ಸೌದಿ ಅರೇಬಿಯಾ: ಮಂಗಳೂರು ಯೂತ್ ಫೆಡರೇಷನ್ ಅಸ್ತಿತ್ವಕ್ಕೆ

ಅಂತಾರಾಷ್ಟ್ರೀಯ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾರ್ಥಿವೇತನ, ತೀರಾ ಬಡವರಿಗೆ ಅವಶ್ಯಕವಾದ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಹಲವಾರು ಅಂಶಗಳನ್ನೊಳಗೊಂಡ ಸಮಾಜಮುಖಿ ಕಾರ್ಯಗಳ ಅಭಿವೃಧ್ಧಿಗಾಗಿ ನವೆಂಬರ್ 18, 2023 ರ ಶನಿವಾರದಂದು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಮಂಗಳೂರು ಯೂತ್ ಫೆಡರೇಷನ್ (MYF) ರಚಿಸಲಾಯಿತು.

ಮಂಗಳೂರು ಯೂತ್ ಪೆಡೆರೇಶನ್ ಇದರ ಸಲಹೆಗಾರರಾಗಿ ಮುಶ್ತಾಖ್ ಕುದ್ರೋಳಿ ಮತ್ತು ಸಿರಾಜ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪೆಡೆರೇಷನ್ ಅಧ್ಯಕ್ಷರಾಗಿ ಫಹೀಂ ಅಖ್ತರ್, ಪ್ರಧಾನ ಕಾರ್ಯದರ್ಶಿಯಾಗಿ ಶಾಹ್ ನವಾಝ್, ಉಪಾಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಕುದ್ರೋಳಿ ಮತ್ತು ಅಶ್ಫಾಖ್ ಇಬ್ರಾಹೀಂ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶಿಹಾಬ್ ಬಂದರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಫಝಲ್,ಮುನೀರ್ ಕಂದಕ್,ತನ್ ಝೀಲ್, ಐಮನ್, ಮುಹಮ್ಮದ್ ಅಶ್ರಫ್,ಆರಿಫ್, ಮನ್ ಝರ್, ಝಿಯಾವುಲ್ ರಹ್ಮಾನ್,ಅಬ್ದುಲ್ ನಿಹಾನ್, ಮುಹಮ್ಮದ್ ತೌಫೀಖ್ ರವರನ್ನು
ಆರಿಸಲಾಯಿತು.