ಸರಕಾರಿ ಶಾಲೆಯ ಭೂಮಿಯ ಕಬಳಿಕೆ ತನಿಖೆಗೆ ಡಿವೈಎಫ್ಐ ಒತ್ತಾಯ

ಕರಾವಳಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಶಾಲೆಗೆ ಸಂಬಂಧಿಸಿದ ಇಡ್ಯಾ ಗ್ರಾಮದ ಸರ್ವೇ ನಂಬರ್ 16ರಲ್ಲಿರುವ 1.60 ಎಕ್ರೆ ಜಾಗವನ್ನು 1996ರಲ್ಲಿ ಸದರಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಒಂದು ಎಕರೆ ಮತ್ತು ಆಟದ ಮೈದಾನಕ್ಕಾಗಿ 60ಸೆಂಟ್ಸ್ ಭೂಮಿಯನ್ನು ಮಂಜೂರು ಮಾಡಲಾಗಿತ್ತು ಶಾಲೆಯ ಮತ್ತು ಮೈದಾನದ ಸುತ್ತಲೂ ಆವರಣ ಗೋಡೆ ನಿರ್ಮಾಣ ಮಾಡಲಾಗಿತ್ತು ಇದೀಗ ಒಬ್ಬ ವ್ಯಕ್ತಿಯು ರಾಜಕೀಯ ಪ್ರಭಾವ ಬಳಸಿಕೊಂಡು ಶಾಲೆಯ ಭೂಮಿಯನ್ನು ಕೆಲವರಿಗೆ ಮಾರಾಟ ಮಾಡಿದ್ದು ಅದರಲ್ಲಿ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದಲ್ಲದೆ ಶಾಲೆಯ ಆವರಣ ಗೋಡೆ ಕೆಡವಿ ಮೈದಾನದಲ್ಲಿ ಗುರುತಿನ ಕಲ್ಲುಗಳನ್ನು ಹಾಕಿ ಮಾರಾಟ ಮಾಡುತ್ತಿದ್ದರೂ ಶಿಕ್ಷಣ ಇಲಾಖೆ ಮೌನ ವಹಿಸಿರುವುದನ್ನು ಡಿವೈಎಫ್ಐ ಖಂಡಿಸುತ್ತದೆ ಮತ್ತು ಅನಧಿಕೃತ ನಿರ್ಮಾಣ ಆಗುತ್ತಿರುವ ಕಟ್ಟಡದ ನಿರ್ಮಾಣವನ್ನು ತಡೆಯಬೇಕೆಂದು ಆಗ್ರಹಿಸುತ್ತದೆ

ಈ ಬಗ್ಗೆ ತಾ12/11/2023 ಆದಿತ್ಯವಾರ ಸಂಜೆ 4ಗಂಟೆಗೆ ಶಾಲೆಯ ಆವರಣದಲ್ಲಿ ಡಿವೈಎಫ್ಐ ನೇತೃತ್ವದಲ್ಲಿ, ನಾಗರಿಕರ, ಹಳೇವಿದ್ಯಾರ್ಥಿ, ಶಾಲೆಯ ಹಿತೈಷಿಗಳ ಸಹಾಭಾಗಿತ್ವದಲ್ಲಿ ಸರಕಾರಿ ಶಾಲೆ ಉಳಿಸಲು, ಶಾಲೆಯ ಭೂ ಕಬಳಿಸಿರುವವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕ ಹಕ್ಕೊತ್ತಾಯ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ