ಬಜ್ಪೆ ಪೇಟೆಯ ಮುಖ್ಯ ರಸ್ತೆಯ ಕಾಮಗಾರಿ ನೆಪದಲ್ಲಿ ಲೋಕೋಪಯೋಗಿ ಇಲಾಖೆಯೊಂದಿಗೆ ಶಾಮೀಲಾಗಿ ಕಾಂಕ್ರಿಟ್ ಪ್ಲಾಂಟನ್ನು ಆರಂಭಿಸಿದ ಗುತ್ತಿಗೆದಾರರು,ಬಜ್ಪೆಯ ಒಂದು ಕಿ.ಮೀಟರ್ ಉದ್ದದ ಮುಖ್ಯರಸ್ತೆಯ ಕಾಮಗಾರಿಗೆ ಒಂದೂವರೆ ವರ್ಷ ತೆಗೆದುಕೊಂಡು, ಬೇರೆ ಊರಿನಲ್ಲಿ ಸಿಕ್ಕಿದ ಗುತ್ತಿಗೆಗೆ ಇಲ್ಲಿಂದಲ್ಲೇ ಕಾಂಕ್ರಿಟ್ ಮಿರ್ಸಿಂಗ್ ಸಾಗಿಸಿ ಬಜ್ಪೆ ನಾಗರಿಕರ ಕನಸನ್ನು ನುಚ್ಚು ನೂರು ಮಾಡಿದ ಲೋಕೋಪಯೋಗಿ ಇಲಾಖೆ ಮತ್ತು ಕಣ್ಣಿದ್ದರೂ ಕುರುಡರಂತೆ ವರ್ತಿಸಿದ ಬಜ್ಪೆ ಪಟ್ಟಣ ಪಂಚಾಯತಿನ ಅಧಿಕಾರಿಗಳು.
ಜನನಿಬಿಡ ಪ್ರದೇಶದಲ್ಲಿ ನಿರ್ಮಿಸಿದ ಈ ಕಾರ್ಖಾನೆಯನ್ನು ಮುಚ್ಚಬೇಕು ಎಂದು ಲೋಕಾಯುಕ್ತ ಇಲಾಖೆ ಸಾರ್ವಜನಿಕರ ದೂರಿನ ಮೇರೆಗೆ ಈಗಾಗಲೇ ಪಟ್ಟಣ ಪಂಚಾಯತಿಗೆ ನೋಟೀಸ್ ನೀಡಿದ್ದರು, ಪಟ್ಟಣ ಪಂಚಾಯತಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಾವುದೇ ಕ್ರಮ ಜರುಗಿಸದೆ ಕಣ್ಮುಚ್ಚಿ ಕುಳಿತು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವರೊಂದಿಗೆ ಕೈ ಜೋಡಿಸಿ ಅವರಿಗೆ ಸಹಕರಿಸುತ್ತಿದ್ದರು. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಸತತ ಹೋರಾಟ ಮಾಡುತ್ತಾ ಬಂದಿರುವ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ಇಂದು ಬಜ್ಪೆ ನಾಗರಿಕರ ಸಮ್ಮುಖದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಬಜಪೆ ಮುಖ್ಯ ರಸ್ತೆ ಕಾಮಗಾರಿ ಪೂರ್ತಿಗೊಳಿಸಿ ಅಥವಾ ಕಾಂಕ್ರಿಟ್ ಮಿಕ್ಸಿಂಗ್ ಪ್ಲಾಂಟನ್ನು ಮುಚ್ಚಿಸಿ ಎಂದು, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಖಾನೆಯ ಗೇಟಿಗೆ ಬಿಗ ಜಡಿದರು.
ಈ ಸಂದರ್ಭದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ಮಾತನಾಡಿ ಬಜ್ಪೆ ನಾಗರಿಕರು ಜೀವಂತದಲ್ಲಿ ಇದ್ದಾರೆ, ಯಾವ ಕಾರಣಕ್ಕೂ ಕಳಪೆ ಕಾಮಗಾರಿ ಮಾಡಲು ಬಿಡುವುದಿಲ್ಲ. ಸರಿಯಾದ ರಸ್ತೆ ಆಗುವವರೆಗೂ ನಮ್ಮ ಹೋರಾಟ ನಿರಂತರ ಮುಂದುವರಿಯುತ್ತದೆ ಎಂದು ಹೇಳಿದರು. ವೇದಿಕಯ ಸಹ ಸಂಚಾಲಕರದ ಇಸ್ಮಾಯಿಲ್ ಇಂಜಿನಿಯರ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್, ಮುಲ್ಕಿ-ಮೂಡಬಿದ್ರೆ ಐಟಿ ಸೆಲ್ ಅದ್ಯಕ್ಷರಾದ ನಿಸಾರ್ ಕರಾವಳಿ, ಗ್ರಾಮ ಪಂಚಾಯತ್ ಸದಸ್ಯರಾದ ಜೇಕಬ್ ಪಿರೇರಾ ಮತ್ತು ನಜೀರ್ ಕಿನ್ನಿಪದವು, SDPi ರಾಜ್ಯ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹಮೀದ್ ಕೂಲ್ ಪಾಯಿಂಟ್, ಸಂಶುಲ್ ಉಲಮಾ ಅಧ್ಯಕ್ಷರಾದ ಮೊನಕ, ಮುಖಂಡರಾದ ಇಕ್ಬಲ್ ಬಜ್ಪೆ ದಲಿತ ಸಂಘರ್ಷ ಸಮಿತಿಯ ಸದಸ್ಯರು, ಸಾಮಾಜಿಕ ಕಾರ್ಯಕರ್ತರು,
ಬಜ್ಪೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರು,ಆಟೋ ಚಾಲಕರ, ಮಾಲಕರ ಸಂಘದ ಮುಖಂಡರು ಹಾಗೂ ಹಲವು ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.