ಮಕ್ಕಳ ಮಾರಾಟ ದಂದೆಯನ್ನು ಪತ್ತೆಹಚ್ಚಿದ ಬೆಂಗಳೂರು ಸಿಸಿಬಿ ಪೊಲೀಸರು; ಹೆರುವ ಬಡ ತಾಯಂದಿರೇ ಇವರ ಟಾರ್ಗೆಟ್, ನಾಲ್ವರ ಬಂಧನ

ರಾಜ್ಯ

ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಬಳಿಕ ಮತ್ತೊಂದು ದಂಧೆ ಬೆಳಕಿಗೆ ಬಂದಿದ್ದು, ನಗರದಲ್ಲಿ ಹಸುಗೂಸುಗಳ ಮಾರಾಟದ ಕರಾಳ ದಂಧೆ ಬಯಲಾಗಿದೆ. ಎಳೆ ಕಂದಮ್ಮಗಳನ್ನು ಮಾರಾಟ ಮಾಡುವ ಬೃಹತ್ ಜಾಲವೊಂದನ್ನು ಬಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈವರೆಗೆ ಸುಮಾರು 55 ಕ್ಕು ಹೆಚ್ಚು ಮಕ್ಕಳ ಮಾರಾಟವಾಗಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚು ಮಕ್ಕಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗಿದೆ.. ಮಾರಾಟವಾಗಿದ್ದ 10 ಮಕ್ಕಳ ವಿಳಾಸ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ. ಒಂದು ಮಗು ಹೆತ್ತು ಕೊಟ್ಟರೆ ಮೂರು ಲಕ್ಷ ರೂಪಾಯಿ. ಅಂತಹಾ ಮಹಿಳೆಯರನ್ನು ಪತ್ತೆ ಹಚ್ಚುವ ಮಧ್ಯವರ್ತಿಗಳಿಗೆ ಐದು ಲಕ್ಷ. ಒಟ್ಟು ಒಂದು ಮಗು ಪತ್ತೆ ಹಚ್ಚಿ ಮಾರಾಟ ಮಾಡಲು 8 ಲಕ್ಷ ಹಣದ ಆಫರ್ ನೀಡಿದ್ದಾರೆ. ಐವಿಎಫ್, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇಂತಹವರಿಗೆ ಗರ್ಭಿಣಿಯಾಗಿದ್ದು, ಮನೆಯಲ್ಲಿ ಅರ್ಥಿಕ ಸಂಕಷ್ಟ ಇರುವ ಮಹಿಳೆಯರೇ ಟಾರ್ಗೆಟ್ ಆಗಿದ್ದಾರೆ. ಅಥವಾ ಎರಡು ಮೂರು ಮಕ್ಕಳಿದ್ದು, ಮತ್ತೆ ಗರ್ಭಿಣಿಯಾಗಿ ಕಷ್ಟದಲ್ಲಿರುವ ಮಹಿಳೆಯರು ಕೂಡ ಇವರಿಗೆ ಟಾರ್ಗೆಟ್. ಅಂತ ಗರ್ಭಿಣಿ ಸ್ತ್ರೀಯರನ್ನು ಪತ್ತೆ ಹಚ್ಚಿ, ಹೆರಿಗೆ ನಂತರ ಮಗು ಕೊಟ್ಟರೆ ದೊಡ್ಡ ಮೊತ್ತದ ಹಣ ಕೊಡುವ ಆಮಿಷ ಈ ಗ್ಯಾಂಗ್ ನವರು ಮಾಡುತ್ತಾರೆ. ಲಕ್ಷ ಲಕ್ಷ ಹಣ ಕೊಡುತ್ತೇವೆ ಎಂದು ಆಮಿಷ ಒಡ್ಡುತ್ತಾರೆ. ಅದಕ್ಕಾಗಿ ಕೆಲವು ಐವಿಎಫ್ ಕೇಂದ್ರಗಳು, ರಕ್ತ ಪರೀಕ್ಷೆ ಕೇಂದ್ರಗಳ ಜೊತೆ ಆರೋಪಗಳು ಶಾಮೀಲಾಗಿದ್ದಾರೆ.

ಮಕ್ಕಳನ್ನು ಹೇರಲು ಕೂಲಿ ಮಾಡುವ ಮಹಿಳೆಯರನ್ನು ಹೆಚ್ಚಾಗಿ ಹುಡುಕುತ್ತಿದ್ದ ಆರೋಪಿಗಳ ಜೊತೆಗೆ ವೈದ್ಯರೊಬ್ಬರ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗುತ್ತಿದೆ. ವೈದ್ಯರ ಪತ್ತೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಮಕ್ಕಳ ಮಾರಾಟ ಜಾಲ ಪತ್ತೆಗೆ ಒಂದು ತಿಂಗಳುಗಳ ಕಾಲ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮಗು ಮಾರುವವರಂತೆ ಹೋಗಿದ್ದ ಸಿಸಿಬಿ ಪೊಲೀಸರು, ರಾಜರಾಜೇಶ್ವರಿನಗರದಲ್ಲಿ ಮಗು ಮಾರಾಟ ಜಾಲಕ್ಕೆ ಖೆಡ್ಡ ತೋಡಿದ್ದರು. ಮಾರಾಟ ಜಾಲದಲ್ಲಿ ಮಹಾಲಕ್ಷ್ಮೀ ಎಂಬಾಕೆಯೇ ಮಾಸ್ಟರ್ ಮೈಂಡ್. ಮಹಾಲಕ್ಷ್ಮೀ ಸೇರಿ ತಮಿಳುನಾಡಿನ ಈರೋಡ್ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದಕ್ಕೂ ಮುಂಚೆ ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಪೈಲ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್, ಸರಿ ಸುಮಾರು 900 ಕ್ಕೂ ವಿುಕ್ಕ ಗರ್ಭಪಾತ ಮಾಡಿಸಿ ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಅ. 15ರಂದು ಭ್ರೂಣ ಲಿಂಗ ಪತ್ತೆಗಾಗಿ ಬೆಂಗಳೂರಿನಿಂದ ಮಂಡ್ಯಕ್ಕೆ ಗರ್ಭಿಣಿಯೊಬ್ಬರನ್ನು ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಕಾರು ನೋಡಿ ಅನುಮಾನಗೊಂಡಿದ್ದ ಪೊಲೀಸರು, ಬೆನ್ನಟ್ಟಿ ಕಾರು ನಿಲ್ಲಿಸಿದ್ದರು. ಕಾರಿನಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ, ಭ್ರೂಣ ಲಿಂಗ ಪತ್ತೆ ಜಾಲದ ಮಾಹಿತಿ ಸಿಕ್ಕಿತ್ತು. ವೈದ್ಯ ಚಂದನ್, ಪ್ರತಿ ತಿಂಗಳು 25 ಗರ್ಭಪಾತ ಮಾಡುತ್ತಿದ್ದ. ಮೂರು ವರ್ಷಗಳಿಂದ ಈತ ಕೃತ್ಯ ಎಸಗುತ್ತಿದ್ದ. ಆರೋಪಿ ವಿರೇಶ್ ನೀಡಿರುವ ಪಟ್ಟಿ ಪ್ರಕಾರ ಚಂದನ್ ಇದುವರೆಗೂ 900 ಕ್ಕೂ ಮಿಕ್ಕ ಗರ್ಭಪಾತ ಮಾಡಿದ್ದಾನೆ. ರಾಜ್ಯವ್ಯಾಪಿ ಹರಡಿರುವ ಜಾಲ ಬೆಂಗಳೂರು ಮಂಡ್ಯ ಮೈಸೂರು ಹಾಗೂ ರಾಮನಗರದಲ್ಲಿ ಭ್ರೂಣ ಲಿಂಗ ಪತ್ತೆ ಜಾಲ ಹಬ್ಬಿದೆ. ಆರೋಪಿ ವೀರೇಶ್ ಪರಿಚಯಸ್ಥರ ಮೂಲಕ ಗರ್ಭಿಣಿ ಹಾಗೂ ಅವರ ಕುಟುಂಬದವರನ್ನು ಸಂಪರ್ಕಿಸುತ್ತಿದ್ದ. ಹೆಣ್ಣು ಭ್ರೂಣ ಪರೀಕ್ಷೆ ಮಾಡುವುದಾಗಿ ಹೇಳಿ ಮಂಡ್ಯ ಜಿಲ್ಲೆಯ ಆಲೆಮನೆಯೊಂದರಲ್ಲಿ ನಿರ್ಮಿಸಿದ್ದ ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದ. ಹೆಣ್ಣು ಭ್ರೂಣ ಎಂಬುದು ಗೊತ್ತಾಗುತ್ತಿದ್ದಂತೆ ಹಲವರು ಗರ್ಭಪಾತ ಮಾಡುವಂತೆ ಕೋರುತ್ತಿದ್ದರು. ಅಂಥ ಗರ್ಭಿಣಿಯರಿಂದ ₹.20 ಸಾವಿರದಿಂದ ₹. 25 ಸಾವಿರ ಪಡೆದು ಗರ್ಭಪಾತ ಮಾಡುತ್ತಿದ್ದರು.