ರಾಜಧಾನಿ ಬೆಂಗಳೂರಿನಲ್ಲಿ ವೈಫ್ ಸ್ವಾಪಿಂಗ್ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಈ ಕೆಟ್ಟ ಸಂಸ್ಕೃತಿ ಬೆಂಗಳೂರಿನಲ್ಲೂ ಕೇಳಿ ಬಂದಿದೆ. ವೈಫ್ ಸ್ವಾಪಿಂಗ್ಗೆ ಪೀಡಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದ್ದಾರೆ. ಸ್ನೇಹಿತನ ಜೊತೆ ರಾತ್ರಿ ಕಳೆಯುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಪತಿ ವಿರುದ್ಧ ದೂರು ದಾಖಲಾಗಿದೆ.
ಬಸವನಗುಡಿ ನಿವಾಸಿ ತನ್ನ ಪತ್ನಿಯನ್ನು ತನ್ನ ಸ್ನೇಹಿತನ ಜೊತೆ ಕಾಲಕಳೆಯುವಂತೆ ಪೀಡಿಸುತ್ತಿದ್ದನು. ಇದಕ್ಕೆ ಒಪ್ಪದಿದ್ದಕ್ಕೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ ಎಂದು ಪತಿ ವಿರುದ್ಧ ಕಿರುಕುಳ, ಹಲ್ಲೆ ಆರೋಪ ಮಾಡಿ ಪತ್ನಿ ದೂರು ನೀಡಿದ್ದಾರೆ. ಗಂಡ ಹಾಗೂ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ.
![](https://i0.wp.com/specialnewsmedia.com/wp-content/uploads/2023/12/IMG-20231214-WA0008.jpg?resize=449%2C241&ssl=1)
ಬೆಂಗಳೂರು ಕಾಮಕ್ಷಿಪಾಳ್ಯದ ಪೂರ್ಣಚಂದ್ರರ ಎಂಬವರು ಮದುವೆಯಾದ ಅಂದಿನಿಂದಲೂ ವರದಕ್ಷಿಣೆ ವಿಚಾರವಾಗಿ ಕಿರುಕುಳ, ಗಂಡನ ಸಾಲ ತೀರಿಸಲು ತವರು ಮನೆಯಿಂದ 10 ಲಕ್ಷ ಹಣ ತರುವಂತೆ ಪೀಡಿಸುತ್ತಿದ್ದರು. ಹಣ ತರಲು ಒಪ್ಪದಿದ್ದಾಗ ಹಲ್ಲೆ ನಡೆಸಿ ಹಿಂಸೆ ಮಾಡುತ್ತಿದ್ದರು. ಇದರಿಂದ ನೊಂದು ಮಹಿಳೆಯ ಅಣ್ಣ ಎರಡು ಲಕ್ಷ ರೂ. ಹಣ ನೀಡಿದ್ದ. ಆದರಿಂದ ತೃಪರಾಗದ ಆರೋಪಿಗಳು ಎಂಟು ಲಕ್ಷ ಹಣ ನೀಡುವಂತೆ ಹಾಗಾಗ ಗಲಾಟೆಗಳು ನಡೆಸುತ್ತಿದ್ದರು. ಇದರ ನಡುವೆ ಇತ್ತೀಚೆಗೆ ಪತಿ ಪೂರ್ಣಚಂದ್ರ ತನ್ನ ಹೆಂಡತಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ತನ್ನ ಸ್ನೇಹಿತರೊಂದಿಗೆ ಬೆರೆಯಲು ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೈಫ್ ಸ್ವಾಪಿಂಗ್ ಅನ್ನೋದು ಪಾಶ್ಚಿಮಾತ್ಯ ದೇಶಗಳಲ್ಲಿನ ಕೆಟ್ಟ ಸಂಸ್ಕೃತಿ. ಸ್ನೇಹಿತರು ಸೇರುವ ಪಾರ್ಟಿಗಳಲ್ಲಿ ಪತಿ-ಪತ್ನಿ ಬದಲಾಯಿಸಿಕೊಳ್ಳುವುದು. ತನ್ನ ಹೆಂಡತಿಯನ್ನು ಸ್ನೇಹಿತರ ಜೊತೆಯು ಹೆಂಡತಿಯಂತೆ ಇರುವಂತೆ ಮಾಡುವುದು. ಅಥವಾ ಸ್ನೇಹಿತರ ಹೆಂಡತಿಗೆ ಗಂಡನಂತೆ ಇರುವುದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಕೆಟ್ಟ ಸಂಸ್ಕೃತಿ ರೂಢಿಯಲ್ಲಿದೆ. ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಇದು ದೊಡ್ಡ ಸದ್ದು ಮಾಡಿತ್ತು. ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿವೆ. ಇದೀಗ ಮಹಿಳೆಯೊಬ್ಬರು ತನ್ನ ಗಂಡನ ವಿರುದ್ಧವೇ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂತದ್ದೇ ಪ್ರಕರಣ ಮಂಗಳೂರಲ್ಲೂ ಸದ್ದು ಮಾಡಿತ್ತು ಈ ಬಗ್ಗೆ ಮಾಧ್ಯಮಗಳಲ್ಲೂ ವರದಿ ಮಾಡಲಾಗಿತ್ತು.