ಕ್ರಿಮಿನಲ್​ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್ ಪೋರ್ಟ್ ನವೀಕರಣ, ಮರು ವಿತರಣೆ ನಿಷೇಧಿಸಲಾಗಿದೆ: ಹೈಕೋರ್ಟ್

ರಾಜ್ಯ

ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್ ಪೋರ್ಟ್ ನೀಡುವುದು, ನವೀಕರಣ ಅಥವಾ ಮರು ವಿತರಣೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ನಿಯಮವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಬಾಕಿ ಇರುವ ಸಂತೋಷ ಬೀಜಾಡಿ ಶ್ರೀನಿವಾಸ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ವ್ಯಕ್ತಿಯ ಕ್ರಿಮಿನಲ್​ ಮೊಕದ್ದಮೆಯನ್ನು ಪರಿಗಣಿಸದೆ ಆತನಿಗೆ ಪಾಸ್ ಪೋರ್ಟ್ ವಿತರಣೆ ಮಾಡಬಹುದು ಅಥವಾ ನವೀಕರಣ, ಮರು ನೀಡುವಂತೆ ಪಾಸ್ ಪೋರ್ಟ್ ಕಾಯ್ದೆಯಲ್ಲಿ ಎಲ್ಲಿಯೂ ಹೇಳಿಲ್ಲ ಎಂದರು.

ಸೆಕ್ಷನ್ 6(2)(ಎಫ್) ಅಡಿಯಲ್ಲಿ ಪಾಸ್​ಪೋರ್ಟ್ ವಿತರಣೆಗೆ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮಗಳ ಪ್ರಕಾರ​​ ಕ್ರಿಮಿನಲ್​ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್ ಪೋರ್ಟ್ ನವೀಕರಣ ಅಥವಾ ಮರು ವಿತರಣೆ ನೀಡುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.