ಭಾರತದ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಖತರ್ ನ್ಯಾಯಾಲಯ

ಅಂತಾರಾಷ್ಟ್ರೀಯ

ಭಾರತದ ನೌಕಾಪಡೆಯ 8 ಮಂದಿ ಮಾಜಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಪಡಿಸಿರುವುದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್‌ ನ್ಯಾಯಾಲಯ ಪುರಸ್ಕರಿಸಿದೆ. ಅಲ್ಲದೇ, ಪ್ರಕರಣ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವ ಮುನ್ನ ಮತ್ತೆ ಮರುಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ದಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ ಹಾಗೂ ಕನ್ಸಲ್ಟೆನ್ಸಿ ಸೇವೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ನೌಕಾ ಸಿಬ್ಬಂದಿಯನ್ನು 2022ರಲ್ಲಿ ಬಂಧಿಸಲಾಗಿತ್ತು. ಅದಾದ ಒಂದು ವರ್ಷದ ಬಳಿಕ ಅ.26ರಂದು ಬಂಧಿತರಿಗೆ ಕತಾರ್‌ ಕೋರ್ಟ್‌ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಇದಕ್ಕೆ ಭಾರತ ಆಕ್ಷೇಪಿಸಿ ಬಂಧನಕ್ಕೆ ಕಾರಣವೇನು? ಯಾವ ಅಪರಾಧಕ್ಕೆ ಮರಣ ದಂಡನೆ ಎಂದು ಪ್ರಶ್ನಿಸಿ, ಈ ಸಂಬಂಧ ಮೇಲ್ಮನವಿಯನ್ನೂ ಸಲ್ಲಿಕೆ ಮಾಡಿತ್ತು. ಅದರಂತೆ ಮೇಲ್ಮನವಿ ಆಲಿಸಲು ನ್ಯಾಯಾಲಯ ಸಮ್ಮತಿಸಿದೆ.