ಪ್ರಪಂಚದ ಅರ್ಧಕ್ಕರ್ಧ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಪರಿಕಲ್ಪನೆಯೇ ನೆಲ ಕಚ್ಚಿದೆ ಅಂತ ಇನ್ಸ್ಟಿಟ್ಯುಟ್ ಫಾರ್ ಡೆಮೊಕ್ರಸಿ ಅಂಡ್ ಎಲೆಕ್ಟ್ರೊರಲ್ ಅಸಿಸ್ಟೆನ್ಸ್(IDEA) ಎಂಬ ಒಂದು ಸಂಸ್ಥೆ ಹೇಳಿದೆ . ಸ್ವೀಡನ್ ಮೂಲದ ಈ ಸಂಸ್ಥೆ ವಿಶ್ವಾದ್ಯಂತ ಡೆಮಾಕ್ರಟಿಕ್ ರಾಷ್ಟ್ರಗಳಲ್ಲಿ ದೋಷಭರಿತ ಚುನಾವಣೆಗಳು, ವಾಕ್ ಹಾಗೂ ಸಭೆ ಸೇರೋ ಸ್ವಾತಂತ್ರ್ಯ ಸೇರಿದಂತೆ , ಡೆಮಾಕ್ರಸಿಯಲ್ಲಿ ಮುಖ್ಯವಾಗಿ ಇರಬೇಕಾದ ಹಕ್ಕುಗಳನ್ನು ಹಲವು ದೇಶಗಳಲ್ಲಿ ಕಸಿದುಕೊಳ್ಳಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಬಲ ಕಡಿಮೆಯಾಗುತ್ತಿದೆ, ಅದರ ಪರಿಕಲ್ಪನೆಗೆ ಧಕ್ಕೆ ಬಂದಿದೆ ಅಂತ ವರದಿಯಲ್ಲಿ ಹೇಳಲಾಗಿದೆ.
ಇನ್ನೂ ಪ್ರಜಾಪ್ರಭುತ್ವವನ್ನು ಕಾಯಬೇಕಾಗಿರೋ ಅಂಶಗಳಾದ ಚುನಾವಣೆ, ಸಂಸತ್ತು ಮತ್ತು ನ್ಯಾಯಾಲಯಗಳಲ್ಲಿನ ಲೋಪದೋಷಗಳೇ ಇದಕ್ಕೆ ಕಾರಣ ಅಂತ ಹೇಳಲಾಗಿದೆ. ಇದರಿಂದಾಗಿ ಶಾಸಕಾಂಗಗಳು ವೀಕ್ ಆಗುತ್ತಿವೆ. ಇದನ್ನು ಸರಿ ಪಡಿಸಬೇಕಾದರೆ ಪತ್ರಿಕೋದ್ಯಮ, ಎಲೆಕ್ಷನ್ ಕಮಿಷನ್‌ಗಳು, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಬಲ ತುಂಬೋದು ಬಹಳ ಅಗತ್ಯ ಅಂತ IDEA ಹೇಳಿದೆ