ಮಧ್ಯ ಏಷ್ಯಾದಲ್ಲಿ‌ ಉದ್ವಿಗ್ನತೆ ಉಂಟಾಗಿರೋ ಕಾರಣಕ್ಕೆ ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿದೆ

ಅಂತಾರಾಷ್ಟ್ರೀಯ

ಇಸ್ರೇಲ್‌- ಹಮಾಸ್‌ ಯುದ್ಧದ ಹಿನ್ನಲೆಯಲ್ಲಿ ಮಿಡಲ್‌ ಈಸ್ಟ್‌ನಲ್ಲಿ ಉದ್ವಿಗ್ನತೆ ಉಂಟಾಗಿರೋ ಕಾರಣಕ್ಕೆ ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿರೋದು ಕಂಡು ಬಂದಿದೆ. ಈ ಕುರಿತ ಸ್ಯಾಟಲೈಟ್‌ ಇಮೇಜ್‌ನ್ನು ಅಮೆರಿಕದ ಎನ್‌ಜಿಒ ಒಂದು ರಿಲೀಸ್‌ ಮಾಡಿದೆ

ʻಸೈಟ್‌ 512ʼ ಅನ್ನೋ ಕೋಡ್‌ ಇರುವ ಸೇನಾ ನೆಲೆ ಪ್ರಸ್ತುತ ರಾಡಾರ್‌ ಫೆಸಿಲಿಟಿಯನ್ನ ಹೊಂದಿದ್ದು, ಇಸ್ರೇಲ್‌ ಮೇಲೆ ಹಾರಿ ಬರೋ ಮಿಸೈಲ್‌ಗಳನ್ನ ಡಿಟೆಕ್ಟ್‌ ಮಾಡುತ್ತೆ. ಇದು ಕೇವಲ ಇರಾನ್‌ ಕಡೆಯಿಂದ ಇಸ್ರೇಲ್‌ ಮೇಲೆ ಆಗೋ ಸಂಭಾವ್ಯ ದಾಳಿಗಳನ್ನು ಮಾತ್ರ ಡಿಟೆಕ್ಟ್‌ ಮಾಡುತ್ತೆ. ಆದ್ರೆ ಗಾಜಾ ಪಟ್ಟಿಯಿಂದ ಉಂಟಾಗೋ ದಾಳಿಗಳನ್ನ ಪತ್ತೆ ಮಾಡಲ್ಲ. ಹೀಗಾಗಿ ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ಸುಮಾರು 2 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳ ಹಠಾತ್‌ ದಾಳಿಯನ್ನ ಡಿಟೆಕ್ಟ್‌ ಮಾಡೋಕೆ ಆಗಿಲ್ಲ. ಇದರಿಂದ ಎಚ್ಚೆತ್ತ ಅಮೆರಿಕ, ಈಗ ಇಸ್ರೇಲ್‌ನ ಮೌಂಟ್‌ ಹರ್‌ ಖರೇನ್‌ನಲ್ಲಿರೋ ತನ್ನ ಸೇನಾ ನೆಲೆಯನ್ನು ವಿಸ್ತರಣೆ ಮಾಡ್ತಿದೆ ಅಂತ ವರದಿಯಾಗಿದೆ. ಯುದ್ಧ ಶುರುವಾದ ಎರಡೇ ವಾರಕ್ಕೆ ಇರಾನ್‌ ಬೆಂಬಲಿತ ಲೆಬನಾನ್‌ನ ಉಗ್ರಸಂಘಟನೆ ಸೇರಿದಂತೆ ಇಸ್ರೇಲ್‌ ಹಾಗೂ ಅಮೆರಿಕದ ಕಾಮನ್‌ ಎನಿಮಿಗಳ ಮೇಲೆ ಕಣ್ಣಿಡೋಕೆ ಮಿಡಲ್‌ ಈಸ್ಟ್‌ನಲ್ಲಿ ಅಮೆರಿಕ ತನ್ನ ಪ್ರೆಸೆನ್ಸ್‌ನ್ನ ಹೆಚ್ಚಿಸಿಳ್ಳಲು ಪ್ರಾರಂಭಿಸಿದೆ. ಇದರ ಭಾಗವಾಗಿ ಆ ರೀಜನ್‌ನಲ್ಲಿ ಫೈಟರ್‌ ಜೆಟ್‌ಗಳ ಸಂಖ್ಯೆಯನ್ನೂ ಡಬಲ್‌ ಮಾಡಿದೆ. ಜೊತೆಗೆ ಇಸ್ರೇಲ್‌ನ ಕರಾವಳಿ ಭಾಗದಲ್ಲಿ ಎರಡು ಏರ್‌ಕ್ರಾಫ್ಟ್‌ ಕ್ಯಾರಿಯರ್‌ಗಳನ್ನ ನಿಯೋಜಿಸಿದೆ. ಇನ್ನು ಇಸ್ರೇಲ್‌ ಹಾಗೂ ಮಧ್ಯಪ್ರಾಚ್ಯದಲ್ಲಿ ಇಷ್ಟೆಲ್ಲಾ ಭದ್ರತೆ ಹೆಚ್ಚಿಸುವಲ್ಲಿ ತೊಡಗಿರೋ ಅಮೆರಿಕ, ಇಸ್ರೇಲ್‌ ಯುದ್ಧಕ್ಕೆ ಸೇನಾ ಟ್ರೂಪ್‌ಗಳನ್ನ ಕಳಿಸೋ ಯಾವುದೇ ಪ್ಲಾನ್‌ ಅಂತ ಹೇಳಿದೆ. ಆದ್ರೆ ಗಾಜಾದ ಬಳಿಯಲ್ಲಿ ಸೇನಾ ನೆಲೆಗಳು ಹಾಗೂ ಗುಪ್ತಚರ ಅಧಿಕಾರಿಗಳ ನಿಯೋಜನೆಗೆ ಬೇಕಾದ ಎಲ್ಲಾ ರೀತಿಯ ಫೆಸಿಲಿಟಿಗಳನ್ನ ನಿರ್ಮಿಸೋಕೆ ಇಸ್ರೇಲ್‌ನ ಕಂಪನಿಯೊಂದಕ್ಕೆ ಅಮೆರಿಕ ಟೆಂಡರ್‌ ಕೊಟ್ಟಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅತ್ತ ನಿನ್ನೆ ತಡರಾತ್ರಿ ನಡೆದ ದಾಳಿಯಲ್ಲಿ ಹಮಾಸ್‌ ಉಗ್ರರು ಶಸ್ತ್ರಾಸ್ತ್ರ ಸ್ಟೋರ್‌ ಮಾಡೋಕೆ ಹಾಗೂ ತರಬೇತಿ ನೀಡಲು ಬಳಸುತ್ತಿದ್ದ ಸುಮಾರು 200 ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಅಂತ ಇಸ್ರೇಲ್‌ ಸೇನೆ ಹೇಳಿದೆ.

ಇತ್ತ ಇಸ್ರೇಲ್‌ ದಾಳಿಗೆ ತುತ್ತಾಗಿ ನಲುಗಿ ಹೋಗ್ತಿರೋ ಗಾಜಾದ ಅಲ್‌ ಶಿಫಾ ಆಸ್ಪತ್ರೆ ಅಕ್ಷರಶಃ ಸ್ಮಶಾನವಾಗಿ ಬದಲಾಗಿದೆ. ಈ ಆಸ್ಪತ್ರೆಯಲ್ಲಿ ಸುಮಾರು 179 ಮೃತದೇಹಗಳಿದ್ದು, ಅವುಗಳನ್ನ ಆಸ್ಪತ್ರೆಯ ಕಾಂಪೌಂಡ್‌ನಲ್ಲೇ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲು ಮುಂದಾಗಿರೋದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಸೇರಿದಂತೆ ಇತರ ಗಂಭೀರ ಸಮಸ್ಯೆಗಳು ಉಂಟಾಗಿವೆ. ಈ ಕಾರಣಕ್ಕೆ ಆಸ್ಪತ್ರೆ ಬಳಿಯೇ ಅಂತ್ಯ ಸಂಸ್ಕಾರ ಮಾಡೋಕೆ ಶುರು ಮಾಡ್ತೀವಿ ಅಂತ ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್‌ ಅಲ್‌ ಖಿದ್ರಾ ಹೇಳಿದ್ದಾರೆ.ಇತ್ತ ಅಕ್ಟೋಬರ್‌ 7ರಂದು ಇಸ್ರೇಲ್‌- ಹಮಾಸ್‌ ಯುದ್ಧ ಶುರುವಾದಾಗಿನಿಂದ ಫ್ರಾನ್ಸ್‌ನಲ್ಲಿ 1,500ಕ್ಕೂ ಹೆಚ್ಚು ಯಹೂದಿ ವಿರೋಧಿ ಘಟನೆಗಳು ವರದಿಯಾಗಿವೆ ಅಂತ ಫ್ರಾನ್ಸ್‌ ಹೇಳಿದೆ.