ಮಂಗಳೂರು ದಸರಾದಲ್ಲಿ ಸೌಹಾರ್ದತೆಯ ಸ್ತಬ್ದಚಿತ್ರ ; ಶ್ವೇತವರ್ಣದ ಟೀ ಶರ್ಟ್ ಅನಾವರಣ

ಕರಾವಳಿ

ಮಂಗಳೂರು ದಸರಾದ ವೈಭವದ ಮೆರವಣಿಗೆಯಲ್ಲಿ ಸರ್ವ ಧರ್ಮದ ಜನತೆ ಕಟ್ಟಿ ಬೆಳೆಸಿದ ಮಂಗಳೂರು ಎಂಬ ಕಣ್ಣೋಟದಲ್ಲಿ ಮೂಡಿ ಬಂದ ಸೌಹಾರ್ದತೆಯ ಸ್ತಬ್ದಚಿತ್ರವು ಪ್ರದರ್ಶನಗೊಳ್ಳಲಿದೆ.

ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೆಯೋಭಿವ್ರದ್ದಿ ಸಂಘ,ಸಂತ ಮದರ್ ತೆರೇಸಾ ವಿಚಾರ ವೇದಿಕೆ ಹಾಗೂ ಭಗತ್ ಸಿಂಗ್ ವಾರಿಯರ್ಸ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಮೂಡಿ ಬಂದಿರುವ ಸ್ತಬ್ದಚಿತ್ರದ ಮೆರವಣಿಗೆಯ ಸಂದರ್ಭದಲ್ಲಿ ಯುವಜನರಿಗಾಗಿ ವಿನ್ಯಾಸಗೊಳಿಸಿದ ಶ್ವೇತ ವರ್ಣದ ಟೀ ಶರ್ಟನ್ನು ಮೂರು ಪ್ರಮುಖ ಸ್ಥಳಗಳಲ್ಲಿ ಅನಾವರಣಗೊಳಿಸಲಾಯಿತು.

ಭಗತ್ ಸಿಂಗ್ ವಾರಿಯರ್ಸ್ ನ ವತಿಯಿಂದ ಟೀ ಶರ್ಟ್ ನ್ನು ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಚ್ ಎಸ್ ಸಾಯಿರಾಂರವರು ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅನಾವರಣಗೊಳಿಸಿದರೆ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ವತಿಯಿಂದ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಇತಿಹಾಸ ಪ್ರಸಿದ್ದ ಕುಲಶೇಖರ ಚರ್ಚ್ ನ ಹೊರಾಂಗಣದಲ್ಲಿ ಅನಾವರಣಗೊಳಿಸಿದರು. ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ಹಾಗೂ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು ಜಂಟಿಯಾಗಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ದೇವಸ್ಥಾನ ಅಭಿವ್ರದ್ದಿ ಸಮಿತಿಯ ಅಧ್ಯಕ್ಷರಾದ ದೇವೇಂದ್ರ ಪೂಜಾರಿ,ಸಮಿತಿ ಸದಸ್ಯರಾದ ವೇದ ಕುಮಾರ್,ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮಹಮ್ಮದ್ ಮುಸ್ತಾಫ,ಹರೀಶ್ ಪೂಜಾರಿ, ಮಹಮ್ಮದ್ ಆಸೀಫ್, ಅಬ್ದುಲ್ ರೆಹಮಾನ್, ಆದಂ ಬಜಾಲ್, ರಿಯಾಜ್,ಪ್ರವೀಣ್, ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು.