ದಕ್ಷಿಣ ಕನ್ನಡ ಜಿಲ್ಲೆಗೊಳಪಟ್ಟ ಒಟ್ಟು 4 ಸ್ಥಳೀಯಾಡಳಿತ ಸಂಸ್ಥೆಯನ್ನು ಪುರಸಭೆಯಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಾಥಮಿಕ ವರದಿಯೊಂದಿಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್, ಮೂಲ್ಕಿ ತಾಲೂಕಿನ ಮೂಲ್ಕಿ ಪಟ್ಟಣ ಪಂಚಾಯತ್, ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್, ಉಳ್ಳಾಲ ತಾಲೂಕಿನ ಬೆಳ್ಮ ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಗಳು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ದ.ಕ ಜಿಲ್ಲಾ ನಗರಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ನಗರಾಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆ ರವಾನಿಸಲಾಗಿದೆ.
ಬಜಪೆ ಹಾಗೂ ಮಳವೂರು ಗ್ರಾಮ ಪಂಚಾಯತ್ ಗಳು ವಿಲೀನಗೊಂಡು ಮೂರು ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿತ್ತು. 2011 ರ ಜನಗಣತಿ ಪ್ರಕಾರ ಈ ಎರಡು ಪಂಚಾಯತಿನದ್ದು ಒಟ್ಟು 18,428 ಆಗಿತ್ತು. ಈಗ ಅಂದಾಜು 25 ಸಾವಿರ ಜನಸಂಖ್ಯೆ ಹೊಂದಿದೆ. 20 ಸಾವಿರ ಜನಸಂಖ್ಯೆ ಹೊಂದಿರುವ ಪಂಚಾಯತ್ ಗಳು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಲಿದೆ.
ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2011 ರ ಪ್ರಕಾರ ಒಟ್ಟು ಜನಸಂಖ್ಯೆ 18,288. ಇದೀಗ ಏರಿಕೆ ಕಂಡಿದ್ದು ಕಿಲ್ಪಾಡಿ ಅಥವಾ ಪಡುಪಣಂಬೂರು ಗ್ರಾಮ ಪಂಚಾಯತ್ ಗಳು ಮೂಲ್ಕಿ ಪಟ್ಟಣ ಪಂಚಾಯತ್ ಗೆ ವಿಲೀನಗೊಳಿಸುವ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮೀಣ ಪಂಚಾಯತ್ 2011 ರ ಸಾಲಿನಲ್ಲಿ ಒಟ್ಟು ಜನಸಂಖ್ಯೆ 19,200. ಇದೀಗ ಅದು 30 ಸಾವಿರ ಅಂದಾಜು ತಲುಪಿದೆ. ಬೆಳ್ಮ ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಒಟ್ಟು ಅಂದಾಜು ಜನಸಂಖ್ಯೆ 35 ಸಾವಿರ ತಲುಪಿದೆ. ಮೂಲ್ಕಿಯಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವಿದ್ದರೆ, ಗಂಜಿಮಠದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮುದಾಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬಹುದಾದ ಅರ್ಹತೆ ಹೊಂದಿದೆ.