ಗಡಿದಾಟಿದ ಪ್ರೇಮ ಪ್ರಕರಣ.! ಪ್ರಿಯಕರನಿಗಾಗಿ ಗಡಿ ದಾಟಿ ಬಂದ ಪ್ರೇಯಸಿ

ರಾಷ್ಟ್ರೀಯ

ದೇಶದಲ್ಲಿ ಒಂದಾದ ಮೇಲೊಂದು ಕ್ರಾಸ್‌ ಬಾರ್ಡರ್‌ ಪ್ರೇಮ ಪ್ರಕರಣಗಳು ನಡೆಯುತ್ತಲೇ ಇವೆ. ಸೀಮ ಹೈದರ್‌ ಗಡಿ ದಾಟಿ ಭಾರತಕ್ಕೆ ಬಂದಂತೆ ಇದೀಗ ಬಾಂಗ್ಲಾದೇಶದಿಂದ ಯುವತಿಯೊಬ್ಬರು ಗಡಿದಾಟಿ ಬಂದಿದ್ದಾರೆ. ಫಾತೆಮ ನುಸ್ರತ್ ಅನ್ನೊ 24 ವರ್ಷದ ಬಾಂಗ್ಲಾ ಯುವತಿ ತ್ರಿಪುರದ ಧರ್ಮನಗರ್‌ ಡಿವಿಶನ್‌ನ ಪುಲ್ಭರಿ ಮೂಲದ 34 ವರ್ಷದ ನೂರ್‌ ಜಲಾಲ್‌ ಎಂಬಾತನನ್ನ ಹುಡಿಕಿಕೊಂಡು ಬಂದಿದ್ದಾರೆ.

ಸ್ಚಾರಸ್ಯ ಏನಪ್ಪ ಅಂದ್ರೆ ಇವರಿಬ್ಬರೂ ಈಗಾಗಲೇ ವಿವಾಹಿತರು. ಆಯುರ್ವೇದ ಪಂಡಿತನಾಗಿದ್ದ ಜಲಾಲ್‌ ಆಗಾಗ್ಗೆ ಬಾಂಗ್ಲಾದ ಮೌಲ್ವಿ ಬಜಾರ್‌ಗೆ ಭೇಟಿ ಕೊಡ್ತಿದ್ದ. ಅಲ್ಲೇ ನುಸ್ರತ್‌ರ ಪರಿಚಯ ಆಗಿದೆ. 15 ದಿನಗಳ ಹಿಂದಷ್ಟೇ ನುಸ್ರತ್ ಬಾರ್ಡರ್‌ ದಾಟಿ ಧರ್ಮನಗರ್‌ಗೆ ಬಂದಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ. ಗುರುವಾರ ಮಹಿಳೆಯನ್ನು ಅರೆಸ್ಟ್‌ ಮಾಡಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದ್ರೆ ಈ ಕಡೆ ನೂರ್‌ ಜಲಾಲ್‌ ಭೂಗತ ಆಗಿದ್ದಾರೆ.