ವರದರಾಜ್ ಕೋರ್ಡೆಲ್ ವಿಧಿವಶ

ಕರಾವಳಿ

ಎಡಪದವು ಕೋರ್ಡೆಲ್ ನಿವಾಸಿಯಾಗಿರುವ ವರದರಾಜ್ ಕೋರ್ಡೇಲ್ ರವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಸ್ಥಳೀಯವಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದ ವರದರಾಜ್ ಸಾಮಾಜಿಕವಾಗಿ ಜನಜನಿತರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಊರಿನ ಯುವಕರಿಗೆ ಸ್ಪೂರ್ತಿ ನೀಡಿ, ಯುವಕರ ಮಾರ್ಗದರ್ಶಕರಾಗಿದ್ದರು. ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿರುವ ಅವರ ಅಂತಿಮ ಸಂಸ್ಕಾರ ಕಾರ್ಯ ಎಡಪದವು ಕೋರ್ಡೆಲ್ ನಲ್ಲಿರುವ ಅವರ ಮನೆಯಲ್ಲಿ ನಡೆಯಲಿರುವುದಾಗಿ ಕುಟುಂಬ ವರ್ಗ ತಿಳಿಸಿದೆ. ವರದರಾಜ್ ನಿಧಾನಕ್ಕೆ ಸ್ಪೆಷಲ್ ನ್ಯೂಸ್ ಪತ್ರಿಕಾ ಬಳಗ ತೀವ್ರ ಸಂತಾಪವನ್ನು ಸೂಚಿಸುತ್ತದೆ.