಲ್ ಅಲ್ಲ !

ಕರಾವಳಿ

✍️. ಪತ್ರಕರ್ತ, ನವೀನ್ ಸೂರಿಂಜೆ

ಬರಗಾಲ ಎನ್ನುವುದು ರಾಜಕಾರಣಿಗಳ ಪಾಲಿನ ಹಬ್ಬ. ಶಿವಕುಮಾರ್ ಪೂಜಾರಿ ಎಂಬ ರೈತನ ಆತ್ಮಹತ್ಯೆಯನ್ನೂ ಆತನ ಪತ್ನಿಯ ದೂರಿನ ಮೇರೆಗೆ “ಬರಗಾಲ” ಪಟ್ಟಿಗೆ ಸೇರಿಸುತ್ತದೆ. ವಿರೋಧಪಕ್ಷಗಳು ಶಿವಕುಮಾರ್ ಪೂಜಾರಿ ಸಾವನ್ನು ‘ಹಿಂದೂ ಕೊಲೆ’ ಯ ಪಟ್ಟಿಗೆ ಸೇರಿಸಿ ಸಂಭ್ರಮಿಸುತ್ತಿದೆ. ಕೇಂದ್ರ ಸರ್ಕಾರ

ರೈತ ಶಿವಕುಮಾರ್ ಪೂಜಾರಿ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣ ಎಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಶಿವಕುಮಾರ್ ಪೂಜಾರಿ ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು ಸಚಿವ ಶರಣ ಪ್ರಕಾಶ್ ಪಾಟೀಲ್ ರವರ ದೌರ್ಜನ್ಯದಿಂದ ಬೇಸತ್ತು ಸಾವಿಗೀಡಾಗಿದ್ದಾರೆ ಎಂಬ ವಾದವನ್ನು ಮುಂದಿಡಲಾಗಿದೆ. ಆದರೆ ಮೃತ ಶಿವಕುಮಾರ್ ಪತ್ನಿ ಮಲ್ಲಮ್ಮ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ “ರೈತ ಶಿವಕುಮಾರ್ ಪೂಜಾರಿಯವರು ಹೆಸರು ಬೇಳೆ ಬೆಳೆಯುವ ಕೃಷಿಕರಾಗಿದ್ದು ಅದಕ್ಕಾಗಿ ಈವರೆಗೆ 12 ಲಕ್ಷ ಸಾಲ ಮಾಡಿದ್ದಾರೆ. ಈ ಬಾರಿ ಮಳೆಯೂ ಆಗದೆ ಇದ್ದಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಹೆಸರು ಬೇಳೆ ಬೆಳೆಯುವ ರೈತ ಒಂದೇ ವರ್ಷಕ್ಕೆ 12 ಲಕ್ಷ ಸಾಲ ಮಾಡಲು ಸಾಧ್ಯವಿಲ್ಲ. ಈ ಬಾರಿಯೇನೋ ಮಳೆಯಾಗಿಲ್ಲ. ಈ ಹಿಂದಿನ ವರ್ಷಗಳ ಹೆಸರು ಬೇಳೆ ಇಳುವರಿಯೂ ಲಾಭದಾಯಕ ಆಗಲಿಲ್ಲವೇ ? ಹಲವು ವರ್ಷಗಳಿಂದ ಸಾಲ ತೀರಿಸಲಾಗದ ಪರಿಸ್ಥಿತಿಗೆ ಕೇವಲ ಮಳೆ ಕಾರಣವೇ ? ಇದನ್ನು ಚರ್ಚೆ ಮಾಡುವ ಬದಲು ಪ್ರತಿಪಕ್ಷ ಬಿಜೆಪಿ ಅಮಾನವೀಯವಾಗಿ ರಾಜಕಾರಣ ಮಾಡುತ್ತಿದೆ.

ಹೆಸರು ಬೇಳೆಗೆ ಮಾರುಕಟ್ಟೆಗೆ ಉತ್ತಮ ಬೆಲೆ ಇದೆ. ಆದರೆ ಕೃಷಿಕರು ಯಾಕೆ ಸಾಲದ ಕೂಪದಲ್ಲಿ ಇದ್ದಾರೆ ? ಹೆಸರು ಬೇಳೆ ಬೆಳೆಯುವ ರೈತ ಯಾಕೆ ಆತ್ಮಾಹತ್ಯೆ ಮಾಡಿಕೊಳ್ಳುತ್ತಿದ್ದಾನೆ ? ವಾಣಿಜ್ಯ ಬೆಳೆಯಾಗಿ ಮಾರ್ಪಾಡಾಗಿರುವ ಹೆಸರು ಬೇಳೆಯನ್ನು ಬೆಳೆಯುವ ರೈತ ಯಾಕೆ ಆರ್ಥಿಕವಾಗಿ ಸದೃಡವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರೆತರೆ ರೈತ ಶಿವಕುಮಾರ್ ಪೂಜಾರಿಯವರ “ಕೊಲೆಗಾರ” ಪತ್ತೆಯಾಗುತ್ತಾನೆ !

ಭಾರತ ದೇಶವು ವಿಶ್ವದ ಅತಿ ದೊಡ್ಡ ಬೇಳೆಕಾಳುಗಳ ಉತ್ಪಾದಕ ಮತ್ತು ಗ್ರಾಹಕವಾಗಿದೆ. ಹಳದಿ ಬಟಾಣಿ, ಹೆಸರು ಬೇಳೆ, ತೊಗರಿ ಬೇಳೆ ಮತ್ತು ಕಡಲೆಗಳಂತಹ ಬೇಳೆಕಾಳುಗಳು ಭಾರತದ ಜನರ ದಿನನಿತ್ಯದ ಬಳಕೆಯಾಗಿದೆ. ಇಷ್ಟೊಂದು ಬೇಡಿಕೆಯ ಹೆಸರು ಬೇಳೆ ಬೆಳೆಯುವ ರೈತ ಆತ್ಮಹತ್ಯೆ ಯಾಕೆ ಮಾಡಿಕೊಂಡ ? ಕೇಂದ್ರ ಸರ್ಕಾರ

ಬರಗಾಲ ಎನ್ನುವುದು ರಾಜಕಾರಣಿಗಳ ಪಾಲಿನ ಹಬ್ಬ. ಶಿವಕುಮಾರ್ ಪೂಜಾರಿ ಎಂಬ ರೈತನ ಆತ್ಮಹತ್ಯೆಯನ್ನೂ ಆತನ ಪತ್ನಿಯ ದೂರಿನ ಮೇರೆಗೆ “ಬರಗಾಲ” ಪಟ್ಟಿಗೆ ಸೇರಿಸುತ್ತದೆ. ವಿರೋಧಪಕ್ಷಗಳು ಶಿವಕುಮಾರ್ ಪೂಜಾರಿ ಸಾವನ್ನು ‘ಹಿಂದೂ ಕೊಲೆ’ ಯ ಪಟ್ಟಿಗೆ ಸೇರಿಸಿ ಸಂಭ್ರಮಿಸುತ್ತಿದೆ. ಈ ಎರಡೂ ಪಟ್ಟಿಗಳು ರಾಜಕಾರಣಿಗಳಿಗೆ ಬಹಳ ಇಷ್ಟ. ಕಾರಣವಿಷ್ಟೆ. ಬರಗಾಲದ ಇದೆ ಎಂಬ ಕಾರಣಕ್ಕಾಗಿ ಬೇಳೆಕಾಳುಗಳನ್ನು ಇನ್ನಷ್ಟೂ ಅಮದು ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರದ ಈ ಆಮದು ನೀತಿಯೇ ರೈತ ಶಿವಕುಮಾರ್ ಪೂಜಾರಿ ಸಾವಿಗೆ ಕಾರಣ. ಈಗ ಸಾವು ಮತ್ತಷ್ಟು ಆಮದಿಗೆ ಪೂರಕ. ಈ ವಿಷವರ್ತುಲದಲ್ಲಿ ರೈತನಿದ್ದಾನೆ.

ಬರಗಾಲದ ಕಾರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ಮಾರ್ಚ್ 2020 ರ ಆರ್ಥಿಕ ವರ್ಷಕ್ಕೆ 650,000 ಟನ್ ದ್ವಿದಳ ಧಾನ್ಯವನ್ನು ಆಮದು ಮಾಡಿಕೊಳ್ಳುವ ಬಗ್ಗೆ ಘೋಷಿಸಿತ್ತು. ಬರಗಾಲದಿಂದಾಗಿ ಭಾರತದ ರೈತರು ಬೇಳೆಕಾಳುಗಳನ್ನು ಬೆಳೆಯಲಾಗುತ್ತಿಲ್ಲ ಎಂಬ ಕಾರಣ ನೀಡಿ 2016-17 ರಲ್ಲಿ ಕೇಂದ್ರ ಸರ್ಕಾರವು 6.6 ಮಿಲಿಯನ್ ಟನ್ ಗಳ ದಾಖಲೆಯ ಆಮದು ಮಾಡಿಕೊಂಡಿತ್ತು. ಅದೂ ಸುಂಕರಹಿತವಾಗಿ !

ಬರಗಾಲದಿಂದ ತತ್ತರಿಸಿರುವ, ಸಾಲ ಮಾಡಿ ಬೇಳೆ ಬೆಳೆದು ನಷ್ಟ ಉಂಟಾಗಿರುವ ರೈತರ ಬಗ್ಗೆ ಕೇಂದ್ರ ಸರ್ಕಾರ ಯೋಚನೆಯನ್ನೇ ಮಾಡಿಲ್ಲ. ಬರಗಾಲಕ್ಕೆ ವಿದೇಶದಿಂದ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುವುದೇ ಪರಿಹಾರವಾದರೆ ರೈತರ ಗತಿ ಏನು ? ಬೆಳೆದಿರುವ ಅಲ್ಪಸ್ವಲ್ಪ ಬೇಳೆ ಬೆಳೆಗೂ ಮಾರುಕಟ್ಟೆ ಇಲ್ಲದಂತೆ ಆಗುವುದಿಲ್ಲವೇ ? ವಿದೇಶದಿಂದ ಸುಂಕರಹಿತ ಆಮದು ಎನ್ನುವುದು ಬರಗಾಲದಲ್ಲೂ ಕಷ್ಟಪಟ್ಟು ಬೆಳೆ ಬೆಳೆದಿರುವ ರೈತರ ಕೊಲೆಯಲ್ಲವೇ ? ಶಿವಕುಮಾರ್ ಪೂಜಾರಿಯಂತವರು ಸಾಲ ತೀರಿಸುವುದಾದರೂ ಹೇಗೆ ? ಬದುಕುವುದಾದರೂ ಹೇಗೆ