ಅಪರಾಧ ಆಧಾರಿತ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಕೊನೆಗೆ ತಾನೇ ಕೊಲೆಗಾರ್ತಿ ಆದವಳ ವಿಚಿತ್ರ ಕಥೆಯಿದು

ಅಂತಾರಾಷ್ಟ್ರೀಯ

ಜಗತ್ತಿನಲ್ಲಿ ಎಂಥೆಂಥಾ ವಿಚಿತ್ರ ಹಾಗೂ ಭಯಾನಕ ವ್ಯಕ್ತಿಗಳಿರುತ್ತಾರೆ ಎಂಬುದಕ್ಕೆ ಈಕೆಯೇ ಸಾಕ್ಷಿ. ಅಪರಾಧ ಆಧಾರಿತ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಕೊನೆಗೆ ತಾನೇ ಕೊಲೆಗಾರ್ತಿಯಾದವಳ ವಿಚಿತ್ರ ಕಥೆಯಿದು. ದಕ್ಷಿಣ ಕೊರಿಯಾದಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಹತ್ಯೆಗೈದ ಆರೋಪದಲ್ಲಿ ಜಂಗ್ ಯೂ-ಜಂಗ್ ಎಂಬ ಯುವತಿಗೆ ದಕ್ಷಿಣ ಕೊರಿಯಾದ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ವಿಚಾರಣೆ ವೇಳೆ ತಾನು ಕೊಲೆ ಹೇಗೆ ಮಾಡುವುದು ಮತ್ತು ಕೊಲೆ ಬಳಿಕ ಏನೇನು ಆಗುತ್ತದೆ ಎಂಬ ಬಗ್ಗೆ ಕುತೂಹಲದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಜಂಗ್ ಯೂ-ಜಂಗ್ ಆರಂಭದಿಂದಲೂ ಅಪರಾಧ, ಪತ್ತೆಧಾರಿ ಮೊದಲಾದ ಪ್ರಕಾರಗಳ ಕಾದಂಬರಿ ಓದುವ ಹವ್ಯಾಸ ಹೊಂದಿದ್ದಳು. ಅಷ್ಟೇ ಅಲ್ಲದೇ ಟಿವಿ, ಮೊಬೈಲ್ ನಲ್ಲೂ ಅಂಥದ್ದೇ ಕಾರ್ಯಕ್ರಮಗಳನ್ನು ನೋಡುತ್ತಿದ್ದಳು. ಇದರಿಂದ ಬಹಳಷ್ಟು ಪ್ರಚೋದನೆಗೊಂಡಿದ್ದ ಆಕೆ ಯಾರನ್ನಾದರೂ ಕೊಲೆ ಮಾಡಲೇಬೇಕೆಂದು ನಿರ್ಧರಿಸಿಬಿಟ್ಟಿದ್ದಳು.

ಆನ್ನ್ಲೈನ್ ಟ್ಯೂಟರಿಂಗ್ ಆಪ್ ಬಳಸಿ ತನ್ನ ಮನೆಪಾಠ ಹೇಳಿಕೊಡುವ ಟೀಚರ್ ಗಾಗಿ ಹುಡುಕಾಟ ನಡೆಸಿದ್ದಾಳೆ. ಈ ವೇಳೆ 26 ವರ್ಷದ ಇಂಗ್ಲೀಷ್ ಶಿಕ್ಷಕಿಯೋರ್ವಳು ಜಂಗ್ ಯೂ-ಜಂಗ್ ಗೆ ಪಾಠ ಹೇಳಿಕೊಡಲು ಒಪ್ಪಿದ್ದಾಳೆ. ಆಕೆಯನ್ನೇ ತನ್ನ ಟಾರ್ಗೆಟ್ ಮಾಡಿಕೊಂಡ ಜಂಗ್ ಯೂ-ಜಂಗ್ ಕಳೆದ ಜೂನ್ ನಲ್ಲಿ 100 ಕ್ಕೂ ಮಿಕ್ಕ ಅಧಿಕ ಬಾರಿ ಇರಿದು ಕೊಂದಿದ್ದಳು. ಬಳಿಕ ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದಳು. ಆಕೆ ಪ್ರಯಾಣಿಸಿದ್ದ ಟ್ಯಾಕ್ಸಿ ಡ್ರೈವರ್ ಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.