ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಅವಾಚ್ಯ ಶಬ್ದಗಳಿಂದ ‌ನಿಂದನೆ; ಬಿಜೆಪಿ ಕಾರ್ಯಕರ್ತನ ಮೇಲೆ ಪ್ರಕರಣ ದಾಖಲು

ರಾಜ್ಯ

ಬಜಪೆ: ಡಿಸೆಂಬರ್ 11 ಸೋಮವಾರದಂದು ಸಂಜೆ ಹೊತ್ತು ಬಿಜೆಪಿ ಕಾರ್ಯಕರ್ತ ಎನ್ನಲಾದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತೂರು ಗ್ರಾಮದ ಬೊಳಿಯ ನಿವಾಸಿ ಸಂತೋಷ್ ಪೂಜಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶ್ರೀ ನಾರಾಯಣ ಗುರು ಯುವ ವೇದಿಕೆ ಎಂಬ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ವಾಯ್ಸ್ ಬಿಟ್ಟಿದ್ದು, ಆ ವಾಯ್ಸ್ ಕ್ಲಿಪ್ ಗಳು ಇತರ ಹಲವಾರು ಗ್ರೂಪ್ ಗಳಲ್ಲೂ ವೈರಲ್ ಆಗಿತ್ತು ಎನ್ನಲಾಗಿದೆ.

ಈ ಬಗ್ಗೆ ಮುತ್ತೂರು ವಲಯದ ಕಾಂಗ್ರೆಸ್ ಅಧ್ಯಕ್ಷ ಹರಿಯಪ್ಪ ಎಂಬವರು ದಿನಾಂಕ 14-12-2023 ರಂದು ಬಜ್ಪೆ ಠಾಣೆಗೆ ದೂರು ನೀಡಿದ್ದರು. ಸದ್ರಿ ದೂರಿನಂತೆ ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ಬೋಳಿಯ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿ,ಅಪರಾಧ ಸಂಖ್ಯೆ 0198/2023 ರಂತೆ ಪ್ರಕರಣ ದಾಖಲಿಸಿರುತ್ತಾರೆ