ಕೃತಕ ಗರ್ಭಧಾರಣೆಗೆ ತನ್ನದೇ ವೀರ್ಯ ನೀಡಿ ಸಿಕ್ಕಿ ಬಿದ್ದ ವೈದ್ಯ.!!

ಅಂತಾರಾಷ್ಟ್ರೀಯ

ಇತ್ತೀಚೆಗೆ ಕೃತಕ ಗರ್ಭಧಾರಣೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಈ ಒಂದು ಜಾಲದಲ್ಲಿ ವೈದ್ಯನೋರ್ವ ತನ್ನದೇ ವೀರ್ಯವನ್ನು ಕೊಟ್ಟಿರುವ ಘಟನೆಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಮೂವತ್ತು ವರ್ಷದ ಹಿಂದೆ ಕೃತಕ ಗರ್ಭಧಾರಣೆ ಪ್ರಕ್ರಿಯೆ ವೇಳೆ ವೈದ್ಯರೊಬ್ಬರು ನನಗೆ ಮೋಸ ಮಾಡಿದ್ದಾರೆ ಎಂದು ಅಮೆರಿಕ ಮಹಿಳೆ ದೂರು ನೀಡಿದ್ದಾರೆ. ಅನಾಮಿಕ ವ್ಯಕ್ತಿಯ ವೀರ್ಯವನ್ನು ಸಂತಾನೋತ್ಪತ್ತಿಗೆ ಬಳಸುವ ಬದಲು ತನ್ನ ವೀರ್ಯ ನೀಡಿದ್ದಾರೆ ಎನ್ನುವುದು 67ವರ್ಷದ ಮಹಿಳೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

34 ವರ್ಷದ ಹಿಂದೆ ಶರೋನ್‌ ಹೇಯ್ಸ್‌ ಎಂಬ ಮಹಿಳೆ ಫಲವತ್ತತೆ ವೈದ್ಯ ಡಾ.ಡೇವಿಡ್‌ ಆರ್‌ ಕ್ಲೇಪೂಲ್‌ ಅವರಿಂದ ವೈದ್ಯಕೀಯ ನೆರವು ಪಡೆದಿದ್ದಾರೆ. ಇದೀಗ ಅವರಿಗೆ ಪುತ್ರಿಯ ಡಿಎನ್‌ಎ ಪರೀಕ್ಷೆ ಮಾಡಿದಾಗ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಇದು ಮೋಸ ಎಂದು ಕಾನೂನು ಹೋರಾಟ ಮಾಡಿದ್ದಾರೆ. ವೈದ್ಯ ತನ್ನದೇ ವೀರ್ಯ ನೀಡಿದ್ದು, ಈ ವಿಷಯ ಬೆಳಕಿಗೆ ಬರಲು ಡಿಎನ್‌ಎ ಕಿಟ್‌ಗಳ ಬಳಕೆ ಹೆಚ್ಚಾಗಿರುವುದೇ ಕಾರಣ ಎನ್ನಲಾಗಿದೆ.

ನಿರ್ದಿಷ್ಟ ಗುಣಲಕ್ಷಣಗಳ ಆಧಾರದ ಮೇಲೆ ದಾನಿಯನ್ನು ಆಯ್ಕೆ ಮಾಡುತ್ತೇನೆ. ಮತ್ತು ದಾನಿಯ ಸಮಗ್ರ ಆರೋಗ್ಯ ಮತ್ತು ಅನುವಂಶಿಕ ತಪಾಸಣೆ ಮಾಡುತ್ತೇನೆ ಎಂದ ವೈದ್ಯರು ಈ ರೀತಿ ಮಾಡದೇ ತನ್ನದೇ ವೀರ್ಯವನ್ನು ಮಹಿಳೆಯ ಗರ್ಭಕೋಶಕ್ಕೆ ಹಾಕಿ ಮೋಸ ಮಾಡಿದ್ದರು.

ಮಹತ್ವದ ಪ್ರಕರಣವೊಂದರಲ್ಲಿ, ಫಲವತ್ತತೆ ವೈದ್ಯರೊಬ್ಬರು ತಾಯಂದಿರನ್ನು ಗರ್ಭಧರಿಸಲು ತಮ್ಮ ಸ್ವಂತ ವೀರ್ಯವನ್ನು ಬಳಸಿದ್ದಾರೆ ಎಂದು ಆರೋಪಿಸಿದ ಮೂರು ಕುಟುಂಬಗಳಿಗೆ ಕೊಲೊರಾಡೊ ತೀರ್ಪುಗಾರರು ಸುಮಾರು 9 ಮಿಲಿಯನ್ ಡಾಲರ್ ಬಹುಮಾನ ನೀಡಿದ್ದಾರೆ. ಈ ರೀತಿಯಾಗಿ ವೈದ್ಯ ಓರ್ವ ಮಹಿಳೆಗೆ ಮಾತ್ರವಲ್ಲ, ತನ್ನಲ್ಲಿಗೆ ಬಂದ ಹಲವಾರು ಮಹಿಳೆಯರಿಗೆ ವೈದ್ಯ ತನ್ನದೇ ವೀರ್ಯ ನೀಡಿರುವುದಾಗಿ ಪತ್ತೆಯಾಗಿದೆ