ಬಜಪೆ: ಗಾಂಜಾ ಆರೋಪಿಗಳ ಬಂಧನ

ಕರಾವಳಿ

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಪೊಳಲಿ ದ್ವಾರದಿಂದ ಅಡ್ಡೂರು ಕಡೆಗೆ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ದಿನಾಂಕ 17-11-2023 ಬೆಳಿಗ್ಗೆ ಸುಮಾರು 11.15 ರ ಹೊತ್ತಿಗೆ ಕಾಜಿಲ ಎಂಬಲ್ಲಿ ಉಪನಿರೀಕ್ಷಕರಾದ ಗುರಪ್ಪ ಶಾಂತಿ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ KA 19 EU 4898 ನಂಬ್ರದ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ 3 ಜನ ಬರುತ್ತಿರುವುದನ್ನು ಗಮನಿಸಿ ನಿಲ್ಲಿಸಲು ಸೂಚಿಸಿದಾಗ ಪರಾರಿಯಾಗಲು ಯತ್ನಿಸಿದ ಮೂವರನ್ನು ಹಿಡಿದು ವಿಚಾರಿಸಿದಾಗ ಸ್ಕೂಟರಿನ ಡಿಕ್ಕಿಯಲ್ಲಿ ಮಾದಕ ದ್ರವ್ಯ ಗಾಂಜಾ ಸಾಗಿಸುವುದು ಪತ್ತೆಯಾಗಿದ್ದು, ಆರೋಪಿಗಳಿಂದ 6000 ಮೌಲ್ಯದ 340 ಗ್ರಾಂ ತೂಕದ ಗಾಂಜಾವನ್ನು, ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು 22 ವರ್ಷ ಪ್ರಾಯದ ಕೊಳತ್ತಮಜಲು ನಿವಾಸಿ ತೇಜಾಕ್ಷ ಪೂಜಾರಿ, 24 ವರ್ಷದ ಪಲ್ಲಮಜಲು ನಿವಾಸಿ ಸಂತೋಷ್ ಪೂಜಾರಿ, 26 ವರ್ಷದ ತೆಂಕ ಎಡಪದವು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂದು ತಿಳಿದು ಬಂದಿದೆ.

ಮಾನ್ಯ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಬಜಪೆ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.