ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯನಿರ್ದೇಶಕ ಗಂಗಾಧರ್ ಗೌಡ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ವಿಮ್ಸ್ನ ಟ್ರಾಮಾ ಕೇರ್ ಸೆಂಟರ್ನಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿದ್ದ ಮಹಿಳೆ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಗಂಗಾಧರ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ
ನೇಮಕಾತಿ ಆದೇಶ ಪ್ರತಿ ಪಡೆಯಲು ಹೋದಾಗ ಕೈ ಚಾಚಿ ಅಪ್ಪಿಕೊಳ್ಳಲು ಬಂದಿದ್ದರು. ಸಹಕಾರ ಮಾಡದಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ವಿಮ್ಸ್ ಸಿಬ್ಬಂದಿಗಳಾಗಿರುವ ಪಾರ್ವತಿ ಹಾಗೂ ಶಿವು ನಾಯ್ಕ ಎನ್ನುವರಿಂದ ಗಂಗಾಧರ್ ಗೌಡ ಅವರ ಬಳಿ ಹೋಗುವಂತೆ ಕಿರುಕುಳ ಎಂದು ಆರೋಪಿಸಲಾಗಿದೆ.