ಇಡೀ ವಿಶ್ವದ ಬಹುತೇಕ ರಾಷ್ಟ್ರಗಳು ಹಮಾಸ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಕರೆಯುತ್ತಿದೆ. ಅದೇ ಹಮಾಸ್ ಇಬ್ಬರು ವಯಸ್ಸಾದ, ಆರೋಗ್ಯ ಸಂಬಂಧಿತ ಕಾಯಿಲೆಯಿಂದ ನರಳುತ್ತಿರುವ ಇಬ್ಬರು ವೃದ್ಧ ಇಸ್ರೇಲಿಗರನ್ನು ಒತ್ತೆಯಾಳುಗಳಿಂದ ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಅದೇ ರೀತಿ ಇಸ್ರೇಲ್ ಸೈನಿಕರನ್ನು ಬಹುತೇಕ ವಿಶ್ವದ ರಾಷ್ಟ್ರ ಕೊಂಡಾಡುತ್ತಿದೆ. ಅದೇ ಇಸ್ರೇಲ್ ಮಹಿಳೆಯರು, ಸಣ್ಣ ಸಣ್ಣ ಮಕ್ಕಳನ್ನು ಗುರಿ ಮಾಡಿ ಕೊಂದು ಹಾಕುತ್ತಿದೆ. ಆಸ್ಪತ್ರೆಗೆ ಬಾಂಬ್ ಹಾಕಿ ಯುದ್ಧ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಈಗ ನೀವೇ ಹೇಳಿ ಉಗ್ರರು ಯಾರು?
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ದ ಮುಂದುವರಿದಿರುವಂತೆ ತಾನು ಒತ್ತೆಯಾಳುಗಳಾಗಿ ಇರಿಸಿದ್ದ ನೂರಾರು ಜನರ ಪೈಕಿ ಇಬ್ಬರು ವೃದ್ಧ ಇಸ್ರೇಲಿ ಮಹಿಳೆಯರನ್ನು ಹಮಾಸ್ ಬಿಡುಗಡೆ ಮಾಡಿದ್ದಾರೆ. ಮಾನವೀಯ ಕಾರಣಗಳಿಗಾಗಿ ಸೋಮವಾರ ಪ್ಯಾಲೇಸ್ಟಿನಿಯನ್ ಹೋರಾಟಗಾರರ ಗುಂಪು ಅವರನ್ನು ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ನುರಿಟ್ ಕೂಪರ್ ಮತ್ತು ಯೋಚೆವೆಡ್ ಲಿಫ್ಶಿಟ್ಜ್ ಅವರನ್ನು ಇಸ್ರೇಲಿ ಸೇನೆಗೆ ಹಸ್ತಾಂತರಿಸಲಾಗಿದೆ ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲಿ ಸರ್ಕಾರ ದೃಢಪಡಿಸಿದೆ. ಅವರನ್ನು ಗಾಜಾ ಗಡಿಯ ಸಮೀಪವಿರುವ ಕಿಬ್ಬುಟ್ಜ್‌ನಿಂದ ಅಪಹರಿಸಲಾಗಿತ್ತು.
ಗಾಜಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಗಳು ನೂರಾರು ಅಮಾಯಕ ಜನರನ್ನು ಕೊಂದಿವೆ. ನಾಗರಿಕರನ್ನು ವಿಷಮ ಪರಿಸ್ಥಿತಿಯಲ್ಲಿ ಸಿಲುಕಿಸಿದೆ ಎಂದು ರಾಯಿಟರ್ಸ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬಾಂಬ್ ದಾಳಿಯಲ್ಲಿ 436 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.