ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ, ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜಪೆ ಠಾಣಾ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಳವಾರು ಕಡೆಯಿಂದ ಕಪ್ಪು ಬಣ್ಣದ ಯಮಹಾ ಬೈಕಿನಲ್ಲಿ ಮೂರು ಜನರನ್ನು ಕೂರಿಸಿಕೊಂಡು ಬರುತ್ತಿದ್ದನ್ನು ಕಂಡ ಪೊಲೀಸರು ಬೈಕ್ ನಿಲ್ಲಿಸುವಂತೆ ಸೂಚನೆ ನೀಡಿದಾಗ ಬೈಕ್ ಸವಾರರು ಬೈಕ್ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುವ ಸಮಯದಲ್ಲಿ ಬಜಪೆ ಪೊಲೀಸರು ಮೂರು ಮಂದಿಯನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಬೈಕಿನಲ್ಲಿ 30 ಸಾವಿರ ರೂಪಾಯಿ ಮೌಲ್ಯದ, 6.27 ಗ್ರಾಂ ಮಾದಕ ವಸ್ತು MDMA ಕ್ರಿಸ್ಟಲ್ ನ್ನು ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ನೀಡಿದ ಹೇಳಿಕೆ ಮೇರೆಗೆ ಆರೋಪಿತರ ವಶದಲ್ಲಿದ್ದ 6.27 ಗ್ರಾಂ ತೂಕದ ಮಾದಕ ವಸ್ತು MDMA ಹಾಗೂ 40 ಸಾವಿರ ರೂಪಾಯಿ ಮೌಲ್ಯದ ಬೈಕ್ ಸಮೇತ ಇತರ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಆರೋಪಿಗಳಾದ ಅಣ್ಣಪ್ಪಸ್ವಾಮಿ @ ಮನು, ವೆಂಕಟ್ರಮಣ ಶಾಲೆಯ ಬಳಿ, ಕುಳಾಯಿ, ಮೊಹಮ್ಮದ್ ಜುನೈದ್ @ ಜುನ್ನಿ GHSS ಉದ್ಯಾವರ ಶಾಲೆಯ ಬಳಿ, ಮಂಜೇಶ್ವರ ಹಾಗೂ ಎಂ.ಕೆ ಆಕಾಶ @ ಮಾದವ ಕೌಶಲ್ಯ ಆಕಾಶ ಪಡ್ಡಾಯಿ, ಹೊಸಬೆಟ್ಟು, ಕುಳಾಯಿ, ಮೂರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಲ್ಲಿ, DCP ಗಳಾದ ಶ್ರೀ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಗುರಪ್ಪಕಾಂತಿ, ರೇವಣಸಿದ್ದಪ್ಪ, ಕುಮಾರೇಶನ್, ಅಪರಾಧ ಪತ್ತೆ ವಿಭಾಗದ ASI ರಾಮ ಪೂಜಾರಿ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.