ಪರ-ಪುರುಷನ ಜತೆ ಮಲಗು ಎಂದು ಕೋಣೆಗೆ ಕಳಿಸಿದ್ದಳು

ರಾಷ್ಟ್ರೀಯ

ಸಿನಿಮಾದ ಮೂಲಕ ಸಿನಿಮಾಕ್ಕೆ ರಂಗ ಪ್ರವೇಶ ಮಾಡಿದ ಶಕೀಲಾ ತನ್ನ ಬಾಲ್ಯದ ಕಹಿ ನೆನಪುಗಳನ್ನು ಹೇಳಿಕೊಂಡಿದ್ದಾರೆ. ಹೆತ್ತ ತಾಯಿ ಎಲ್ಲರಿಗೂ ದೇವರು.ಆದರೆ ನನಗೆ ಮಾತ್ರ ಅಲ್ಲ.ಹಣಕ್ಕಾಗಿ ಸಿಕ್ಕ ಸಿಕ್ಕ ಗಂಡಸರ ಜೊತೆ ಮಲಗಿಸಿದ್ದಾಳೆ ಎಂದು ತನ್ನ ಮನದಾಳದ ನೋವನ್ನು ಹೇಳಿಕೊಂಡಿದ್ದಾರೆ.

ತಾಯಿಯ ಕಣ್ಣಿಗೆ ತನ್ನ ಎಲ್ಲಾ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್‌ ಮಾಡುತ್ತಿದ್ದಳು. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು ಹಾಗೆಯೇ ಮುಂದುವರಿದಿತ್ತು. ನಾನು ಆಗಿನ್ನೂ ಸಿನಿಮಾಕ್ಕೆ ಬಂದಿರಲಿಲ್ಲ. ಒಂದಷ್ಟು ಸಿನಿಮಾಗಳ ಮಾತುಕತೆ ನಡೆದಿತ್ತು ಅಷ್ಟೇ. ಆ ಸಮಯದಲ್ಲಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇತ್ತು. ಹಾಗಾಗಿಯೇ ಹೊಟೇಲ್‌ಗೆ ಕರೆದೊಯ್ದು, ಪರಪುರುಷನ ಜತೆ ಮಲಗು ಎಂದು ಕೋಣೆಗೆ ಕಳಿಸಿದ್ದಳು ಎಂದು ನೀಲಿ ಸಿನಿಮಾದ ತಾರೆ ಶಕೀಲಾ ತನ್ನ ಬಾಲ್ಯದ ಕಣ್ಣೀರ ಕಥೆಯನ್ನು ಹೇಳಿಕೊಂಡಿದ್ದಾರೆ.