2024ರ ಮಾರ್ಚ್ ಒಳಗಾಗಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ: ನಿತೀನ್ ಗಡ್ಕರಿ

ರಾಷ್ಟ್ರೀಯ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಗಾಗಿ ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್ ಬದಲಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ಶುಲ್ಕ ಪಾವತಿ ಸೌಲಭ್ಯವು ಸರಳ ಮತ್ತು ತ್ವರಿತ ಪ್ರಕ್ರಿಯೊಂದಿಗೆ ವಾಹನ ಮಾಲೀಕರಿಗೆ ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗುವ ನೀರಿಕ್ಷೆಗಳಿವೆ. 2024ರ ಮಾರ್ಚ್ ಒಳಗಾಗಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯು ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಪ್ರಸ್ತುತ ಜಾರಿಯಲ್ಲಿರುವ ಶುಲ್ಕ ಸಂಗ್ರಹ ವಿಧಾನವನ್ನು ಮತ್ತಷ್ಟು ಸರಳಗೊಳಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಈ ಹಿಂದೆ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಶುಲ್ಕ ಪಾವತಿಸಲು ಸರಾಸರಿ 8 ನಿಮಿಷ ಕಾಯಬೇಕಿದ್ದ ಪರಿಸ್ಥಿತಿಯನ್ನು ಫಾಸ್ಟ್ ಟ್ಯಾಗ್ ಸೌಲಭ್ಯದ ಮೂಲಕ 2021-22ರ ಅವಧಿಯಲ್ಲಿ ಸರಾಸರಿ ಕಾಯುವ ಸಮಯವನ್ನು 47 ಸೆಕೆಂಡುಗಳಿಗೆ ಇಳಿಸಲಾಗಿತ್ತು. ಇದೀಗ ಜಾರಿ ಬರುತ್ತಿರುವ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ಸೌಲಭ್ಯವು ತಡೆರಹಿತ ಚಾಲನೆ ಅನುಕೂಲ ಮಾಡಿಕೊಡಲಿದ್ದು, ಈ ಮೂಲಕ ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರವಾದ ದೂರಕ್ಕೆ ಮಾತ್ರ ವಾಹನ ಸವಾರರಿಗೆ ಶುಲ್ಕ ವಿಧಿಸುವ ಗುರಿಯನ್ನು ಹೊಂದಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತವಾಗಿ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು ಅಗತ್ಯವಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿದ್ದು, ಹೊಸ ಸೌಲಭ್ಯದ ಅಡಿಯಲ್ಲಿ ವಾಹನ ಮಾಲೀಕರು ಹೆದ್ದಾರಿ ಪ್ರವೇಶ ಮತ್ತು ನಿರ್ಗಮನದ ದೂರವನ್ನು ಆಧರಿಸಿ ಶುಲ್ಕ ಪಾವತಿಸಬೇಕಾಗುತ್ತದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಸೌಲಭ್ಯಕ್ಕಾಗಿ ಟ್ರ್ಯಾಕ್ ಮಾಡುವ ಸಾಧನವನ್ನು ಪ್ರತಿ ವಾಹನಗಳಲ್ಲೂ ಅಳವಡಿಸಬೇಕಿದ್ದು, ಈ ಸಾಧನವು ಮುಖ್ಯ ಶುಲ್ಕ ಸಂಗ್ರಹ ಸಾಧನದೊಂದಿಗೆ ಸಂಪರ್ಕಗೊಳ್ಳುವ ಮೂಲಕ ಟ್ರ್ಯಾಕ್ ಮಾಡುತ್ತದೆ. ಇದು ಸುಂಕ ಪಾವತಿಸಬೇಕಾದ ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳದ ನಡುವಿನ ಅಂತರವನ್ನು ಲೆಕ್ಕ ಹಾಕುವ ಮೂಲಕ ಟೋಲ್ ವಿಧಿಸುತ್ತದೆ.

ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಿದ್ದು, ಇವು ಪ್ರತಿಯೊಂದ ವಾಹನದ ಡೇಟಾ ಸಂಗ್ರಹಿಸಿ ಸಂಬಂಧಿತ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಗಾಗಿ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್ ಬದಲಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ಶುಲ್ಕ ಪಾವತಿ ಸೌಲಭ್ಯವು ಸರಳ ಮತ್ತು ತ್ವರಿತ ಪ್ರಕ್ರಿಯೊಂದಿಗೆ ವಾಹನ ಸವಾರರಿಗೆ ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗುವ ನೀರಿಕ್ಷೆಗಳಿವೆ. 2024ರ ಮಾರ್ಚ್ ಒಳಗಾಗಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯು ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಪ್ರಸ್ತುತ ಜಾರಿಯಲ್ಲಿರುವ ಶುಲ್ಕ ಸಂಗ್ರಹ ವಿಧಾನವನ್ನು ಮತ್ತಷ್ಟು ಸರಳಗೊಳಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.