ಜೆಎನ್.1 ಆತಂಕಪಡುವ ಉಪತಳಿ ಅಲ್ಲ; ಸೋಂಕಿನಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೃತರಾಗಲಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ: WHO ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್

ಅಂತಾರಾಷ್ಟ್ರೀಯ

ದೇಶದಾದ್ಯಂತ ಮತ್ತೆ ಕೊರೊನಾ ಉದ್ಭವ ಭೀತಿ ಉಂಟಾಗಿದ್ದು, ಈಗಾಗಲೇ ಅಂದಾಜು ಮೂರು ಸಾವಿರದಷ್ಟು ಕೊರೊನಾ ಸೋಂಕಿತರು ದೇಶದಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ “ಜೆಎನ್‌.1 ಆತಂಕಕಾರಿ ಉಪತಳಿಯಾಗಿ ಮಾರ್ಪಟ್ಟಿಲ್ಲ. ಕೇವಲ ಆಸಕ್ತಿಕರ ಉಪತಳಿ ಎನಿಸಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದಿದ್ದಾರೆ.

“ಜನರು ಮುಂಜಾಗ್ರತೆ ವಹಿಸುವುದು ಮುಖ್ಯ. ಸುಖಾಸುಮ್ಮನೆ ಆತಂಕಪಡುವ ಅಗತ್ಯವಿಲ್ಲ. ಜೆಎನ್ 1 ಸೋಂಕಿನಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೃತರಾಗಲಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. ಓಮಿಕ್ರಾನ್ ಮಾದರಿಯಲ್ಲೇ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸುತ್ತಿವೆ. ಹಾಗಾಗಿ ಸೂಕ್ತ ಚಿಕಿತ್ಸೆ ಪಡೆದರೆ ಸಾಕಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.