HSRP ನಂಬರ್ ಪ್ಲೇಟ್ ಅಳವಡಿಸಲು ನೀಡಲಾಗಿರುವ ಅವಧಿಯನ್ನು ಫೆಬ್ರವರಿ 17-2024ರ ವರೆಗೆ ವಿಸ್ತರಣೆ

ರಾಜ್ಯ

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸೋದು ಕಡ್ಡಾಯಗೊಳಿಸಲಾಗಿತ್ತು. ಇದಕ್ಕಾಗಿ ನವೆಂಬರ್.17 ಡೆಡ್ ಲೈನ್ ನೀಡಲಾಗಿತ್ತು. ಈಗ ಈ ಅವಧಿಯನ್ನು ಫೆ.17, 2024ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ.

ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆಗೆ ಅವಧಿ ವಿಸ್ತರಿಸುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿರುವಂತ ಗಡುವನ್ನು ನವೆಂಬರ್.17ರಿಂದ ಫೆಬ್ರಬರಿ.17, 2024ರವರೆಗೆ ವಿಸ್ತರಣೆ ಮಾಡೋದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಇಂದು ಸಂಜೆ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ – https://transport.karnataka.gov.in ಗೆ ಭೇಟಿ ನೀಡಿ ಮತ್ತು ‘ಬುಕ್ HSRP’ ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ಕೇಳಿದ ಮೂಲ ವಾಹನ ವಿವರವನ್ನು ಭರ್ತಿ ಮಾಡಿ. ನಂತರ HSRP ಅಳವಡಿಸಲು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ ಮತ್ತು ಆನ್ಲೈನ್ನಲ್ಲಿ HSRP ಶುಲ್ಕವನ್ನು ಪಾವತಿಸಲು ಮುಂದುವರಿಯಿರಿ. ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.

ಒಟಿಪಿಯನ್ನು ರಚಿಸಿ ವಾಹನ ಮಾಲೀಕರ ಮೊಬೈಲ್ ಗೆ ಕಳುಹಿಸಲಾಗುತ್ತದೆ. ಮಾಲೀಕರು ತಮ್ಮ ಅನುಕೂಲ ಮತ್ತು ವೆಬ್ಸೈಟ್ಗೆ ಅನುಗುಣವಾಗಿ ಅಳವಡಿಸುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ನಂತರ ಮಾಲೀಕರು HSRP ಅಳವಡಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು. ಕೆಲವು ತಯಾರಕರು ತಮ್ಮ ಮನೆ ಮತ್ತು ಕಚೇರಿಗಳ ಮನೆ ಬಾಗಿಲಿಗೆ HSRP ಸೇವೆಯನ್ನು ಒದಗಿಸುತ್ತಿದ್ದಾರೆ.