ಆಧಾರ್ ಆಫ್ ಡೇಟ್ ಗೆ ಡಿಸೆಂಬರ್ 14 ಕೊನೆಯ ದಿನ. ತಪ್ಪಿದಲ್ಲಿ ಭಾರಿ ದಂಡ ಸಾಧ್ಯತೆ

ರಾಷ್ಟ್ರೀಯ

10 ವರ್ಷ ಅವದಿ ಮುಗಿದ ಆಧಾರ್ ಕಾರ್ಡ್ ಗೆ ದಾಖಲಾತಿ ಅಪ್ಲೋಡ್ ಮಾಡಿ ಆಧಾರ್ ಕಾರ್ಡ್ ನವೀಕರಿಸಲು ಡಿಸೆಂಬರ್ 14 ಕೊನೆಯ ದಿನಾಂಕ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ. ತಪ್ಪಿದಲ್ಲಿ ಆಧಾರ್ ಕಾರ್ಡ ನಿಷ್ಕ್ರೀಯಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ.

ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು 10 ವರ್ಷಕ್ಕೆ ಒಮ್ಮೆ ತಮ್ಮ ಆಧಾರ್ ಕಾರ್ಡ್ ನಲ್ಲಿ ದಾಖಲಾಗಿರುವ ಗುರುತಿನ ವಿವರ ಮತ್ತು ವಿಳಾಸದ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ.

ಇದರ ಪ್ರಕಾರ 10 ವರ್ಷ ಮುಗಿದಿರುವ ಆಧಾರ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ ಅನ್ನು 14 ಡಿಸೆಂಬರ್ 2023ರ ಮುಂಚಿತವಾಗಿ ಉಚಿತವಾಗಿ ಆಧಾರ್ ವೆಬ್ಸೈಟ್ uidai.gov.in ಗೆ ಲಾಗಿನ್ ಅಗಿ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರ ಭೇಟಿ ಮಾಡಿ ನವೀಕರಿಸಬವುದು ಎಂದು ಆಧಾರ್ ಪ್ರಾಧಿಕಾರ ಜಾಲತಾಣದಲ್ಲಿ(uidai) ಪ್ರಕಟಣೆ ಹೊರಡಿಸಿದೆ.

ಒಂದು ವೇಳೆ ನವೀಕರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ದಂಡ ಕಟ್ಟಬೇಕಾಗಿ ಬರಬಹುದು. ಪಾನ್ ಕಾರ್ಡ್, ಬ್ಯಾಂಕ್ ಲಿಂಕ್ ಗೆ ಸಮಯಾವಕಾಶ ಕೋರಿ, ಆನಂತರ ಭಾರೀ ದಂಡ ಘೋಷಿಸಿತ್ತು. ಆಧಾರ್ ನವೀಕರಣಕ್ಕೂ ಇದೇ ಮಾನದಂಡ ಪ್ರಯೋಗಿಸುವ ಸಾಧ್ಯತೆ ಇದೆ.

ಆಧಾರ್ ನವೀಕರಣಕ್ಕೆ ಯಾವೆಲ್ಲ ದಾಖಲಾತಿಗಳನ್ನು ಒದಗಿಸಬೇಕು?

ಇತ್ತೀಚಿನ ಗುರುತಿನ ಪುರಾವೆ(ಉದಾ: ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲಾತಿ) ಮತ್ತು ವಿಳಾಸದ ಪುರಾವೆ( ವೋಟರ್ ಐಡಿ ,ಪಾನ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಇತ್ಯಾದಿ) ಈ ಎರಡು ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬವುದಾಗಿದೆ.

ಈ ರೀತಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ಆಧಾರ್ ಡೇಟಾಬೇಸ್‌ನಲ್ಲಿ ದಾಖಲೆಗಳನ್ನು ನವೀಕರಿಸುವುದರಿಂದ ನಿಮ್ಮ ಆಧಾರ್ ನವೀಕರಣ ಮಾಡಿದಂತಾಗುತ್ತದೆ. ನೀವು ಸಲ್ಲಿಸಿದ ದಾಖಲೆಗಳಲ್ಲಿನ ವಿವರಗಳು ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ನಿಮ್ಮ ವಿವರಗಳೊಂದಿಗೆ ಹೊಂದಿಕೆಯಾಗಬೇಕು. ಆಧಾರ್ ಡೇಟಾಬೇಸ್‌ನಲ್ಲಿ ನಿಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಆಧಾರ್ ಪ್ರಾಧಿಕಾರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ