ಫೆಡೆಕ್ಸ್ ಕೊರಿಯರ್ ಪಾರ್ಸಲ್ ಹೆಸರಿನಲ್ಲಿ ಸೈಬರ್ ವಂಚನೆ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್ ಸೈಬರ್ ಕ್ರೈಮ್ ಠಾಣೆ ಪೊಲೀಸರು ಬಂಧಿಸಿ 13.17 ಲಕ್ಷ ಹಣ ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 19 ಲಕ್ಷ ಹಣ ಪ್ರೀಜ್ ಮಾಡಿದ್ದಾರೆ. ಅಲ್ಲದೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್, ವಿವಿಧ ಬ್ಯಾಂಕ್‍ನ 148 ಖಾತೆಗಳ ಪ್ರೀಜ್, ಚೆಕ್‍ಬುಕ್, ಪಾಸ್‍ಬುಕ್ ಮತ್ತು ಎಟಿಎಂ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ.10ರಂದು ವಾಟ್ಸ್‍ಫ್ ಆಡಿಯೋ ಕಾಲ್‍ನಿಂದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ತಾವು ಮುಂಬೈ ಕ್ರೈಂ ಬ್ಯ್ರಾಂಚ್ ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ.
ನಿಮ್ಮ ಪತ್ನಿಯ ಹೆಸರಿನಲ್ಲಿ ಫೆಡೆಕ್ಸ್ ಕೊರಿಯರ್‍ನಲ್ಲಿ ಮುಂಬೈನಿಂದ ಥೈಲ್ಯಾಂಡ್ ದೇಶಕ್ಕೆ ಕಾನೂನುಬಾಹಿರ ಪಾರ್ಸಲ್‍ಗಳಾದ 4 ಎಕ್ಪೈರಿ ಪಾಸ್‍ಪೋರ್ಟ್, 2.35 ಕೆ.ಜಿ ಬಟ್ಟೆಗಳು, 2 ಪೆನ್‍ಡ್ರೈವ್, 1 ಲ್ಯಾಪ್‍ಟಾಪ್ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ದಾಖಲಾತಿಗಳು ಹಾಗೂ 140 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ಅಲ್ಲದೆ ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆದು ಅದರ ಮೂಲಕ ಮನಿ ಲಾಂಡರಿಂಗ್ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಆದ ಕಾರಣ ನಿಮ್ಮ ಬ್ಯಾಂಕ್ ಖಾತೆಯನ್ನು ಆರ್.ಬಿ.ಐ ನವರು ಪ್ರೀಜ್ ಮಾಡುವ ಸಂಭವವಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ನಿಮ್ಮ ಬ್ಯಾಂಕ್ ಸ್ಟೆಟ್‍ಮೆಂಟ್‍ಅನ್ನು ತನಿಖೆಗಾಗಿ ವಿಚಾರಿಸಬೇಕಾಗಿದೆ ಎಂದು ಆ ವ್ಯಕ್ತಿಯನ್ನು ನಂಬಿಸಿ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಾಗೂ ತನಿಖಾ ವಿಚಾರಣಾ ಸಲುವಾಗಿ ನೀವು ಮುಂಗಡ ಹಣ ನೀಡಬೇಕು. ತನಿಖೆ ಮುಗಿದ ನಂತರ ಹಣವನ್ನು ವಾಪಸು ತಮ್ಮ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದಾರೆ.
ವಂಚಕರು ಈ ವ್ಯಕ್ತಿಯಿಂದ ಹೆಚ್.ಡಿಎಫ್.ಸಿ ಬ್ಯಾಂಕ್ ಖಾತೆಯಿಂದ 66 ಲಕ್ಷ ಮತ್ತು ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಯಿಂದ 42 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 8 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ. ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಐಟಿ ಆಕ್ಟ್ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು