ಬಡಗ ಎಡಪದವು ಗ್ರಾಮದ ಕಿನ್ನಿಮಜಲು ಚಂದನ್ ಉಪಾಧ್ಯಾಯ ಎಂಬವರ ಮೇಯಲು ಬಿಟ್ಟ ದನಗಳ ಪೈಕಿ ಎರಡು ಹಸು ಮತ್ತು ಒಂದು ಕರುವನ್ನು ಕಳವು ಮಾಡಿ ಮಾಂಸ ಮಾಡಿರುವ ಬಗ್ಗೆ ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಿನಾಂಕ 27-12-2023 ರಂದು ಬಜಪೆ ಪೊಲೀಸರು ಬೆಳಗ್ಗಿನ ಜಾವ PSI ಕುಮಾರೇಶನ್ ಹಾಗೂ ಸಿಬ್ಬಂದಿಗಳ ತಂಡ, ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವಿವಿಧ ಕಡೆ ಕಾರುಗಳಲ್ಲಿ ಹೋಗಿ ದನಗಳನ್ನು ಕಳವು ಮಾಡುತ್ತಿದ್ದ ಮೂಡುಬಿದ್ರೆಯ ಗಂಟಲಕಟ್ಟೆಯ ನಿವಾಸಿಗಳಾದ ನಾಸೀರ್ @ ನಾಚಿ ಮತ್ತು ಇಮ್ರಾನ್ ಇಬ್ರಾಹಿಂ ಎಂಬವರನ್ನು ಹಾಗೂ ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಸರಿ-ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ ಸಿಫ್ಟ್ ಕಾರು ಮತ್ತು ಬಿಳಿ ಬಣ್ಣದ ರಿಡ್ಜ್ ಕಾರುಗಳೊಂದಿಗೆ ಇನ್ನಿತರ ಸೊತ್ತುಗಳನ್ನು ವಶಪಡಿಸಿ, ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ದನ ಕಳವು ಮಾಡಿ ಹತ್ಯೆ ಮಾಡಿರುವ ತೋಡಾರು, ಹಂಡೇಲು, ಉಳಾಯಿಬೆಟ್ಟು ಮತ್ತು ಗಂಟಲಕಟ್ಟೆ ಪರಿಸರದ ಪ್ರಮುಖ ಆರೋಪಿತರ ಪತ್ತೆ ಕಾರ್ಯಚರಣೆ ಬಾಕಿಯಿದ್ದು ಉಳಿದವರ ಪತ್ತೆ ಕಾರ್ಯಕ್ಕೆ ವಿಶೇಷ ತಂಡ ರಚನೆ ಮಾಡಲಾಗಿರುತ್ತದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, DCP ಗಳಾದ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ರವರ ನಿರ್ದೇಶನದಂತೆ ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಕುಮಾರೇಶನ್, PSI ಗುರಪ್ಪ ಕಾಂತಿ, ರೇವಣಸಿದ್ದಪ್ಪ, ASI ರಾಮ ಪೂಜಾರಿ ಹಾಗೂ ಬಜಪೆ ಪೊಲೀಸ್ ಸಿಬ್ಬಂದಿಗಳು ಈ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.