ನರಸತ್ತ ಕಾಂಗ್ರೆಸ್ ಘಟಾನುಘಟಿ ನಾ(ಲ)ಯಕರು, ಅಲ್ಪಸಂಖ್ಯಾತ ಮುಖಂಡರು.!
ಅರವತ್ತಕ್ಕೆ ಅರಳು ಮರಳು ಅನ್ನುತ್ತಾರೆ. ಈ ಮಾತು ಕಲ್ಲಡ್ಕ ಭಟ್ಟರಿಗೆ ಅನ್ವಯವಾಗುವಂತಿದೆ. ಬಾಯಿ ತೆರೆದರೆ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರ ವಿರುದ್ಧ ವಾಚಾಮಗೋಚರವಾಗಿ ಬೈಯುವುದೇ ಕಾಯಕವಾಗಿಬಿಟ್ಟಿದೆ.
ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಿಂದಾಗಿ ತ್ರಿವಳಿ ತಲಾಕ್ ರದ್ದಾಗಿದೆ. ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ತ್ರಿವಳಿ ತಲಾಕ್ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಡಿಸೆಂಬರ್ 24 ಮಂಡ್ಯ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವಿಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ. ನಮ್ಮನ್ನ ಯಾಕೆ ಟಾರ್ಗೆಟ್ ಮಾಡುತ್ತಿರಾ? ಮೋದಿ ಸರ್ಕಾರ ಬಂದ ಮೇಲೆ ತಲಾಖ್ ಬಂತು. ಅವರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ ಎಂದು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಿದ್ದರೆ ಇನ್ನೊಂದು ಸಮುದಾಯದ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದರೆ ಕಾರ್ಯಕ್ರಮದಿಂದ ಇಳಿದು ಹೋಗುವಷ್ಟರಲ್ಲಿ ಪೊಲೀಸರು ಕ್ರಮ ಕೈಗೊಂಡು ಬಂಧಿಸುತ್ತಿದ್ದರು. ಕಲ್ಲಡ್ಕ ಭಟ್ಟರು ಅವಹೇಳನಕಾರಿ ಮಾತುಗಳನ್ನಾಡಿ 24 ಗಂಟೆ ಕಳೆದರೂ ಸರಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸುವ ಕೆಲಸ ಇನ್ನೂ ಮಾಡಿಲ್ಲ ಅನ್ನುವುದೇ ಖೇದಕರ.
ಬಂದರಿನ ಸಮಾಜಸೇವಕ ಝಾಕೀರ್ ವಾಟ್ಸಾಪ್ ನಲ್ಲಿ ಫೆಲೆಸ್ತೀನ್ ಬೆಂಬಲಿಸಿ ವಿಡಿಯೋ ಹರಿಯಬಿಟ್ಟಿದ್ದಕ್ಕೆ ಆತನ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಿತ್ತು. ಮುಖ್ಯಮಂತ್ರಿ, ಸ್ಪೀಕರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದಕ್ಕಾಗಿ ಮುಸ್ಲಿಂ ಸಂಘಟನೆಯೊಂದರ ಮುಖಂಡನ ಮೇಲೆಯೇ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಮೊಕದ್ದಮೆ ದಾಖಲಿಸುವುದು ಬಿಡಿ, ಕಾಂಗ್ರೆಸ್ ನಾಯಕರು ಕನಿಷ್ಠ ಪಕ್ಷ ಈ ಹೇಳಿಕೆಯನ್ನು ಖಂಡಿಸದಿರುವುದು ಇವರು ಯಾರಿಗೆ ಹೆದರುತ್ತಿದ್ದಾರೆ ಅನ್ನುವ ಪ್ರಶ್ನೆಯನ್ನು ಮುಸ್ಲಿಂ ಸಮುದಾಯ ವ್ಯಕ್ತಪಡಿಸುತ್ತಿದೆ.
ಕೆಲವು ವರ್ಷಗಳ ಹಿಂದೆ ಕರಾವಳಿಯಲ್ಲಿ ಪ್ರಭಾಕರ ಭಟ್ಟರನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದ ಕಾಂಗ್ರೆಸ್ ನಮ್ಮದೇ ಸರಕಾರ ಬಂದರೆ ಭಟ್ಟರನ್ನು ಜೈಲಿಗೆ ಹಾಕುವುದಾಗಿ ಹೇಳಿಕೆ ನೀಡಿದ್ದರು. ಅವತ್ತು ಖುದ್ದು ಸಿದ್ದರಾಮಯ್ಯ ಮಂಗಳೂರಿಗೆ ಬಂದು ಹೇಳಿಕೆ ಕೊಟ್ಟಿದ್ದರು. ಆದಾಗಿ ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಬಂಧಿಸುತ್ತೇವೆ ಅಂದಿದ್ದವರು ಕಮೀಷನರ್ ಕಚೇರಿ ಉದ್ಘಾಟನೆ ಗೆ ಭಟ್ಟರನ್ನೇ ರತ್ನಗಂಬಳಿ ಹಾಸಿ ಆತಿಥ್ಯ ನೀಡಿದ್ದರು. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ದೊಂಬಿ, ಗಲಾಟೆ ಎಬ್ಬಿಸುವ ಹೇಳಿಕೆ ದಿನನಿತ್ಯ ಪ್ರತಿಧ್ವನಿಸುತ್ತಿದೆ. ಕಾಂಗ್ರೆಸ್ ಸರಕಾರ ಕಾನೂನು ಮುರಿಯುವವರ ಮುಂದೆ ಶಸ್ತ್ರ ಕಳಚಿ ಶರಣಾಗತಿ ಘೋಷಿಸಿದೆ. ಚುನಾವಣೆ ಸಮಯದಲ್ಲಿ ಮುಸಲ್ಮಾನರನ್ನು ರಕ್ಷಿಸುತ್ತೇವೆ ಅಂದವರು ಮತೀಯವಾದಿಗಳನ್ನು ಜೋಡಿಸುವ ಹೇಳಿಕೆ ನೀಡುತ್ತಿದ್ದಾರೆ.
ಮುಸ್ಲಿಂ ಮಹಿಳೆಯರ ಬಗ್ಗೆ ಸುಖಾಸುಮ್ಮನೆ ವಿರೋಧಿಗಳು ಹೇಳಿಕೆ ನೀಡುತ್ತಿದ್ದರೂ ಕಾಂಗ್ರೆಸ್ ನಾಯಕರು ಅದೇ ಕಾಂಗ್ರೆಸ್ ಪಕ್ಷದಲ್ಲಿರುವ ಅಲ್ಪಸಂಖ್ಯಾತ ಮುಖಂಡರು ನರಸತ್ತಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಸರಕಾರ ಹಿಜಾಬ್ ಅನ್ನು ಯಾರಿಗೂ ಬೆದರದೆ ನಿಷೇಧ ಮಾಡಿ ತಮ್ಮ ಕೆಫಾಸಿಟಿ ತೋರಿಸಿತ್ತು. ಶೇಕಡಾ 90 ರಷ್ಟು ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದರೂ ವೇದಿಕೆಯಲ್ಲಿ ಹಿಜಾಬ್ ನಿಷೇಧ ಹಿಂತೆಗೆತ ಅನ್ನುವ ಹೇಳಿಕೆ ನೀಡುತ್ತಿದ್ದಾರೆ. ಮರುದಿನ ಉಲ್ಟಾ ಹೊಡೆಯುತ್ತಾರೆ. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಚರ್ಚೆ ನಡೆಯುತ್ತದೆ. ಈ ಬಗ್ಗೆ ಬಿಜೆಪಿಗರು ವಿರೋಧಿಸುತ್ತಾರೆ. ಮರುದಿನವೇ ಕಾಂಗ್ರೆಸ್ ನಾಯಕರಿಂದ ಅದು ಅಂತಿಮಗೊಂಡಿಲ್ಲ ಎಂಬ ಹೇಳಿಕೆ ನೀಡುತ್ತಾರೆ. ಅಸೆಂಬ್ಲಿಯಲ್ಲಿ ಸಾವರ್ಕರ್ ಭಾವಚಿತ್ರ ತೆಗೆಯಲು ಕಾಂಗ್ರೆಸ್ ಸಚಿವರೊಬ್ಬರು ಖಂಡಾತುಂಡವಾಗಿ ಹೇಳಿಕೆ ನೀಡುತ್ತಾರೆ. ಮರುದಿನ ಮುಖ್ಯಮಂತ್ರಿ ಅದು ಸ್ಪೀಕರ್ ಕರ್ತವ್ಯ ಎಂದು ಹೇಳಿ ನುಣುಚಿಕೊಳ್ಳುತ್ತಾರೆ. ಸ್ಪೀಕರ್ ನಮ್ಮದು ತೆಗೆಯುದಲ್ಲ, ಜೋಡಿಸುವುದು ಎಂದು ಹೇಳಿ ಸಾಫ್ಟ್ ಕಾರ್ನರ್ ಪ್ರದರ್ಶಿಸುತ್ತಾರೆ. ಕಾಂಗ್ರೆಸ್ ನಾಯಕರಿಗೆ ಮುಸ್ಲಿಮರಿಗೆ ಸಂಬಂಧಪಟ್ಟ ಇಶ್ಯೂವನ್ನು ದೊಡ್ಡದು ಮಾಡಿ ಮತ್ತೆ ವಿರೋಧ ಬಂದಾಗ ನುಣುಚಿಕೊಳ್ಳುವುದು ಇವರಿಗೆ ವಾಡಿಕೆ ಆಗಿದೆ. ಮುಸಲ್ಮಾನರು ಇವರ ರಾಜಕೀಯ ತೆವಲಿಗೆ ಬಲಿಪಶು ಆಗುತ್ತಿದ್ದಾರೆ ಅಷ್ಟೇ. ಹಿಜಾಬ್ ವಿಷಯದಲ್ಲಿ ಮುಖ್ಯಮಂತ್ರಿ ವಿರುದ್ಧ ಮಾತನಾಡಬೇಕಿದ್ದ ಭಟ್ಟರು ಮುಸ್ಲಿಮರ ವಿರುದ್ಧ ತಿರುಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಬಿಡಿ, ಕರಾವಳಿಯಲ್ಲಿ ಕನಿಷ್ಠ ಪಕ್ಷ ಕಾಂಗ್ರೆಸ್ ಘಟಾನುಘಟಿ ನಾಯಕರು, ಅಲ್ಪಸಂಖ್ಯಾತ ಮುಖಂಡರು, ಹತ್ತಾರು ಕಾಂಗ್ರೆಸ್ ಘಟಕಗಳು ಇದ್ದರೂ ಜುಜುಬಿ ಹೇಳಿಕೆ ನೀಡಲು ಹೆದರುತ್ತಿದ್ದಾರೆ ಅಂದರೆ ಇವರೆಲ್ಲ ಯಾರಿಗೆ ಅಡವಿಟ್ಟಿದ್ದಾರೆ? ಇತ್ತೀಚೆಗೆ ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದ ಯು.ಟಿ ಫರ್ಜಾನ ಒಬ್ಬರನ್ನು ಬಿಟ್ಟರೆ ಬೇರೆ ಯಾರೂ ಈ ಬಗ್ಗೆ ಸೊಲ್ಲೆತ್ತಿಲ್ಲ. ಕಾಂಗ್ರೆಸ್ಸಿನ ಅಲ್ಪಸಂಖ್ಯಾತರ ನಾಯಕರೆನಿಸಿಕೊಂಡವರು ಒಂದೂ ಮಾತನಾಡುತ್ತಿಲ್ಲ. ರಣ ಹೇಡಿಗಳು, ನರಸತ್ತವರಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಕಾಂಗ್ರೆಸಿನ ತುಂಡು ನಾಲಯಕರು ನರಸತ್ತಂತೆ ವರ್ತಿಸುತ್ತಿದ್ದಾರೆ. ಕೋಮವಾಸ್ಥೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಲಯಕರೆನಿಸಿಕೊಂಡವರಾದರೂ ಬಾಯಿ ತೆರೆಯಲಿ.
ಪಾಪ…ಕಲ್ಲಡ್ಕದ ಬುದ್ದಿ ಜೀವಿಗೆ ಮಾಹಿತಿಯ ಕೊರತೆಯೊ..ಅಥವಾ ಹರುಳು-ಮರುಳೊ..ಇಲ್ಲ ಉದ್ದೇಶ ಪೂರ್ವಕವಾಗಿ ಅವಿವೇಕಿತನದ ಪರಮಾವಧಿಯೊ ..ಒಂದು ಅರ್ಥವಾಗುತ್ತಿಲ್ಲ..? ಇತ್ತೀಚೆಗೆ ಭಟ್ರು ಬಾಗಲಕೋಟೆಯಲ್ಲೂ ಸಾಬ್ರು ದನ ಕಡಿಯುತ್ತಾರೆ ಎಂದು ರೀಲು ಬಿಟ್ರು.! ಇದೀಗ ಮಂಡ್ಯದಲ್ಲೂ ರೈಲು ಬಿಟ್ರು.!