ತನ್ನ ಗೌಪ್ಯ ಆಪರೇಶನ್‌ಗಳಿಂದ ಖ್ಯಾತಿ ಪಡೆದ ಮೊಸಾದ್ ಸ್ಪೈ ಯ ಒಬ್ಬರನ್ನು ಗಲ್ಲಿಗೇರಿಸುತ್ತಿದ್ದೇವೆ ಅಂತ ಇರಾನ್ ಹೇಳಿಕೆ ನೀಡಿದೆ. ಅಮೆರಿಕದ CIA ಬಿಟ್ರೆ ಅತ್ಯಂತ ಗೌಪ್ಯ ಹಾಗೂ ಎದುರಾಳಿಗೆ ಸುಳಿವೇ ಸಿಗದಂತೆ ಆಪರೇಶನ್ ಮಾಡಿ ಮುಗಿಸೋ ಏಜೆನ್ಸಿ ಯಾವುದಾದರೂ ಇದ್ದರೆ ಇಸ್ರೇಲಿನ ಮೊಸಾದ್ ಮಾತ್ರ. ಈಗ ಆ ಮೊಸಾದ್‌ನ ಏಜೆಂಟ್ ಒಬ್ಬನನ್ನು ನೇಣಿಗೆ ಏರಿಸುತ್ತಿದ್ದೇವೆ ಅಂತ ಇರಾನ್ ಹೇಳಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
ಇರಾನಿ ಸಿಸ್ತಾನ್-ಬಲೂಚೆಸ್ತಾನ್ ಪ್ರಾಂತ್ಯದ ಜಾಹೆದಾನ್ ಜೈಲಲ್ಲಿ ಈ ಏಜೆಂಟನನ್ನು ಗಲ್ಲಿಗೇರಿಸಲಾಗಿದೆ ಅಂತ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಮೊಸಾದ್ ಸೇರಿ ಹಲವು ಅಂತರಾಷ್ಟ್ರೀಯ ಸಂಸ್ಥೆಗಳ ಜೊತೆ ಈತ ಸಂಪರ್ಕದಲ್ಲಿದ್ದ. ಇರಾನ್‌ನಲ್ಲಿ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಗಳು, ದಾಖಲೆಗಳನ್ನು ಸಂಗ್ರಹ ಮಾಡಿ ವಿದೇಶಗಳಿಗೆ ಕಳಿಸ್ತಿದ್ದ ಅಂತ ಇರಾನ್ ಆರೋಪಿಸಿದೆ. ಈ ವ್ಯಕ್ತಿಯ ಹೆಸರನ್ನಾಗಲಿ ಅಥವಾ ಯಾವಾಗ ಈತನನ್ನ ಬಂಧಿಸಲಾಗಿತ್ತು ಅನ್ನೋದನ್ನು ಬಹಿರಂಗಪಡಿಸಿಲ್ಲ. ಆದರೆ ಈತ ಇರಾನ್ ವಿರುದ್ಧದ ಗುಂಪುಗಳು ಹಾಗೂ ಸಂಸ್ಥೆಗಳಿಗಾಗಿ ಪ್ರಚಾರ ಮಾಡುತ್ತಿದ್ದ ಅಂತ ಇರಾನ್ ಹೇಳಿದೆ.
ಕಳೆದ 2022ರ ಏಪ್ರಿಲ್‌ನಲ್ಲಿ ಮೊಸಾದ್ ಸಂಬಂಧಿತ ಮೂವರು ಏಜೆಂಟ್‌ಗಳನ್ನುಬಂಧಿಸಿದ್ದಾಗಿ ಇರಾನ್ ಹೇಳಿತ್ತು. ಈಗ ಎಕ್ಸಿಕ್ಯೂಟ್ ಆಗಿರೋ ವ್ಯಕ್ತಿ ಈ ಮೂವರಲ್ಲೇ ಒಬ್ಬ ಇರಬಹುದು ಅಂತ ಶಂಕಿಸಲಾಗಿದೆ. ಅಂದ್ಹಾಗೆ ಇರಾನ್ ಇಸ್ರೇಲನ್ನ ಅಫಿಶಿಯಲ್ಲಾಗಿ ಶಿಫಾರಸ್ಸು ಮಾಡಿಲ್ಲ. ಅಲ್ಲದೇ ಲೆಬನಾನ್‌ನ ಹೆಜ್ಬೊಲ್ಲಾ ಹಾಗೂ ಹಮಾಸ್‌ಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದೆ. ಹಮಾಸ್‌ಗಳಿಗೆ ಫಂಡ್, ಶಸ್ತಾಸ್ತ್ರ ನೀಡೋದರಲ್ಲದೆ ಹಮಾಸ್ ಉಗ್ರರಿಗೆ ಟ್ರೈನಿಂಗ್ ಕೂಡ ಕೊಡುತ್ತೆ ಅಂತ ಹೇಳಲಾಗುತ್ತೆ.