ಮನೆಯ ಶೆಡ್ಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾರ್ಮಾಡಿ ಕಕ್ಕಿಂಜೆ ಎಂಬಲ್ಲಿ ನವೆಂಬರ್ 9 ರಂದು ರಾತ್ರಿ ನೌಫಲ್ ಎಂಬವರು ತಮ್ಮ ಕಾರ್ ಶೆಡ್ಡಿನಲ್ಲಿ KA-02-MD-9042 ನೇ ಸಂಖ್ಯೆಯ ಇನ್ನೋವಾ ಕಾರನ್ನು ನಿಲ್ಲಿಸಿದ್ದು. ಮರುದಿನ ಬೆಳಿಗ್ಗೆ ನೋಡಿದಾಗ ಕಾರು ಶೆಡ್ಡಿನಲ್ಲಿ ಕಾಣದೇ ಇರುವುದರಿಂದ ಈ ಬಗ್ಗೆ ಆಸುಪಾಸುಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು ಈ ಮೊದಲು ನೌಫಾಲ್ ನ ಗೆಳೆಯ ಸೈಪುದ್ದಿನ್ ಎಂಬಾತನ ಗೆಳೆಯರಾದ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿಯವರು ಸದ್ರಿ ಕಾರನ್ನು ಬಾಡಿಗೆಗೆ ನೀಡುವಂತೆ ಕೇಳಿದಾಗ ನೀಡದೇ ಇದ್ದುದ್ದರಿಂದ ಸದ್ರಿ ಕಾರನ್ನು ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಯವರು ಕಳವು ಮಾಡಿ ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ಇರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸದ್ರಿ ಪ್ರಕರಣ ಬಗ್ಗೆ ದೂರು ನೀಡಲಾಗಿತ್ತು.
ಪ್ರಕರಣದ ಬಗ್ಗೆ ಧರ್ಮಸ್ಥಳ ಪೊಲೀಸರ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ನ.24 ರಂದು ಕಳ್ಳತನವಾದ ಇನೋವಾ ಕಾರು ಸಮೇತ, ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿನ್ನಿಗೋಳಿ ತಾಳಿಪ್ಪಡಿ ಗ್ರಾಮದ ಉಮಾ ನಿವಾಸಿ ಜಯರಾಮ ಶೆಟ್ಟಿ ಮಗ ಅಜಯ್ ಶೆಟ್ಟಿ(32) ,ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ದಿ.ಸುರೇಶ್ ಶೆಟ್ಟಿ ಮಗ ಸೂರಜ್ ಶೆಟ್ಟಿ(23), ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ(30), ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಪರೆಕಲ್ ನಿವಾಸಿ ಪೂವಪ್ಪ ಪೂಜಾರಿ ಮಗ ಕಿಶೋರ್.ಟಿ(32) ಎಂಬವರನ್ನು ನ.24 ರಂದು ಬೆಳಗ್ಗೆ ವಶಕ್ಕೆ ಪಡೆದು ಅವರು ಕಳ್ಳತನ ಮಾಡಿಕೊಂಡು ಹೋಗಿದ್ದ KA-02-MD -9042 ನಂಬರಿನ ಇನ್ನೋವಾ ಕಾರನ್ನು ಸ್ವಾಧೀನಪಡಿಸಿಕೊಂಡು ನಂತರ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯ ನಾಲ್ಕು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್.ಸಿ.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಂ.ಎನ್ ರವರ ನಿರ್ದೇಶನದಂತೆ ಬಂಟ್ವಾಳ ಡಿ.ವೈಎಸ್.ಪಿ ಶ್ರೀ ಪ್ರತಾಪ್ ಸಿಂಗ್ ಥೋರಾಟ್ ರವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ನಾಗೇಶ್ ಕದ್ರಿಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಅನೀಲ್ ಕುಮಾರ್.ಡಿ ಮತ್ತು ಸಬ್ ಇನ್ಸ್ಪೆಕ್ಟರ್ ಸಮರ್ಥ ರವೀಂದ್ರ ಗಾಣಿಗೇರ ಹಾಗೂ ಸಿಬ್ಬಂದಿ ಎ.ಎಸ್.ಐಗಳಾದ ಸಾಮ್ಯುವೆಲ್ ಮತ್ತು ಪೌಲೋಸ್ ಹಾಗೂ ಸಿಬ್ಬಂದಿ ರಾಜೇಶ್.ಎನ್, ಪ್ರಶಾಂತ್, ಮಂಜುನಾಥ್, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.