ಹುಲಿ ಉಗುರು ಪ್ರಕರಣ: ಡಿಆರ್‌ಎಫ್‌ಓ ದರ್ಶನ್ ಅಮಾನತು, ಬಂಧನ

ರಾಜ್ಯ

ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಕಳಸದ ಅರಣ್ಯಾಧಿಕಾರಿಯೊಬ್ಬರು ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಈಗ ಅವರನ್ನು ಎನ್‌ಆರ್‌ಪುರದಲ್ಲಿ ಬಂಧಿಸಲಾಗಿದೆ.

ಕಳಸದ ಡಿಆರ್‌ಎಫ್‌ಓ ದರ್ಶನ್ ಅವರನ್ನು ಬೆಳಗ್ಗೆ ಅಮಾನತು ಮಾಡಲಾಗಿತ್ತು. ಇವರ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿತ್ತು. ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು.

ಅಧಿಕಾರಿ ವಿರುದ್ಧ, ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಲಾಗಿತ್ತು. ಅಲ್ಲದೇ ವನ್ಯ ಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿಎಫ್‌ಓ ನಂದೀಶ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದರು.