ಭವಾನಿ ರೇವಣ್ಣ ಕಾರು ಪ್ರಕರಣ; ಕಾರಿನ ಮಾಲೀಕರ ಹುಡುಕಾಟದಲ್ಲಿ.! ಬಿಬಿಎಂಪಿಯ ಗುತ್ತಿಗೆದಾರ ರೆಡ್ಡಿ ಯಾರು.?

ರಾಜ್ಯ

ಇತ್ತಿಚೆಗೆ ದೇವೇಗೌಡರವರ ಸೊಸೆ ಭವಾನಿ ರೇವಣ್ಣರವರು ಕಾರಿನಲ್ಲಿ ಪ್ರಯಾಣಿಯುವಾಗ ಬೈಕ್ ಸವಾರನೊಬ್ಬ ಕಾರಿಗೆ ಗುದ್ದಿದ್ದ ವೇಳೆ ಭವಾನಿ ರೇವಣ್ಣ ಬಹಳ ಗರಂ ಆಗಿದ್ದರು. ನೀನು ಸಾಯುವುದಕ್ಕೆ ನನ್ನ ಕಾರೇ ಬೇಕಿತ್ತಾ..? 50 ಲಕ್ಷ ಕೊಡಿ ಎಂದೆಲ್ಲಾ ಹೇಳಿದ ಮಾತಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಒಂದೂವರೆ ಕೋಟಿ ರೂಪಾಯಿ ಕಾರಿನ ಅಪಘಾತದ ಈ ಪ್ರಕರಣದ ಸುಖಾಂತ್ಯಕ್ಕೆ ದೇವೇಗೌಡ್ರ ಕುಟುಂಬ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಇದೀಗ ಒಂದೂವರೆ ಕೋಟಿ ಬೆಲೆಯ ಕಾರಿನ ಮಾಲೀಕ ಯಾರಿರಬಹುದು ಎಂಬುದರ ಬಗ್ಗೆ ಹುಡುಕಾಟ ಜೋರಾಗಿಯೇ ನಡೆಯುತ್ತಿದೆ. ಕಾರು ಯಾರದು..? ಕಾರಿನ ನಿಜವಾದ ಮಾಲೀಕನಿಗೂ ಭವಾನಿ ರೇವಣ್ಣ ಅವರಿಗೂ ಇರುವ ಸಂಬಂಧ ಯಾವುದು.? ಎಂಬ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ.

ಈ ಕಾರು Ashfra Infra Engineears Pvt Itd ಎಂಬ ಕಂಪನಿ ಹೆಸರಲ್ಲಿ ರಿಜಿಸ್ಟರ್​ ಆಗಿದೆ. ಈ ಕಂಪನಿ ಮುಖ್ಯಸ್ಥರಾಗಿರುವವರು ಪ್ರಭಾಕರ್​ ರೆಡ್ಡಿ ಮತ್ತು ಅಭಿಜಿತ್​​ ಅಶೋಕ್​ ಎಂಬಿಬ್ಬರು ಗುತ್ತಿಗೆದಾರರು. ಇವರು ಬಿಬಿಎಂಪಿ ಯಲ್ಲಿ ಕಂಟ್ರಾಕ್ಟರ್​ದಾರರು. ಒಂದೂವರೆ ಕೋಟಿ ಬೆಲೆಯ ಕಾರು ಟೊಯೋಟಾ ವೆಲ್ ಫೇರ್ ಆಗಿದೆ. ಇದೀಗ ಕಾರೀನ ಮಾಲೀಕರ ಹುಡುಕಾಟ ಶುರುವಾಗಿದೆ.