ಇನ್ ಪ್ಯಾಶನ್ ಮಾಲಕ ಪಿ.ಬಿ. ಅಬ್ದುಲ್ ರಝಾಕ್ ನಿಧನ

ಕರಾವಳಿ

ಸಮಾಜ ಸೇವಕ, ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪಿ.ಬಿ ಅಬ್ದುಲ್ ರಝಾಕ್ ರವರು ಸೋಮವಾರ ತಡರಾತ್ರಿ ದುಬೈಯ ಆ್ಯಸ್ಟ‌ರ್ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕಾಟಿಪಳ್ಳದವರಾಗಿದ್ದು, ಮಂಗಳೂರಿನ ಕುಲಶೇಖರದಲ್ಲಿ ವಾಸವಾಗಿದ್ದಾರೆ. ಮಂಗಳೂರಿನಲ್ಲಿ ಇನ್ ಫ್ಯಾಶನ್ ರೆಡಿಮೇಡ್ ಬಟ್ಟೆಯಂಗಡಿ ನಡೆಸುತ್ತಿದ್ದರು. ತಿಂಗಳ ಹಿಂದೆ ದುಬೈಗೆ ತೆರಳಿದ್ದು ಅಲ್ಲಿ ಮೆದುಳು ರಕ್ತಸ್ರಾವಕ್ಕೀಡಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಂಇಯ್ಯತುಲ್ ಫಲಾಹ್ ದ.ಕ.ಮತ್ತು ಉಡುಪಿ ಜಿಲ್ಲಾಧ್ಯಕ್ಷರಾಗಿದ್ದ ಇವರು ಜಂಇಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಟಿಪಳ್ಳದ ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ, ಅಲ್ ವಫಾ ಮತ್ತು ಏಸ್ ಅಕಾಡಮಿಯ ಟ್ರಸ್ಟಿಯಾಗಿದ್ದರು.